ಸರ್ಕಾರ ಎಲ್ಲಾ ಬಡವರ್ಗದ ಜನರಿಗೆ ಮೂಲಭೂತ ಆಹಾರ ಪದಾರ್ಥಗಳು ಸಿಗುವಂತಾಗಬೇಕು ಎಂದು ಆಹಾರ ಇಲಾಖೆಯ ಮೂಲಕ ಬಡವರಿಗೆ ಆಹಾರ ಧಾನ್ಯಗಳ ವಿತರಣೆಯನ್ನು ಮಾಡಲಾಗುತ್ತದೆ. ಸರ್ಕಾರವು ಅಂತ್ಯೋದಯ ಹಾಗೂ ಬಿಪಿಎಲ್ (BPL CARD) ಕಾರ್ಡ್ ಹೊಂದಿರುವ ರಾಜ್ಯದ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದೇ ರೀತಿ ನೂತನವಾಗಿ ಜಾರಿಯಲ್ಲಿರುವ ಸರ್ಕಾರವು, ಅನ್ನಭಾಗ್ಯ ಯೋಜನೆಯ (Anna Bhagya Yojana) ಮೂಲಕ ಹೆಚ್ಚುವರಿ ಹಕ್ಕಿಯ ಬದಲಾಗಿ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿದೆ,ಇದೇ ತರದ ಉಚಿತ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು, ಇಲ್ಲಿ ಕ್ಲಿಕ್ ಮಾಡಿ.
ಈಗ ರಾಜ್ಯದಲ್ಲಿ ಜಾರಿ ಇರುವ ಸರ್ಕಾರವು, ಅಭಿವೃದ್ಧಿಪಡಿಸಿದ ಅನ್ನ ಭಾಗ್ಯ ಯೋಜನೆ (Anna Bhagya Money) ಯ ಸೌಲಭ್ಯವನ್ನು ಅನೇಕ ಜನರು ಪಡೆದುಕೊಳ್ಳುತ್ತಾರೆ. ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ಫಲಾನುಭವಿಗಳಿಗೆ ಕೆಜಿಗೆ.34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣವನ್ನು ಕುಟುಂಬದ ಯಜಮಾನಿಯ ಖಾತೆಗೆ ಜಮಾ ಮಾಡುತ್ತಿದ್ದು, ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಜಮಾ ಮಾಡುತ್ತಿದೆ.
ಮಾರ್ಚ್ ತಿಂಗಳ ಅನ್ನ ಭಾಗ್ಯ ಹಣ ಜಮಾ:
ಅನ್ನಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಜನವರಿ ತಿಂಗಳ ವರೆಗೆ ಅನ್ನ ಭಾಗ್ಯ ಹಣ ಜಮೆಯಾಗಿದೆ, ಆದರೆ ಕೆಲವು ಫಲಾನುಭವಿಗಳಿಗೆ ಜನವರಿ ತಿಂಗಳ ಹಣ ಜಮೆಯಾಗಿಲ್ಲ, ಅವರಿಗೆ ಜನವರಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನ ಹಣವು ಕೂಡ ಈ ತಿಂಗಳ ಕೊನೆಯಲ್ಲಿ ಜಮೆಯಾಗುವುದು ಎಂದು, ಆಹಾರ ಇಲಾಖೆಯು ಮಾಹಿತಿಯನ್ನು ಹೊರಡಿಸಿದೆ. ಕೆಲವಷ್ಟೇ ಫಲಾನುಭವಿಗಳಿಗೆ ಈ ತಿಂಗಳ ಹಣವು ಕೂಡ ಜಮೆಯಾಗಿದ್ದು, ಹಂತ ಹಂತವಾಗಿ ಎಲ್ಲರ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಹಣವು ಬಿಡುಗಡೆಯಾಗಲಿದೆ.
ಅನ್ನಭಾಗ್ಯ ಹಣ ಚೆಕ್ ಮಾಡುವುದು ಹೇಗೆ?
- ಮೊದಲನೇಯದಾಗಿ ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು.
- ನಂತರ ಕೆಳಭಾಗದಲ್ಲಿರುವ ‘ನೇರ ನಗದು ವರ್ಗಾವಣೆಯ ಸ್ಥಿತಿ’ (STATUS OF DBT) ಮೇಲೆ ಕ್ಲಿಕ್ ಮಾಡಿ.
- ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ, ಅಲ್ಲಿ ಕೇಳಲಾಗಿರುವ ವರ್ಷ ತಿಂಗಳು ಹಾಗೂ ನಿಮ್ಮ ರೇಷನ್ ಕಾರ್ಡನ್ನು ನಮೂದಿಸಿ, ಅನ್ನಭಾಗ್ಯ ಹಣದ ವರ್ಗಾವಣೆ ಸ್ಥಿತಿಯನ್ನು ಕಂಡುಕೊಳ್ಳಿ.
ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು:
ಆಹಾರ ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳ ರೇಷನ್ ಕಾರ್ಡ್ ಅನ್ನು ಪರಿಶೀಲನೆ ಮಾಡಿ ಮಾರ್ಚ್ 31ರ ಒಳಗೆ ಎಲ್ಲಾ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ಏಪ್ರಿಲ್ ಒಂದರ ನಂತರ ಹೊಸ ಪಡಿತರ ಚೀಟಿಗೆ ನೂತನ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿಯನ್ನು ನೀಡಿದ್ದಾರೆ.
ಅನ್ನಭಾಗ್ಯ ಹಣದ ಮುಂದಿನ ಅಪ್ಡೇಟ್ಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ನಮ್ಮ ಗ್ರೂಪಿನ ಅಧಿಕೃತ ಲಿಂಕ್ ಅನ್ನು ಕೆಳಭಾಗದಲ್ಲಿ ನೀಡಲಾಗಿರುತ್ತದೆ.