ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಉಳಿಕೆ ವೃಂದ ಹಾಗೂ ಹೈದರಾಬಾದ್ ಕರ್ನಾಟಕ ಉಳಿಕೆ ವೃಂದದಲ್ಲಿ ಹಲವು ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರತಿನಿತ್ಯ ಉಚಿತ ಉದ್ಯೋಗ ವಾರ್ತೆಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಬಳ್ಳಾರಿ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ, ಅಧಿಕೃತ ಅಧಿಸೂಚನೆಯೂ ಬಿಡುಗಡೆಯಾಗಿದೆ, ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆ, ವಯೋಮಾನ ಪ್ರಕ್ರಿಯೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು, ಆಯ್ಕೆಯ ವಿಧಾನ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು:
ಇಲಾಖೆಯ ಹೆಸರು | ಬಳ್ಳಾರಿ ಜಿಲ್ಲಾ ನ್ಯಾಯಾಲಯ ಘಟಕ |
ಹುದ್ದೆಯ ಹೆಸರು | ಬೆರಳಚ್ಚುಗಾರರು ಹಾಗೂ ಬೆರಳಚ್ಚು ನಕಲುಗಾರರು |
ಉದ್ಯೋಗ ಸ್ಥಳ | ಬಳ್ಳಾರಿ |
ಖಾಲಿ ಇರುವ ಹುದ್ದೆಗಳು | 21 |
ವೇತನ ಶ್ರೇಣಿ | ಅಧಿ ಸೂಚನೆಯ ಪ್ರಕಾರ |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ ಮುಖಾಂತರ |
ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಹಾಗೂ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿದರೆ ಒಳ್ಳೆಯದು, ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಖಾಲಿ ಇರುವ ಹುದ್ದೆಗಳು:
ಬಳ್ಳಾರಿ ಜಿಲ್ಲಾ ನ್ಯಾಯಾಲಯ ಘಟಕವು ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 21 ಬೆರಳಚ್ಚುಗಾರ ಹಾಗೂ ಬೆರಳಚ್ಚು ನಕಲುಗಾರ ಹುದ್ದೆಗಳು ಖಾಲಿ ಇವೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳ ವಿವರ:
- ಬೆರಳಚ್ಚುಗಾರರು : 13
- ಬೆರಳಚ್ಚು ನಕಲುಗಾರರು : 08
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ, ಡಿಪ್ಲೋಮಾ ಇಲ್ಲವೇ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಹಾಗೂ ಇಂಗ್ಲಿಷ್ ಹಿರಿಯ ಶ್ರೇಣಿಯ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಾನ ಪ್ರಕ್ರಿಯೆ:
ಬಳ್ಳಾರಿ ಜಿಲ್ಲಾ ನ್ಯಾಯಾಲಯ ಘಟಕವು ಹೊರಡಿಸಿದ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠವಾಗಿ 35 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ:
- ಪ್ರವರ್ಗ 2A, 2B, 3A, 3B, ಅಭ್ಯರ್ಥಿಗಳಿಗೆ 03 ವರ್ಷಗಳ ಕಾಲ,
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆಯನ್ನು ಮಾಡಲಾಗಿದೆ.
ಅರ್ಜಿ ಶುಲ್ಕದ ವಿವರಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು,
- ಪ್ರವರ್ಗ 2A, 2B, 3A, 3B, ಅಭ್ಯರ್ಥಿಗಳು ರೂ.250/-
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು.
- ಅಭ್ಯರ್ಥಿಗಳು ಅರ್ಜಿ ಶುಲ್ಕ ಆನ್ಲೈನ್ ಮುಖಾಂತರ ಪಾವತಿಸಬೇಕು.
ಶುಲ್ಕ ಪಾವತಿಸುವ ವಿಧಾನಗಳು:
- ಯುಪಿಐ (UPI)
- ನೆಟ್ ಬ್ಯಾಂಕಿಂಗ್ (NET BANKING)
- ಕ್ರೆಡಿಟ್ ಕಾರ್ಡ್ (CREDIT CARD)
- ಡೆಬಿಟ್ ಕಾರ್ಡ್ (DEBIT CARD)
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ | 06 ಎಪ್ರಿಲ್ 2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 06 ಮೇ 2024 |
ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದುವ ಮುಖಾಂತರ, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಮೊದಲನೇದಾಗಿ ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಒಳ್ಳೆಯದು.
- ಅರ್ಜಿ ಸಲ್ಲಿಸುವ ದಿನಾಂಕವು 06 ಏಪ್ರಿಲ್ 2014 ರಿಂದ ಆರಂಭವಾಗಿ 06 ಮೇ 2024ರ ವರೆಗೆ ಜಾತಿಯಲ್ಲಿ ಇರುತ್ತದೆ.
- ಅಭ್ಯರ್ಥಿಯು ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗೆ ಸಲ್ಲಿಸಬೇಕು, ನಂತರ ಸಲ್ಲಿಸಿದ ಯಾವುದೇ ಅರ್ಜಿಯನ್ನು ಪರಿಗಣಿಸುವುದಿಲ್ಲ.
- ಅರ್ಜಿ ಸಲ್ಲಿಸುವಾಗ ಅಧಿಕೃತ ಲಿಂಕ್ ಇಲ್ಲವೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
- ಮೊದಲು ಅಧಿಕೃತ ಲಿಂಕ್ ಮೂಲಕ ಭೇಟಿ ನೀಡಿದಾಗ, ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ.
- ಅಧಿಕೃತ ಪೇಜ್ ನ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಇಟ್ಟುಕೊಳ್ಳಿ.
- ನಂತರ ಎಲ್ಲ ದಾಖಲೆಗಳನ್ನು ಸರಿಯಾಗಿ ಲಗತ್ತಿಸಬೇಕು.
- ಲಗತ್ತಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ದಾಖಲಾತಿಗಳ ಜೊತೆಗೆ ಅಭ್ಯರ್ಥಿಯ ಸಹಿ ಭಾವಚಿತ್ರ ಹಾಗೂ ಹೆಬ್ಬೆರಳಿನ thumb ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಲಗತ್ತಿಸಿದ ಎಲ್ಲಾ ದಾಖಲೆಗಳನ್ನು ಪುನಃ ಪರಿಶೀಲಿಸಿ ಏನಾದ್ರೂ ತಪ್ಪಿದ್ದಲ್ಲಿ ಸರಿಪಡಿಸಬೇಕು.
- ಕೊನೆಯಲ್ಲಿ ನಿಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಿ ಅಗತ್ಯವಿದ್ದರೆ ಮಾತ್ರ.
- ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ, ನಿಮ್ಮ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
- ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಅಭ್ಯರ್ಥಿಯು ಅರ್ಜಿಯನ್ನು ನಿಗದಿಪಡಿಸಿದ್ದ ಕೊನೆಯ ದಿನಾಂಕವಾದ 06 ಮೇ 2024ರ ಒಳಗೆ ಸಲ್ಲಿಸಬೇಕು ನಂತರ ಸಲ್ಲಿಸಿದೆ ಯಾವುದೇ ಅರ್ಜಿಯನ್ನು ಪರಿಗಣಿಸುವುದಿಲ್ಲ.
- ನಂತರ ನೀವು ಸಲ್ಲಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ ಪರೀಕ್ಷೆ ಯ ಸಮಯದಲ್ಲಿ ನಿಮಗೆ ಸಹಕಾರಿಯಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೇಲಿನ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆತ್ಮೀಯ ಸ್ಪರ್ಧಾರ್ಥಿಗಳೇ, ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸ ಬಯಸಿದರೆ ಈಗಿನಿಂದಲೇ ಸರಿಯಾದ ಅಧ್ಯಯನವನ್ನು ನಡೆಸುವುದು ಒಳ್ಳೆಯದು, ಏಕೆಂದರೆ ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಇಲ್ಲದಿದ್ದಲ್ಲಿ ನೀವು ಸಲ್ಲಿಸಿದ ಅರ್ಜಿ ನಮೂನೆಗೆ ಯಾವುದೇ ಇಲ್ಲದಂತಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ಅಧ್ಯಯನ ನಡೆಸಿ ಪರೀಕ್ಷೆ ಕೇಂದ್ರಕ್ಕೆ ತೆರಳಿ, ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಿ.
ಆಯ್ಕೆಯ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ, ನೇರ ನೇಮಕಾತಿ ಮತ್ತು ಬೆರಳಚ್ಚು ಕೌಶಲ್ಯವನ್ನು ಮಾಡಿಕೊಳ್ಳುವ ಮೂಲಕ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ:
ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂಪಾಯಿ 21,400 ರಿಂದ 42,000 ದವರೆಗೆ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್ಸೈಟ್ | ballari.dcourts.gov.in |
ಅಧಿಕೃತ ಅಧಿಸೂಚನೆ(Nhk) | ಡೌನ್ಲೋಡ್ ಮಾಡಿಕೊಳ್ಳಿ |
ಅಧಿಕೃತ ಅಧಿಸೂಚನೆ(HK) | ಡೌನ್ಲೋಡ್ ಮಾಡಿಕೊಳ್ಳಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ. |
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲಿನ ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ಇಲ್ಲವೇ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ನೇಮಕಾತಿಯಲ್ಲಿ ನಡೆಯುವ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಂಡು ಸರಿಯಾಗಿ ಅಧ್ಯಯನವನ್ನು ನಡೆಸಿ.
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಯನ್ನು ಒದಗಿಸುವುದಿಲ್ಲ.
ನಾವು ಈ ವೆಬ್ ಸೈಟ್ ರಚಿಸಿರುವ ಹಿಂದಿನ ಉದ್ದೇಶವೇನೆಂದರೆ ನಿಮ್ಮಿಂದ ಯಾವುದೇ ರೀತಿ ಹಣವನ್ನು ತೆಗೆದುಕೊಳ್ಳುವುದು ಅಲ್ಲ, ನಮ್ಮೆಲ್ಲ ಮಾಹಿತಿಯನ್ನು ಓದಲು ನೀವು ಯಾವುದೇ ರೀತಿಯಾದ ಹಣವನ್ನು ನೀಡಬೇಕಾಗಿಲ್ಲ, ಎಲ್ಲ ಮಾಹಿತಿ ನಿಮಗೆ ಉಚಿತವಾಗಿ ತಲುಪಿಸುತ್ತೇವೆ. ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನು ಒದಗಿಸುವುದು ನಮ್ಮ ವೆಬ್ಸೈಟ್ನ ಪ್ರಮುಖ ಉದ್ದೇಶವಾಗಿದೆ.
ಇದನ್ನು ಸಹ ಓದಿ:
- Karnataka Revenu Department Recruitment: ಕಂದಾಯ ಇಲಾಖೆ ನೇಮಕಾತಿ 2024
- KIOCL RECRUITMENT| ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
- GOVT UPDATES : ಕೃಷಿ ಸಿಂಚಾಯಿ: ರೈತರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ! ಅರ್ಜಿದಾರರಿಗೆ ಬಂಪರ್ ಅವಕಾಶ