ನೀವೂ ಈಗಾಗಲೇ ತಿಳಿದಿರುವ ಹಾಗೆ, ಎಲೆಕ್ಟ್ರಿಕ್ ವಾಹನಗಳ ಯುವ ಆರಂಭವಾಗಿದೆ. ಇನ್ನು ನಿಮ್ಮ ನೆಚ್ಚಿನ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕೂಡ ಎಲೆಕ್ಟ್ರಿಕ್ ರೂಪಾಂತರವನ್ನಾಗಿ ಮಾಡಬಹುದು. ಇದಕ್ಕೆ ನಾವೆಲ್ಲರೂ ಪ್ರಮುಖವಾಗಿ GoGoA1 ಸಂಸ್ಥೆಗೆ ಕೃತಜ್ಞತೆಯನ್ನು ಹೇಳಬೇಕಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮ ಹೀರೋ ಸ್ಪ್ಲೆಂಡರ್ ಬೈಕನ್ನು (Hero Splendor Bike) ಎಲೆಕ್ಟ್ರಿಕ್ ಬೈಕನ್ನಾಗಿ ಪರಿವರ್ತಿಸಿಕೊಳ್ಳಬಹುದು. ಹಾಗೆಯೇ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
GoGoA1 ಹೀರೋ ಸ್ಪ್ಲೆಂಡರ್ ಕನ್ವರ್ಷನ್ ಕಿಟ್ ಎಂದರೆ ಏನು?
• ನಿಮ್ಮ ಹೀರೋ ಸ್ಪ್ಲೆಂಡರ್ ನಲ್ಲಿರುವಂತಹ ಹಳೆಯ ಪೆಟ್ರೋಲ್ ಇಂಜಿನ್ ಅನ್ನು ಪವರ್ಫುಲ್ ಆಗಿರುವಂತಹ ಎಲೆಕ್ಟ್ರಿಕ್ ಮೋಟಾರ್ ದಿಗೆ ರಿಪ್ಲೈ ಮಾಡಲಾಗುತ್ತದೆ. ಇದರ ಜೊತೆಗೆ ಹೈ ಕೆಪ್ಯಾಸಿಟಿ ಬ್ಯಾಟರಿ ಫ್ಯಾಕ್ (Battery Pack), ಕಂಟ್ರೋಲರ್ ಯೂನಿಟ್ (Controler Unit) ಹಾಗೂ ಬೇಕಾಗಿರುವಂತಹ ಇನ್ನಿತರ ವೈರಿಂಗ್ ಕಂಪೊನೆಂಟ್ ಗಳನ್ನು ಅಳವಡಿಸಲಾಗುತ್ತದೆ.
• RTO ಈಗಾಗಲೇ ಕನ್ವರ್ಷನ್ kit ಜೊತೆಗೆ ರಸ್ತೆಗಳಲ್ಲಿ ಚಲಿಸುವಂತಹ ವಾಹನಗಳನ್ನು ಅಪ್ರೂವ್ ಮಾಡಿರುವುದರಿಂದಾಗಿ ನಿಮಗೆ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಇರುವುದಿಲ್ಲ.
• ಈ ಕಿಟ್ ಮೂಲಕ ನಿಮಗೆ ಕಡಿಮೆ ಅಂದರೂ, ಸಿಂಗಲ್ Charge ಮಾಡಿದರೆ,151km ಗಳ Long Range ನೀಡುವುದರಿಂದಾಗಿ ನೀವು ಲಾಂಗ್ ಟ್ರಿಪ್ ಮಾಡುವುದಕ್ಕೆ ಕೂಡ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.
• ಕಿಟ್ ನ ಬೆಲೆಯ ಬಗ್ಗೆ ಮಾತನಾಡುವುದಾದರೆ, ರೂ.35,000 ಹೊರಗೆ ಇರುತ್ತದೆ, ಹಾಗೂ ಇದರ ಜೊತೆಗೆ ಬ್ಯಾಟರಿ ಫ್ಯಾಕ್ ಅನ್ನು ಲೆಕ್ಕ ಲೆಕ್ಕ ಹಾಕಿದರೆ ಒಟ್ಟಾರೆಯಾಗಿ ನೀವು ಇದನ್ನು ರೂ.95,000 ಗಳ ಬೆಲೆಯಲ್ಲಿ ಖರೀದಿ ಮಾಡಬೇಕಾಗಿರುತ್ತದೆ.
ಕಿಟ್ ನ ಬೇಡಿಕೆ ಹೆಚ್ಚಾಗಿರುವುದಕ್ಕೆ ಕಾರಣ ಏನು?
• ಇದಕ್ಕಿರುವಂತಹ ಮೊದಲ ಹಾಗೂ ಪ್ರಮುಖ ಸಾಮಾನ್ಯ ಕಾರಣ ಅಂದರೆ ಅದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೆಟ್ರೋಲ್ ಬೆಲೆ ಆಕಾಶವನ್ನು ತಲುಪಿದೆ, ಪೆಟ್ರೋಲ್(Petrol) ಖರ್ಚಿನಿಂದ ತಪ್ಪಿಸಿಕೊಳ್ಳಲು ಹಾಗೂ ಕಡಿಮೆ ಖರ್ಚಿನಲ್ಲಿ ಪ್ರಯಾಣವನ್ನು ಮಾಡಬಹುದಾದಂತಹ ಎಲೆಕ್ಟ್ರಿಕ್ (Electric) ಅನ್ನು ಇಂಧನ ರೂಪದಲ್ಲಿ ವಾಹನ ಚಲಾವಣೆಗೆ ಬಳಸಬಹುದಾಗಿದೆ.
• ಈಗಾಗಲೇ ಸಮಾಜದಲ್ಲಿ ಹೇರಳವಾಗಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ತಮ್ಮನ್ನು ಹಾಗೂ ಸಮಾಜವನ್ನು ರಕ್ಷಿಸುವುದಕ್ಕಾಗಿ ಪರಿಸರ ಸ್ನೇಹಿ ಆಗಿರುವಂತಹ ಎಲೆಕ್ಟ್ರಿಕ್ ವಾಹನವನ್ನು (Electric Vehicles) ಬಳಸುತ್ತಿದ್ದಾರೆ.
• ಹಳೆಯ ಹೀರೋ ಸ್ಪ್ಲೆಂಡರ್ ಮಾಡೆಲ್ ಗಳ ಲೈಫ್ ಅನ್ನು ಇನ್ನಷ್ಟು ಹೆಚ್ಚು ವಿಸ್ತರಿಸುವುದಕ್ಕಾಗಿ, ಖಂಡಿತವಾಗಿ ಇದೊಂದು ಅತ್ಯಂತ ಉಪಯುಕ್ತವಾದಂತ kit ಆಗಿದೆ, ಅದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.
GoGoA1 ಸಂಸ್ಥೆ ಈಗಾಗಲೇ ಭಾರತ ದೇಶದಲ್ಲಿ ಐವತ್ತಕ್ಕೂ ಹೆಚ್ಚಿನ ಪ್ರಾಂಚೈಸಿಗಳಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರಿಗೆ ಬೇಕಾಗಿರುವಂತಹ ಎಲ್ಲಾ ರೀತಿಯ ಸರ್ವಿಸ್ ಗಳನ್ನು ಕೂಡ ನೀಡುವುದಕ್ಕೆ ಮುಂದಾಗಿದೆ. ಇದೇ ರೀತಿಯಲ್ಲಿ ಕಂಪನಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಾರಿಗೆ ಇಂಡಸ್ಟ್ರಿ ಅನ್ನೋದು ಇನ್ನಷ್ಟು ವೇಗವಾಗಿ ಬೆಳೆಯುವುದಕ್ಕೆ ಕೂಡ ಸಹಾಯವಾಗುವ ರೀತಿಯಲ್ಲಿ ಸದ್ಯದ ಮಟ್ಟಿಗೆ ತನ್ನ ಬೆಳವಣಿಗೆಯ ದಿಕ್ಕನ್ನು ಈ ರೀತಿಯಾಗಿ ಆಯ್ಕೆ ಮಾಡಿಕೊಂಡಿದೆ.
ಮುಖ್ಯವಾಗಿ ನೀವು ಗಮನವಹಿಸಬೇಕಾಗಿರುವುದು.
ನೀವು Electric Conversation Kit ಹಾಕೋದಕ್ಕಿಂತ ಮುಂಚೆ ಅದರ ಬೆಲೆ ಹಾಗೂ ನಂತರ ವಹಿಸಬೇಕಾಗಿರುವ ಹಣ ಹಾಗೂ ಇದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ, ನಂತರ ಈ ಕಿಟ್ ಅಳವಡಿಸಿಕೊಳ್ಳುವುದು ಒಳ್ಳೆಯದು. ವೈಜ್ಞಾನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.