ಉಚಿತ ವಸತಿ ಯೋಜನೆ 2024:
ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ, ಕೇಂದ್ರ ಸರ್ಕಾರವು ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಯೋಜನೆಯ (2024) ಮೂಲಕ ಸ್ವಂತ ಮನೆಗಳನ್ನು ಸಬ್ಸಿಡಿ ಮೂಲಕ ನೀಡಲು ಮುಂದಾಗಿದೆ. ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಇದೆ ತರಹದ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ಕೆಳಗಡೆ ಬಲಭಾಗದಲ್ಲಿರುವ ಬಟನ್ ಕ್ಲಿಕ್ ಮಾಡುವ ಮುಖಾಂತರ ನಮ್ಮನ್ನು ಫಾಲೋ ಮಾಡಿಕೊಳ್ಳಬಹುದು.
ಸ್ವಂತ ಮನೆ ಎಂಬುದು, ಪ್ರತಿಯೊಬ್ಬ ಮನುಷ್ಯ ಜೀವಿಯ ಬಹುದೊಡ್ಡ ಕನಸಾಗಿದೆ. ಶ್ರೀಮಂತ ವರ್ಗದ ಜನರು ಈ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಈ ಕನಸುಗಳನ್ನು ಈಡೇರಿಸಿಕೊಳ್ಳುವುದು ಕನಸಾಗಿಯೇ ಇರುತ್ತದೆ.ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತಾನು ಸ್ವಂತ ಸೂರನ್ನು ಕಟ್ಟಿಕೊಳ್ಳಲು ಶ್ರಮದಿಂದ ದುಡಿಯುತ್ತಿರುತ್ತಾನೆ. ಆದ್ದರಿಂದ ಕೇಂದ್ರ ಸರ್ಕಾರವು ಬಡವರ್ಗದ ಜನರ ಕನಸುಗಳನ್ನು ನನಸು ಮಾಡಲು ಮುಂದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ,ಗುಡಿಸಲು ಮುಕ್ತ ಭಾರತ ದೇಶವನ್ನು ಕಟ್ಟುವುದಾಗಿದೆ. ಈ ಕನಸುಗಳನ್ನು ಈಡೇರಿಸಿಕೊಳ್ಳಲು ಸರ್ಕಾರವು ಯಾವ ತರದ ಯೋಜನೆಗಳನ್ನು ರೂಪಿಸಿದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.
ಕೇಂದ್ರ ಸರ್ಕಾರದ ಹೊಸ ಯೋಜನೆ:
ಮುಂದೆ ಬರುವ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯು ಜರುಗಲಿದೆ. ಚುನಾವಣೆಯ ವೇಳಾಪಟ್ಟಿಯ ಘೋಷಣೆ ಇನ್ನೇನು ಕೆಲವು ವಾರಗಳ ಬಾಕಿ ಇದೆ. ಚುನಾವಣೆಯ ಸಂದರ್ಭದಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸುವುದು ಸರ್ವೇಸಾಮಾನ್ಯ. ಅದರಲ್ಲಿ ಪ್ರತಿಯೊಬ್ಬರ ನನಸಾಗಿಸುವ ಸ್ವಂತ ಮನೆ, ಈ ಯೋಜನೆಯು ಬಹಳ ಸದ್ದು ಮಾಡುತ್ತಿದೆ. ಏಕೆಂದರೆ ಈ ಯೋಜನೆಯು ಬಹುದೊಡ್ಡ ಯೋಜನೆಯಾಗಿ ರೂಪುಗೊಳ್ಳಲಿದೆ. ಈ ಯೋಜನೆ ಅಡಿಯಲ್ಲಿ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಅವಧಿಯಲ್ಲಿ ಸ್ವಂತ ಮನೆ ಹೊಂದಿರುವ ಗುರಿಯನ್ನು ಹೊಂದಲಾಗಿದೆ. ಆದ್ದರಿಂದ ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳಲಿದೆ. ಈ ಯೋಜನೆಯು ಹಲವಾರು ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ಸಂತಸ ತಂದಿರುವ ನಡೆಯಾಗಲಿದೆ.
ಕೇಂದ್ರ ಸರ್ಕಾರವು ಈ ಯೋಜನೆಯನ್ನು ರೂಪಿಸಿರುವುದರಿಂದ, ಜನರಿಂದ ಉತ್ತಮ ಪ್ರತಿಕೆಯನ್ನು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಿಂದ ದೇಶದಲ್ಲಿರುವ ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ತುಂಬಾ ಅನುಕೂಲವಾಗಲಿದೆ. ಬಡವರ್ಗದವರಿಗೆ ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಕನಸನ್ನು ನನಸಾಗಿಸುವಲ್ಲಿ ಸಹಾಯ ಮಾಡುತ್ತದೆ. ಯೋಜನೆಯು ಅವರ ಮನಸ್ಥಿತಿ ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಮಾಜದಲ್ಲಿ ಅವರ ಸ್ಥಾನ ಮಾನವನ್ನು ಬಲಪಡಿಸಲು ಕೂಡ ಸಹಾಯ ಮಾಡುತ್ತದೆ. ಈ ಯೋಜನೆಯಿಂದ ದೇಶದಲ್ಲಿ ದೊಡ್ಡ ವಸತಿ ಕ್ರಾಂತಿಯಾಗುವುದು ಸಂದೇಹವಿಲ್ಲ.
ಈ ಯೋಜನೆಗೆ ಸದ್ಯ ಮಂಡಿಸಿದ ಬಜೆಟ್ ನಲ್ಲಿ ಒಳ್ಳೆಯ ಸ್ಥಾನ ಸಿಕ್ಕಿದೆ:
ಕೇಂದ್ರದ ವಿತ್ತ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು(Union Finance Minister Niramala Sitaraman) ಫೆಬ್ರವರಿ 2024ರಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಹಾಗೂ ಪ್ರಮುಖ ಸ್ಥಾನವನ್ನು ಸರ್ಕಾರ ನೀಡಲಿದೆ ಎಂದು ತಿಳಿದುಬಂದಿದೆ. ಬಜೆಟ್ ನಲ್ಲಿ ಈ ಯೋಜನೆಗೆ ಹೆಚ್ಚು ಹಣಕಾಸಿನ ಅನುದಾನವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ರೂಪಿಸಿರುವಂತಹ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಬ್ಯಾಂಕುಗಳು(Bank) ವಾಣಿಜ್ಯ ಸಂಸ್ಥೆಗಳು(Commercial institute) ಮತ್ತು ಖಾಸಗಿ ವಲಯ(Private Sector)ದೊಂದಿಗೆ ಸರ್ಕಾರವು ಸಹಕರಿಸಲಿದೆ. ಈ ಯೋಜನೆ ಅಡಿಯಲ್ಲಿ ಜನರಿಗೆ ಸ್ವಂತ ಮನೆ ಖರೀದಿಸಲು ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಹಾಯ ಮಾಡಲಿದೆ.
ಮಂಡಿಸಿದ ಬಜೆಟ್ ನಲ್ಲಿ ವಸತಿ ಯೋಜನೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ:
ನಮ್ಮ ದೇಶದಲ್ಲಿ ವಾಸಿಸುವ 1.4 ಶತ ಕೋಟಿ (1.4billion) ಜನಸಂಖ್ಯೆಯಲ್ಲಿ. ಗ್ರಾಮೀಣ ಹಾಗೂ ಹಳ್ಳಿ ಭಾಗದಲ್ಲಿ 20 ದಶ ಲಕ್ಷಕ್ಕೂ(20 milllion) ಹೆಚ್ಚಿನ ಜನರಿಗೆ ತಮ್ಮದೇ ಆದ ಸ್ವಂತ ಮನೆ ಇಲ್ಲ. ಅದರಂತೆಯೆ ನಗರ ಪ್ರದೇಶದಲ್ಲಿಯೂ ಸಹ ಇಂತಹ ಪರಿಸ್ಥಿತಿ ಯನ್ನು ಕಾಣಬಹುದು. ನಗರದಲ್ಲಿ 1.5 million ಗು ಹೆಚ್ಚು ವಸತಿ ಕೊರತೆ ಉಂಟಾಗಲಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಬಜೆಟ್ ನಲ್ಲಿ ವಸತಿ ಯೋಜನೆಯಾಗಿ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ.
ವಸತಿ ಯೋಜನೆಗೆ 2023-24ರಲ್ಲಿ ಮಂಡಿಸಿದ ವಸತಿ ಯೋಜನೆಗೆ 790 ಶತ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ 2024-25 ರ ಬಜೆಟ್ ಮಂಡನೆಯಲ್ಲಿ, ಹಿಂದಿನ ಬಜೆಟ್ ಗಿಂತ 15% ಹೆಚ್ಚಿಗೆ ಮಾಡಿ 1,013 ಶತ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹೆಚ್ಚುವರಿ ಹಣವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು ಬಳಸಲಾಗುವುದು.
ಹೆಚ್ಚಿಗೆ ಮಂಡಿಸಿದ ಹಣದಲ್ಲಿ ಗ್ರಾಮೀಣ ಮತ್ತು ನಗರ ಹೊಸ ವಸತಿ ಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗೂ ಜನರಿಗೆ ಉಳಿದುಕೊಳ್ಳಲು ಉತ್ತಮ ವಾಸ ಸ್ಥಳ ಒದಗಿಸುವುದು ಮತ್ತು ಅವರ ಮನಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ.
2014 ರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಯಶಸ್ಸು:
2014ರ ಸಮಯದಲ್ಲಿ ಆಗಿನ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಎಲ್ಲರಿಗೂ ಮನೆಗಳನ್ನು ನಿರ್ಮಿಸಿ ಕೊಡುವ ಕನಸ್ಸನ್ನು ಹೊತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PMAY) ಆರಂಭಿಸಿದರು. ಪ್ರಧಾನಮಂತ್ರಿಯವರು ರೂಪಿಸಿರುವಂತಹ ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಸತಿ ರಹಿತ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಲು ಸಹಾಯವಾಗಿದೆ.
2014ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಇದುವರೆಗೆ 40 ಮಿಲಿಯನ್ ಕಾಂಕ್ರೀಟ್ (Concrete houses)ಮನೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರವು 2025 ರ ಕೊನೆಯಲ್ಲಿ ಒಟ್ಟು 100 ಮಿಲಿಯನ್ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಿಂದ ಹಲವಾರು ಬಡವರ್ಗದ ಜನರು ಸ್ವಂತ ಮನೆಗಳನ್ನು ಕಟ್ಟಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಭಾರತದ ವಸತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾತ್ರದ ಪಾತ್ರ ವಹಿಸಿದೆ. ಈ ಯೋಜನೆಯಿಂದ ದೇಶದ ಲಕ್ಷಾಂತರ ಜನರು ತಮ್ಮದೇ ಆದ ಮನೆಗಳನ್ನು ಪಡೆಯಲು ಸಾಧ್ಯ ವಾಗುತ್ತಿದೆ. ಹಲವಾರು ಬಡ ಕುಟುಂಬಗಳ ಕನಸುಗಳು ನನಸಾಗಿದೆ.
ಈ ಯೋಜನೆಯ ಸರ್ಕಾರದ ಉಡುಗೊರೆಗಳು:
ಕೇಂದ್ರ ಸರ್ಕಾರವು ರೂಪಿಸಿರುವಂತಹ ಈ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಗ್ರಹ ಸಾಲ(Home Loan) ಪಡೆಯುವವರಿಗೆ, ಸರ್ಕಾರವು ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಬ್ಯಾಂಕ್ ಗಳಲ್ಲಿ ಮಾತುಕತೆ ನಡೆಸುತ್ತಿದೆ. ಈ ಮಾತುಕತೆಗಳು ಯಶಸ್ವಿಯಾಗದರೆ ಬಡವರು ಸೇರಿದಂತೆ ಎಲ್ಲಾ ಗೃಹ ಸಾಲಗಾರರು ಹೆಚ್ಚಿನ ಸಬ್ಸಿಡಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಸ್ವಂತ ಸೂರಿನ ಆಸೆ ಇರುವ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ. ಈ ಲೇಖನನ್ನು ಓದಿದ ಎಲ್ಲರಿಗೂ ಧನ್ಯವಾದಗಳು.
ಪ್ರತಿದಿನ ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ತರಹದ ಸರ್ಕಾರಿ ಯೋಜನೆಗಳು, ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಗಳನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ. ಸೇರಲುಇಲ್ಲಿ ಕ್ಲಿಕ್ ಮಾಡಿ.
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ಸರ್ಕಾರಿ ಸಂಬಂಧವಿಲ್ಲ, ಹಾಗೂ ಈ ವೆಬ್ಸೈಟ್ ಯಾವುದೇ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.
ನಾವು ಈ ವೆಬ್ಸೈಟ್ ಮಾಡಿರುವ ಉದ್ದೇಶ ನಿಮ್ಮಿಂದ ಯಾವುದೇ ರೀತಿ ಹಣವನ್ನು ಪಡೆಯುವುದು ಅಲ್ಲ. ನಮ್ಮೆಲ್ಲ ಮಾಹಿತಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಭಾವಿಸಬೇಕಾಗಿಲ್ಲ. ಎಲ್ಲಾ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ವೆಬ್ಸೈಟ್ ನ ಪ್ರಮುಖ ಉದ್ದೇಶವಾಗಿದೆ.