Bank Balance:
ಒಂದು ಬಾರಿ ನಾವು ಉಳಿತಾಯ ಖಾತೆ(Savings Account)ಯನ್ನು ತೆರೆದ ನಂತರ ನಮ್ಮ ಎಲ್ಲಾ ಹಣಕಾಸಿನ ವಹಿವಾಟುಗಳು ಕೂಡ ಮಾನಿಟರ್(Monitor) ಆಗುತ್ತದೆ, ನಾವು ಬ್ಯಾಂಕಿನಲ್ಲಿ ಮಾಡಿದ ಎಲ್ಲಾ ಹೂಡಿಕೆ(Invest)ಗಳು ನಾವು ಪಡೆದುಕೊಂಡ ಹಣ(withdrawal Amount) ನಮಗೆ ಸಿಕ್ಕಿರುವ ಬಡ್ಡಿ(Intrest)ಗಳು ಹಾಗೂ ಎಲ್ಲಾ ಹಣಕಾಸಿನ ವಹಿವಾಟುಗಳು ತೆರಿಗೆ ಇಲಾಖೆಯ ವ್ಯಾಪ್ತಿಯ ಗಮನಕ್ಕೆ ಬಂದಿರುತ್ತದೆ, ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ನಾವು ಬ್ಯಾಂಕಿನಲ್ಲಿ ಹಣಕಾಸಿನ ವಹಿವಾಟು ನಡೆಸುವಾಗ ಯಾವುದೋ ಒಂದು ವಿಷಯದಲ್ಲಿ ಅಸರ್ಮಾಪಕತೆ ಉಂಟಾದಲ್ಲಿ ನಮಗೆ ನೋಟಿಸ್ (Notice) ಬರುತ್ತದೆ, ಈಗ ನಮ್ಮ ಮೂಲ ದಾಖಲೆಗಳಾದ ಆಧಾರ್ ಕಾರ್ಡ್(Adhar Card), ಪ್ಯಾನ್ ಕಾರ್ಡ್(Pan Card) ಎಲ್ಲಾ ಕಡೆ ಲಿಂಕ್ ಆಗಿರುವುದರಿಂದ ಯಾವುದೇ ಹಣಕಾಸಿನ ಸಂಸ್ಥೆಯ ಜೊತೆಗೆ, ನಮ್ಮ ಹಣಕಾಸಿನ ವಹಿವಾಟುಗಳನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ.
ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಬ್ಯಾಂಕ್ (Bank) ಆಗಲಿ ಅಥವಾ ಇತರ ಹಣಕಾಸಿನ ಸಂಸ್ಥೆ ಆಗಲಿ ನಮ್ಮ ಪಾನ್ ಕಾರ್ಡ್ ಇಲ್ಲದೆ ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ಮಾಡಲು ಅನುವು ಮಾಡಿಕೊಡುವುದಿಲ್ಲ.
ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಬಹುದು?
ನಾವು ಉಳಿತಾಯ ಖಾತೆ(Saving Account)ಯಲ್ಲಿ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿದಾಗ ನಮಗೆ ತೆರಿಗೆ ಇಲಾಖೆಯು ನೋಟಿಸ್ ನೀಡುತ್ತದೆ. ನಾವು ಎಷ್ಟು ಉಳಿತಾಯ ಖಾತೆ(Saving Account)ಯನ್ನು ಹೊಂದಿರಬೇಕು ಹಾಗೂ ಪ್ರತಿ ಉಳಿತಾಯದ ಖಾತೆಯಲ್ಲಿ ಎಷ್ಟು ಹಣ ಡೆಪಾಸಿಟ್(Deposit) ಮಾಡಬಹುದು ಎನ್ನುವ ಮಾಹಿತಿಯ ಬಗ್ಗೆ ಯಾವುದೇ ಮಿತಿಯನ್ನು ಆರ್ಬಿಐ(RBI) ಹೇರದೆ ಇದ್ದರು ತೆರಿಗೆ ಇಲಾಖೆ(Income Tax Department)ಯ ಗಮನಕ್ಕೆ ಈ ಎಲ್ಲ ವಿಷಯಗಳು ಬಂದೇ ಬರುತ್ತವೆ.
ಉಳಿತಾಯ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಸಂಬಳದ ಹೊರತಾಗಿ ನಾವೇನಾದರೂ ರೂ. 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಲ್ಲಿ, ಇದರ ಬಗ್ಗೆ ಸೂಕ್ತ ಕಾರಣಗಳನ್ನು ನಾವು ಕೊಡಬೇಕಾಗಿ ಬರುತ್ತದೆ, ಇದೇ ರೀತಿ ನಮ್ಮ ಉಳಿತಾಯ ಖಾತೆಯಿಂದ ಮಾಡುವ ನಮ್ಮ ಎಲ್ಲಾ ಎಫ್ ಡಿ (FD) ಹಾಗೂ ಆರ್ ಡಿ ಸೇವಿಂಗ್ಸ್ (RD Savings) ಕೂಡ ತೆರಿಗೆ ಇಲಾಖೆಯ ಅಡಿಯಲ್ಲಿ ಬರುತ್ತದೆ.
ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಇಟ್ಟರೆ ತೆರಿಗೆ ವಿನಾಯಿತಿ ದೊರೆಯಲಿದೆ?
ನಾವು ರಾಷ್ಟ್ರೀಕೃತ ಬ್ಯಾಂಕಿನಡಿಯಲ್ಲಿ ಉಳಿತಾಯ ಖಾತೆಯನ್ನು ತೆರೆದ ನಂತರ, ಪಡೆದುಕೊಳ್ಳುವ ಬಡ್ಡಿ(intrest)ಯು ಕೂಡ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುತ್ತದೆ, ಸಾಮಾನ್ಯ ಜನರಿಗೆ ಒಂದು ಆರ್ಥಿಕ ವರ್ಷದಲ್ಲಿ ರೂ 10,000ಗಳನ್ನು ಉಳಿತಾಯ ಖಾತೆ(Savings Account)ಯಲ್ಲಿ ಇಟ್ಟರೆ ಅದಕ್ಕೆ ತೆರಿಗೆ ವಿನಾಯಿತಿ ಇದೆ, ಇದೇ ರೀತಿ ಇದೇ ನಾಗರಿಕರಿಗೆ ಈ ಮಿತಿಯು ರೂ. 50,000 ಕ್ಕೆ ಹೆಚ್ಚಿಸಲಾಗಿದೆ, ಇದರ ಹೊರತಾಗಿ ಉಳಿತಾಯ ಖಾತೆಯಲ್ಲಿರುವ ಬೇರೆ ಮೊತ್ತಕ್ಕೆ ತೆರಿಗೆ ಅನ್ವಯಿಸುತ್ತದೆ.
ಈಗಿನ ಬ್ಯಾಂಕ್ ಬಡ್ಡಿ ದರ(Bank Intrest Rate)ಗಳ ಬಗ್ಗೆ ಮಾತನಾಡುವುದಾದರೆ, ಸಾರ್ವಜನಿಕ ವಲಯದ ಹಾಗೂ ಪ್ರಮುಖ ಖಾಸಗಿ ಬ್ಯಾಂಕುಗಳ ಉಳಿತಾಯ ಖಾತೆಯ ಮೇಲೆ ಶೇಕಡ 2.7 ರಿಂದ 4ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ, ಹೀಗಾಗಿ ನಾವು ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಇಟ್ಟಾಗ ಅಲ್ಲಿಯೂ ಕೂಡ ನಮ್ಮ ಆದಾಯ ದುಪ್ಪಟ್ಟಾಗುತ್ತದೆ, ನಮ್ಮ ಉಳಿತಾಯ ಖಾತೆಯಲ್ಲಿ ಸುಮಾರು ರೂ.10 ಕೋಟಿ ಇದೆ ಎಂದಾದಲ್ಲಿ, ಇದರ ಬಗ್ಗೆ ತೆರಿಗೆ ಇಲಾಖೆಯು ನಿಮ್ಮಿಂದ ಸರಿಯಾದ ಉತ್ತರಗಳನ್ನು ಅಪೇಕ್ಷಿಸುತ್ತದೆ, ಏನಾದರೂ ತಪ್ಪು ಮಾಹಿತಿ ನೀಡಿದ್ದಲ್ಲಿ ನಿಮ್ಮ ಮೇಲೆ ಕಾನೂನು ಕ್ರಮಗಳನ್ನು ಕೂಡ ಜಾರಿ ಮಾಡುವ ಸಂದರ್ಭವಿರುತ್ತದೆ, ಆದ್ದರಿಂದ ಸರಿಯಾದಂತಹ ದಾಖಲೆಗಳೊಂದಿಗೆ ಬ್ಯಾಂಕಿನಲ್ಲಿ ವ್ಯವಹರಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.