ಮಾವಿನ ಹಣ್ಣು ಎಂದರೆ ಎಲ್ಲರಿಗೂ ತುಂಬಾ ಇಷ್ಟವಾದ ಹಣ್ಣು, ಇದು ತುಂಬಾ ರುಚಿಕರವಾಗಿರುತ್ತದೆ. ಬೇಸಿಗೆಯಲ್ಲಿ ಮಾವಿನ ಹಣ್ಣು ಎಲ್ಲಾ ಕಡೆಯೂ ರಾರಾಜಿಸುತ್ತಿರುತ್ತದೆ. ನಮ್ಮ ದೇಶದಲ್ಲಿ ಸಾವಿರಾರು ಬಗೆಯ ಮಾವಿನ ಹಣ್ಣುಗಳು ಸಿಗುತ್ತದೆ, ನಾವು ಮಾವಿನ ಹಣ್ಣನ್ನು ಕೊಂಡುಕೊಳ್ಳಲು ಪೇಟೆಗೆ ತೆರಳುತ್ತೇವೆ, ಆದರೆ ಮನೆಯ ಬಾಗಿಲಿಗೆ ಮಾವಿನಹಣ್ಣು ಬರುತ್ತದೆ ಎಂದರೆ ನೀವು ನಂಬಲೇಬೇಕು. ಹೆಚ್ಚಿನ ಮಾಹಿತಿಯು ಕೆಳಕಂಡಂತಿವೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮಾವಿನ ಹಣ್ಣನ್ನು ವಿತರಿಸುವವರು ಯಾರು?
ಈ ಹಣ್ಣನ್ನು ವಿತರಿಸುವವರು ಯಾವುದೋ ಫುಡ್ ಅಪ್ಲಿಕೇಶನ್ ಅಥವಾ ಅಮೆಜಾನ್ ಎಂದು ನೀವು ಎಂದುಕೊಂಡಿದ್ದರೆ ಅದು ಸುಳ್ಳು, ಅಂಚೆ ಇಲಾಖೆಯು ಮಾವಿನ ಹಣ್ಣನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತದೆ. ಇದು ನಿಜವಾಗಿಯೂ ಹೌದು, ಅಂಚೆ ಇಲಾಖೆಯು ಮತ್ತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಒಪ್ಪಂದವನ್ನು ಮಾಡಿಕೊಂಡಿದೆ, ಈ ಒಪ್ಪಂದದ ಕಾರಣದಿಂದಾಗಿ ನಿಮ್ಮ ಮನೆಯ ಬಾಗಿಲಿಗೆ ನೀವು ಬಯಸಿದ ಮಾವಿನಹಣ್ಣು ಬರುತ್ತದೆ.
ಈ ಸೇವೆಗಳು ಯಾವಾಗಿನಿಂದ ಆರಂಭವಾಗಲಿದೆ?
ಈಗಾಗಲೇ ಈ ಸೇವೆಯನ್ನು ಟೆಸ್ಟ್ ಮಾಡಲಾಗಿದ್ದು, ಸೇವೆಯು ಏಪ್ರಿಲ್ ಕೊನೆಯ ವಾರದಿಂದ ಗ್ರಾಹಕರಿಗೆ ಲಭ್ಯವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸೇವೆಯ ಒಂದು ಹಂತದ ಟೆಸ್ಟ್ ಕೂಡ ಆಗಿದೆ.
ಮಾವಿನ ಹಣ್ಣು ಹೇಗೆ ವಿತರಣೆ ಆಗಲಿದೆ?
ಮೊದಲು ರೈತ ಬಾಂಧವರು,karsirimangoes.karnataka.gov.in ಈ ಫೋಟೋನಲ್ಲಿ ಮಾಹಿತಿಗಳನ್ನು add ಮಾಡಬೇಕು. ನಂತರದಲ್ಲಿ ಗ್ರಾಹಕರು ಮೇಲೆ ತಿಳಿಸಿದ ವೆಬ್ ಸೈಟ್ ನಲ್ಲಿ ಅವರಿಗೆ ಬೇಕಾದ ಹಣ್ಣುಗಳನ್ನು ಆರ್ಡರ್ ಮಾಡುತ್ತಾರೆ. ಆರ್ಡರ್ ಮಾಡಿದ ನಂತರ ಅಡ್ರೆಸ್ ಗೆ ರೈತರು ಹಣ್ಣುಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಬಾಕ್ಸ್ ಮೇಲೆ ಗ್ರಾಹಕರ ಹೆಸರು, ವಿಳಾಸ ಮತ್ತು ಅವರ ಫೋನ್ ನಂಬರ್ ಬರೆಯಬೇಕು. ನಂತರದಲ್ಲಿ ಪೋಸ್ಟ್ ಆಫೀಸ್ ನವರು ನಿಮ್ಮ ವಿಳಾಸಕ್ಕೆ ಆರ್ಡರ್ ಅನ್ನು ತಲುಪಿಸುತ್ತಾರೆ. ರಾಜ್ಯ ಸರ್ಕಾರದ ಈ ಒಪ್ಪಂದದಿಂದ ರೈತರು ತಾವು ಬೆಳೆದ ಬೆಳಗೆ ಒಂದು ಉತ್ತಮ ವೇದಿಕೆ ಸಿಗುತ್ತದೆ, ಗ್ರಾಹಕರಿಗೂ ಕೂಡ ಮಧ್ಯವರ್ತಿಗಳ ದುಬಾರಿಯ ಬೆಲೆ ಬಿಸಿ ತಟ್ಟುವುದಿಲ್ಲ. ಅಂಚೆ ಇಲಾಖೆಯು ಈಗಾಗಲೇ 3 ಕೆಜಿ ಮಾವಿನ ಹಣ್ಣನ್ನು ಸ್ಯಾಂಪಲ್ ಗೆ ಆರ್ಡರ್ ಮಾಡಿ ನೋಡಲಾಗಿದೆ. ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಮಾವಿನ ಹಣ್ಣಿನ ಬಗ್ಗೆ ಚಿಕ್ಕ ವಿವರಗಳು;
ಭಾರತದಲ್ಲಿ ಸಾವಿರಾರು ಜಾತಿಯ ಮಾವಿನ ಹಣ್ಣುಗಳು ಸಿಗುತ್ತದೆ, ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಕೆಲವು ಮಾವಿನ ಹಣ್ಣುಗಳ ಪಟ್ಟಿಯು ಕೆಳಗಿನಂತಿವೆ.
- ಹಾಪುಸ್: ಈ ಮಾವಿನ ಹಣ್ಣು ತುಂಬಾ ಜನಪ್ರಿಯವಾದ ಹಣ್ಣಾಗಿದೆ, ಇದನ್ನು ‘ಮಾವಿನ ರಾಜ ‘ಎಂದು ಕರೆಯಲಾಗುತ್ತದೆ. ಇದು ಗಾತ್ರದಲ್ಲಿ ತುಂಬಾ ದೊಡ್ಡದು ಅಲ್ಲ, ಇದರ ಹಳದಿ ಬಣ್ಣದ ತಿರುಳು ತುಂಬಾ ರುಚಿಯಾಗಿರುತ್ತದೆ.
- ನೀಲಂ: ಈ ಮಾವಿನ ಹಣ್ಣು ಬಹಳಷ್ಟು ಜನರಿಗೆ ತುಂಬಾ ಇಷ್ಟ, ಇದರ ನೀಲಿ ಬಣ್ಣದ ತಿರುಳು ತುಂಬಾ ವಿಶಿಷ್ಟವಾದ ರುಚಿಯನ್ನು ಹೊಂದಿರುತ್ತದೆ. ಇದು ಗಾತ್ರದಲ್ಲಿ ಮಧ್ಯಮವಾಗಿದ್ದು, ಇದು ಹುಳಿ, ಸಿಹಿ ಮಿಶ್ರಣ ಇರುವುದರಿಂದ ಹೆಚ್ಚಿನ ಜನರಿಗೆ ಪ್ರಿಯವಾಗಿದೆ.
- ತೋತಾಪುರಿ: ಈ ಮಾವಿನ ಹಣ್ಣು ಸುವಾಸನೆ ಮತ್ತು ವಿಶಿಷ್ಟವಾದ ಮಾಧುರ್ಯಕ್ಕೆ ಹೆಸರುವಾಸಿಯಾಗಿದೆ. ಈ ಹಣ್ಣು ಪ್ರಕಾಶಮಾನವಾದ ಹಳದಿ ಚರ್ಮ ಮತ್ತು ಆಳವಾದ ಕಿತ್ತಳೆ ತಿರುಳನ್ನು ಹೊಂದಿರುವ ಮಧ್ಯಮ ಗಾತ್ರದ ಹಣ್ಣಾಗಿದೆ. ಈ ಹಣ್ಣನ್ನು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.