ಗೂಗಲ್ ಕಂಪನಿಯ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬರೋಬ್ಬರಿ 2500 ಯುಎಸ್ ಡಾಲರ್ ಅಂದರೆ, ಎರಡು ಲಕ್ಷದವರೆಗೆ ಉಚಿತ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಈ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಯಾವ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ. ಇದೇ ತರದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಜನರೇಷನ್ ಗೂಗಲ್ ಸ್ಕಾಲರ್ಶಿಪ್ 2023
ಗೂಗಲ್ ಕಂಪನಿ ರೂಪಿಸಿರುವಂತಹ, ಜನರೇಷನ್ ಗೂಗಲ್ ಸ್ಕಾಲರ್ಶಿಪ್ (Generation Google Scholarship) ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್ ಅನ್ನು ಒದಗಿಸಲಾಗುತ್ತದೆ, ವಿಜ್ಞಾನ ತಂತ್ರಜ್ಞಾನವನ್ನು ಅಧ್ಯಯನ (Science and technology) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಅನ್ವಯಿಸುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವು ಹೆಚ್ಚು ಅಗತ್ಯವಿರುವ ಮತ್ತು ಅರ್ಹವಾದ ವಿದ್ಯಾರ್ಥಿವೇತನವಾಗಿದೆ.
ಪ್ರತಿಯೊಂದು ಮನುಷ್ಯನಿಗೂ ಶಿಕ್ಷಣವು ಅದಿ ಮುಖ್ಯ ಅಂಶವಾಗಿದೆ. ಶಿಕ್ಷಣವನ್ನು ಅರಿಯದೆ ಜಗತ್ತನ್ನು ಕಲ್ಪಿಸಿಕೊಳ್ಳುವುದು ತುಂಬಾ ಅಸಾಧ್ಯ. ಆದ್ದರಿಂದ ಪ್ರತಿಯೊಂದು ಮನುಷ್ಯರಿಗೂ ಶಿಕ್ಷಣವನ್ನು ಕಲಿಯಬೇಕೆಂದು ಗೂಗಲ್ ಕಂಪನಿಯು ಈ ವಿದ್ಯಾರ್ಥಿ ವೇತನವನ್ನು ಆರಂಭಿಸಿದೆ. ದೇಶದಾದ್ಯಂತ ಶಿಕ್ಷಣವನ್ನು ರೂಪಿಸಲು ಅನೇಕ ಖಾಸಗಿ ಮತ್ತು ಸಾರ್ವಜನಿಕ ವಿದ್ಯಾರ್ಥಿ ವೇತನಗಳಿವೆ, ಅವುಗಳಲ್ಲಿ ಗೂಗಲ್ ಸ್ಕಾಲರ್ಶಿಪ್ ಕೂಡ ಒಂದಾಗಿದೆ. ಜಗತ್ತಿನ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ (Google), ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ರೂಪಿಸಲು ಬರೋಬ್ಬರಿ 2500 ಯುಎಸ್ ಡಾಲರ್ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ, ಇದು ಭಾರತೀಯ ರೂಪಾಯಿಗಳಲ್ಲಿ ನೋಡುವುದಾದರೆ 2,07,000 ತಲುಪುತ್ತದೆ. ಈ ವಿದ್ಯಾರ್ಥಿ ವೇತನಕ್ಕೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು, ಹಾಗೆಯೇ ಹೆಚ್ಚಿನ ಹಣದಿಂದ ನಿಮ್ಮ ಕೌಶಲ್ಯವನ್ನು ಕೂಡ ಅಭಿವೃದ್ಧಿಪಡಿಸಿಕೊಳ್ಳಬಹುದು.
ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವೇನು?
ಗೂಗಲ್ ಕಂಪನಿಯು ಈ ವಿದ್ಯಾರ್ಥಿ ವೇತನವನ್ನು ರೂಪಿಸಿರುವ ಹಿಂದಿನ ಉದ್ದೇಶವೇನೆಂದರೆ ಆರ್ಥಿಕವಾಗಿ ಹಿಂದುಳಿದ ಮತ್ತು ವಿಜ್ಞಾನ ಮತ್ತು ತಾಂತ್ರಿಕ ಕೋರ್ಸ್ ಗಳನ್ನು ಕಲಿಯುತ್ತಿರುವ ಪ್ರಪಂಚದಾದ್ಯಂತ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸಹಾಯ ಮಾಡುವುದಾಗಿದೆ. ಈ ಪ್ರಸಿದ್ಧ ಕಂಪನಿಯು ಅನೇಕ ಶೈಕ್ಷಣಿಕ ವೆಬ್ಸೈಟ್ಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಪ್ರತಿ ವರ್ಷ ಗೂಗಲ್ ಶಿಕ್ಷಣ ಕ್ಷೇತ್ರಕ್ಕೆ ನಿರ್ದಿಷ್ಟ ಹಣವನ್ನು ಮೀಸಲಿಡುತ್ತದೆ. ಗೂಗಲ್ ಎಲ್ಎಲ್ಸಿಯು (LLC) ಗೂಗಲ್ ಸ್ಕಾಲರ್ಶಿಪ್ ಬಹುರಾಷ್ಟ್ರೀಯ ತಂತ್ರಜ್ಞಾನದ ಮತ್ತೊಂದು ಭಾಗವಾಗಿದೆ.
ಗೂಗಲ್ ಜನರೇಷನ್ ವಿದ್ಯಾರ್ಥಿ ವೇತನ:
ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಮತ್ತು ಕ್ಷೇತ್ರದಲ್ಲಿ ನಾಯಕರಾಗಲು ಸಹಾಯ ಮಾಡಲು ಕಂಪ್ಯೂಟರ್ ಸೈನ್ಸ್ ಪದವಿಯನ್ನು ಓದುತ್ತಿರುವ ಮಹಿಳೆಯರಿಗಾಗಿ ಈ ವಿದ್ಯಾರ್ಥಿ ವೇತನವನ್ನು ಗೂಗಲ್ ಕಂಪನಿ ರೂಪಿಸಿದೆ. ಈ ವಿದ್ಯಾರ್ಥಿ ವೇತನವನ್ನು ವೈವಿಧ್ಯತೆ, ಇಕ್ವಿಟಿ ಮತ್ತು ಸೇರ್ಪಡೆ, ಪ್ರದರ್ಶಿತ ನಾಯಕತ್ವ ಮತ್ತು ಶೈಕ್ಷಣಿಕ ಕಾರ್ಯಕ್ರಮಕ್ಕೆ ಪ್ರತಿಯೊಂದು ಅಭ್ಯರ್ಥಿಯ ಪದ್ಧತಿಯ ಸಾಮರ್ಥ್ಯದ ಆಧಾರದ ಮೇಲೆ ಕಂಪ್ಯೂಟರ್ ವಿಜ್ಞಾನದಲ್ಲಿ ಮಹಿಳೆಯರಿಗೆ ಈ ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಕೆಳಗಿನಂತಿವೆ, ಮಾಹಿತಿನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
- ವಿದ್ಯಾರ್ಥಿಯು ಕಂಪ್ಯೂಟರ್ ಇಂಜಿನಿಯರಿಂಗ್, ಕಂಪ್ಯೂಟರ್ ವಿಜ್ಞಾನ ಅಥವಾ ನಿಕಟ ಸಂಬಂಧಿತ ತಾಂತ್ರಿಕ ಕ್ಷೇತ್ರವನ್ನು ಅಧ್ಯಯನ ಮಾಡುತ್ತಿರಬೇಕು.
- ಅಭ್ಯರ್ಥಿಯು ಕಂಪ್ಯೂಟರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕಡಿಮೆ ಪ್ರತಿನಿಧಿಸುವ ಗುಂಪುಗಳ ಪ್ರಾತಿನಿಧ್ಯವನ್ನು ಸುಧಾರಿಸುವ ಹಾಗೂ ನಾಯಕತ್ವವನ್ನು ಉದಾಹರಿಸಿ ಉತ್ಸಾಹವನ್ನು ಪ್ರದರ್ಶಿಸಬೇಕು.
- ಅಭ್ಯರ್ಥಿಯು ಗೂಗಲ್ (Google) ನ ಆನ್ಲೈನ್ ಚಾಲೆಂಜ್ ಆದ, ಕೋಡಿಂಗ್ ಕೌಶಲ್ಯವನ್ನು ನಿರ್ಣಯಿಸುವ ಕ್ಷೇತ್ರದಲ್ಲಿ ಭಾಗವಹಿಸಬೇಕು.
- ವಿದ್ಯಾರ್ಥಿಯು ತನ್ನ ಶೈಕ್ಷಣಿಕ ದಾಖಲೆಯ ಜೊತೆಗೆ CV ವಿವರಗಳು ಉತ್ತಮವಾಗಿರಬೇಕು, ಹಾಗೂ ದಾಖಲೆಗಳನ್ನು ಸರಿಯಾಗಿ ಸಲ್ಲಿಸಬೇಕು.
ಜನರೇಷನ್ ಗೂಗಲ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನದ ಮೊತ್ತ:
ಗೂಗಲ್ ಸ್ಕಾಲರ್ ಶಿಪ್ ಅಡಿಯಲ್ಲಿ ಬರೋಬ್ಬರಿ 2500 ಯುಎಸ್ ಡಾಲರ್ ವೇತನವನ್ನು ನೀಡಲಾಗುತ್ತದೆ, ಅದು ಭಾರತೀಯ ರೂಪಾಯಿ ನೋಡುವುದಾದರೆ ಸರಿಸುಮಾರು 207000 ದವರೆಗೆ ತಲುಪುತ್ತದೆ.
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ | 26 ಮಾರ್ಚ್ 2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 16 ಮೇ 2024 |
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಡೆ ನೀಡಲಾದ ಎಲ್ಲಾ ಸೂಚನೆಯನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
https://buildyourfuture.withgoogle.com/scholarships
- ಮೊದಲನೇದಾಗಿ ಅಭ್ಯರ್ಥಿಯು, ಮೇಲೆ ಕಾಣಿಸಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
- ನಂತರ ವೆಬ್ಸೈಟ್ ನಲ್ಲಿ ಲೊಕೇಶನ್ ಮತ್ತು ಟಾಫಿಕ್ ಸೆಲೆಕ್ಟ್ ಮಾಡಿ. ನಂತರ ಜನರೇಶನ್ ಗೂಗಲ್ ಸ್ಕಾಲರ್ಶಿಪ್ ಸೆಲೆಕ್ಟ್ ಮಾಡಿ.
- ನಂತರ ಅರ್ಜಿ ನಮೂನೆಯ ಪರದೆಯ ಮೇಲೆ ಏಷ್ಯಾ ಪೆಸಿಫಿಕ್ ಕಾಣಿಸುತ್ತದೆ.
- ನಂತರ ಅರ್ಜಿ ಸಲ್ಲಿಸುವಾಗ ಕೇಳುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
- ನಂತರ ‘ಸಲ್ಲಿಸು ಬಟನ್’ ಅನ್ನು ಆಯ್ಕೆ ಮಾಡಿ ನಿಮ್ಮ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣಗೊಳಿಸಿ.
ಮೇಲಿನ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ, ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.