PDO RECRUITMENT 2024:
ಕನ್ನಡ ನೀಡ್ಸ್ ಓದುಗರಿಗೆ ಎಲ್ಲರಿಗೂ ನಮಸ್ಕಾರ. ಇಂದಿನ ವರದಿಯ ಮುಖ್ಯಾಂಶವೇನೆಂದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ(RDPR) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ..
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ(RDPR) ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯೂ ಈಗಾಗಲೇ ಬಿಡುಗಡೆಯಾಗಿದೆ. ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಒಳ್ಳೆಯದು.
ಈ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಾನ ಪ್ರಕ್ರಿಯೆ, ವೇತನ ಶ್ರೇಣಿ, ಅರ್ಜಿ ಶುಲ್ಕದ ವಿವರ, ಅರ್ಜಿ ಸಲ್ಲಿಸುವಿಕೆಗೆ ಸಂಬಂಧಪಟ್ಟ ಪ್ರಮುಖ ದಿನಾಂಕಗಳು, ಆಯ್ಕೆಯ ವಿಧಾನ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಹೆಚ್ಚಿನ ವಿವರಗಳು ಕೆಳಗಿನಂತಿವೆ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು:
- ಇಲಾಖೆಯ ಹೆಸರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR)
- ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ (KPSC)
- ಹುದ್ದೆಯ ಹೆಸರು : ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO)
- ವೇತನ ಶ್ರೇಣಿ: ಅಧಿಸೂಚನೆಯ ಪ್ರಕಾರ
- ಉದ್ಯೋಗ ಸ್ಥಳ: ಕರ್ನಾಟಕ
- ಖಾಲಿ ಇರುವ ಹುದ್ದೆಗಳು: 247
- ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ ಮುಖಾಂತರ
ಖಾಲಿ ಇರುವ ಹುದ್ದೆಗಳು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 247 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಖಾಲಿ ಇವೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (HK): 97
- ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (Non HK): 150
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಾನ ಪ್ರಕ್ರಿಯೆ:
ಕರ್ನಾಟಕ ಲೋಕಸೇವಾ ಆಯೋಗದ ಅದಿ ಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠವಾಗಿ 35 ವರ್ಷ ವಯೋಮಿತಿಯನ್ನು ಮೀರಿರಬಾರದು.
ಪ್ರವರ್ಗದ ಆಧಾರದ ಮೇಲೆ ವಯಸ್ಸಿನ ಸಡಿಲಿಕೆ:
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳ ಕಾಲ,
- ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ ಪ್ರವರ್ಗ -1 ಅಭ್ಯರ್ಥಿಗಳಿಗೆ 05 ವರ್ಷಗಳ ಕಾಲ ವಯಸ್ಸಿನ ಸಡಿಲಿಕೆಯನ್ನು ಮಾಡಲಾಗಿದೆ.
ಅರ್ಜಿ ಶುಲ್ಕದ ವಿವರ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಶುಲ್ಕದ ಮಾಹಿತಿ ಕೆಳಗಿನಂತಿವೆ:
- ಸಾಮಾನ್ಯ ಅಭ್ಯರ್ಥಿಗಳು : ರೂ.600/-
- ಹಿಂದುಳಿದ ವರ್ಗದ ಅಭ್ಯರ್ಥಿಗಳು : ರೂ.300/-
- ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-
- ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು. ಶುಲ್ಕ ಪಾವತಿಸುವ ವಿಧಾನಗಳು ಕೆಳಗಿನಂತಿವೆ;
- UPI (ಯುಪಿಐ)
- NET BANKING (ನೆಟ್ ಬ್ಯಾಂಕಿಂಗ್)
- CREDIT CARD (ಕ್ರೆಡಿಟ್ ಕಾರ್ಡ್)
- DEBIT CARD (ಡೆಬಿಟ್ ಕಾರ್ಡ್)
ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆ ಆಧಾರದ ಮೇಲೆ ಕೆಳಗಡೆ ನೀಡಲಾದ ಎಲ್ಲಾ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಒಳ್ಳೆಯದು.
- ಅರ್ಜಿ ಸಲ್ಲಿಸುವ ದಿನಾಂಕ 15 ಏಪ್ರಿಲ್ 2024 ರಿಂದ ಆರಂಭವಾಗಿ, 15 ಮೇ 2024ರ ವರೆಗೆ ಚಾಲ್ತಿಯಲ್ಲಿ ಇರುತ್ತದೆ.
- ಅಭ್ಯರ್ಥಿಯು ಅರ್ಜಿಯನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು, ನಂತರ ಸಲ್ಲಿಸಿದ ಯಾವುದೇ ಅರ್ಜಿಯನ್ನು ಇಲಾಖೆಯು ಪರಿಗಣಿಸಲಾಗುವುದಿಲ್ಲ.
- ಅರ್ಜಿ ಸಲ್ಲಿಸುವಾಗ ಅಧಿಕೃತ ವೆಬ್ಸೈಟ್ ಇಲ್ಲವೇ ಕೆಳಗಡೆ ನೀಡಲಾದ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಅಧಿಕೃತ ಪೇಜ್ ಗೆ ಭೇಟಿ ನೀಡಿ.
- ಅಧಿಕೃತ ಪೇಜ್ ನ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಇಟ್ಟುಕೊಳ್ಳಬೇಕು.
- ನಂತರ ಅರ್ಜಿ ಸಲ್ಲಿಸುವಾಗ ಸರಿಪಡಿಸಿಕೊಂಡ ಎಲ್ಲ ದಾಖಲಾತಿಗಳನ್ನು ಭರ್ತಿ ಮಾಡಿ.
- ಭರ್ತಿ ಮಾಡಿದ್ದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ದಾಖಲಾತಿಗಳ ಜೊತೆಗೆ ಅಭ್ಯರ್ಥಿಯ ಸಹಿ ಭಾವಚಿತ್ರ ಹೆಬ್ಬೆರಳಿನ THUMB ಅನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ ಪುನಃ ಅರ್ಜಿ ನಮೂನೆಯನ್ನು ಪರಿಶೀಲಿಸಿ, ಏನಾದರೂ ತಪ್ಪಿದ್ದಲ್ಲಿ ಸರಿಪಡಿಸಬೇಕು.
- ನಂತರ ನಿಮ್ಮ ಪ್ರವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ ಮಾತ್ರ)
- ಅರ್ಜಿ ನಮೂನೆಯಲ್ಲಿ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿದ ನಂತರ, ಕೊನೆಯಲ್ಲಿ ‘ಸಲ್ಲಿಸು ಬಟನ್’ ಅನ್ನು ಕ್ಲಿಕ್ ಮಾಡುವ ಮುಖಾಂತರ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಬಹುದು.
- ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಅಭ್ಯರ್ಥಿಯು ಅರ್ಜಿಯನ್ನು 15 ಮೇ 2024ರ ಒಳಗೆ ಸಲ್ಲಿಸಬೇಕು, ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.
- ಪರೀಕ್ಷೆಯ ಸಮಯದಲ್ಲಿ ಡೌನ್ಲೋಡ್ ಮಾಡಿಕೊಂಡ ಅರ್ಜಿಯ ಪ್ರತಿಯು ಅಗತ್ಯವಿರುತ್ತದೆ.
ಅಭ್ಯರ್ಥಿಯು ಮೇಲಿನ ಎಲ್ಲ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ: 15 ಏಪ್ರಿಲ್ 20 24.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮೇ 2024.
ಆತ್ಮೀಯ ಸ್ಪರ್ಧಾರ್ಥಿಗಳೇ, ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಯಸಿದರೆ ಈಗಿನಿಂದಲೇ ಅಧ್ಯಯನವನ್ನು ನಡೆಸುವುದು ಒಳ್ಳೆಯದು, ಏಕೆಂದರೆ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಹುದ್ದೆಗಳನ್ನು ಪಡೆಯಲು ಸಹಾಯವಾಗುತ್ತದೆ. ಇಲ್ಲದಿದ್ದಲ್ಲಿ ನೀವು ಸಲ್ಲಿಸಿದ ಅರ್ಜಿ ನಮೂನೆಗೆ ಯಾವುದೇ ಮೌಲ್ಯ ಇಲ್ಲದಂತಾಗುತ್ತದೆ, ಆದ್ದರಿಂದ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ಅಧ್ಯಯನವನ್ನು ನಡೆಸಿ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಿ.
ಆಯ್ಕೆಯ ವಿಧಾನ:
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಮೊದಲು ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಸೂಚನೆ ಆಧಾರದ ಮೇಲೆ ಮಾಸಿಕವಾಗಿ ರೂಪಾಯಿ.37,900 ರಿಂದ 70,850 ರ ವರೆಗೆ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು:
- ಅಧಿಕೃತ ವೆಬ್ಸೈಟ್: kpsc.kar.nic.in
- ಅಧಿಕೃತ ಅಧಿಸೂಚನೆ (HK): ಡೌನ್ಲೋಡ್ ಮಾಡಿಕೊಳ್ಳಿ
- ಅಧಿಕೃತ ಅಧಿಸೂಚನೆ ( Non HK): ಡೌನ್ಲೋಡ್ ಮಾಡಿಕೊಳ್ಳಿ
- ಅರ್ಜಿ ಸಲ್ಲಿಸುವ ಲಿಂಕ್: ಇಲ್ಲಿ ಕ್ಲಿಕ್ ಮಾಡಿ.
ಉತ್ತಮ ಮಾಹಿತಿಯನ್ನು ಹೊಂದಿದ ಲೇಖನವನ್ನು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಶೇರ್ ಮಾಡಿ. ಲೇಖನವನ್ನು ಓದಿದ ಎಲ್ಲರಿಗೂ ಧನ್ಯವಾದಗಳು.
ಪ್ರತಿದಿನ ನಮ್ಮ ಜಾಲತಾಣದಲ್ಲಿ ಪ್ರಸಾರವಾಗುವ ಎಲ್ಲಾ ತರಹದ ಸರ್ಕಾರಿ ಯೋಜನೆಗಳು, ಉದ್ಯೋಗ ವಾರ್ತೆಗಳು ಹಾಗೂ ಇನ್ನಿತರ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಓದುಗರ ಗಮನಕ್ಕೆ: ನಮ್ಮ ಕನ್ನಡ ನೀಡ್ಸ್ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುತ್ತದೆ, ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ನಮ್ಮ ಕನ್ನಡ ನ್ಯೂಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ ಹಾಗೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.
ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ, ನಮ್ಮೆಲ್ಲ ಮಾಹಿತಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ನೀಡಬೇಕಾಗಿಲ್ಲ, ಎಲ್ಲಾ ಮಾಹಿತಿಯನ್ನು ನಿಮಗೆ ಉಚಿತವಾಗಿ ತಲುಪಿಸುತ್ತೇವೆ, ನಿಖರವಾದ ಮತ್ತು ಸತ್ಯವಾದ ಮಾಹಿತಿಗಳನ್ನು ಒದಗಿಸುವುದು ನಮ್ಮ ವೆಬ್ಸೈಟ್ನ ಪ್ರಮುಖ ಉದ್ದೇಶವಾಗಿದೆ.
ಇದೇ ತರಹದ ಉಚಿತ ಮಾಹಿತಿಯನ್ನು ಪಡೆಯಲು ನಮ್ಮಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ ಸೇರಲು ಇಲ್ಲಿ ಕೆಳಗೆ ಕ್ಲಿಕ್ ಮಾಡಿ..
- BNPL RECRUITMENT| ಭಾರತೀಯ ಪಶುಪಾಲನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- GTTS RECRUITMENT| ಕರ್ನಾಟಕ ಗವರ್ನಮೆಂಟ್ ಟೂಲ್ ರೂಮ್ ಅಂಡ್ ಟ್ರೈನಿಂಗ್ ಸೆಂಟರ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
- ASRB RECRUITMENT| ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024