Income Tax Audit Report: ಆಡಿಟ್ ರಿಪೋರ್ಟ್ ವಿಸ್ತರಣೆ ಗಡುವು; ರಿಪೋರ್ಟ್ ಸಲ್ಲಿಸದೆ ಹೋದರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ.
2023-24ರ ಅಸೆಸ್ಮೆಂಟ್ ವರ್ಷದ ಟ್ಯಾಕ್ಸ್ ಆಡಿಟ್ ರಿಪೋರ್ಟ್(Audit Report) ಸಲ್ಲಿಸಲು ಸೆ.30 ಕ್ಕೆ ಇದ್ದ ಗಡುವನ್ನು ಒಂದು ವಾರ ಮುಂದೂಡಲಾಗಿದೆ. ಒಂದು ಕೋಟಿ ರೂ.ಗೂ ಹೆಚ್ಚು ವಾರ್ಷಿಕವಾಗಿ ವಹಿವಾಟು ಹೊಂದಿರುವ ಉದ್ದಿಮೆಗಳು ಸಂಸ್ಥೆಗಳು ಹಾಗೂ 50 ಲಕ್ಷ ರೂ.ಗೂ ಹೆಚ್ಚು ಸ್ವೀಕೃತಿಗಳನ್ನು ಹೊಂದಿರುವ ವೃತ್ತಿಪರರು ತಮ್ಮ ಖಾತೆಗಳ ಟ್ಯಾಕ್ಸ್ ಆಡಿಟಿಂಗ್(Tax Auditing) ಮಾಡಿಸಬೇಕು ಎನ್ನುವ ನಿಯಮವು ಜಾರಿಯಲ್ಲಿದೆ.
ಅಡಿಟ್ ರಿಪೋರ್ಟ್ ಸಲ್ಲಿಸಲು ಸೆಪ್ಟೆಂಬರ್ 30ಕ್ಕೆ ಇದ್ದ ಗಡುವನ್ನು ಈಗ ಅಕ್ಟೋಬರ್ 7 ಕ್ಕೇ ವಿಸ್ತರಣೆ ಮಾಡಲಾಗಿದೆ. ಇದು 2023-24ರ ಮೌಲ್ಯಮಾಪನ ವರ್ಷಕ್ಕೆ ಅಸೆಸ್ಮೆಂಟ್ ಆಡಿಟ್ ರಿಪೋರ್ಟ್ ಸಲ್ಲಿಸಲು ಇರುವ ಗಡುವಾಗಿದೆ. ಆಡಿಟಿಂಗ್ ಖಾತೆಗಳ ಅವಶ್ಯಕತೆ ಇರುವ ಎಲ್ಲಾ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಈ ನಿಯಮವು ಅನ್ವಯವಾಗುತ್ತದೆ. 202324ನೇ ಸಾಲಿನ ಟ್ಯಾಕ್ಸ್ ರಿಟರ್ನ್ ಫೈಲ್ಸ್ ಸಲ್ಲಿಸಿದೆ ಇರುವವರಿಗೆ ಅಕ್ಟೋಬರ್ 31 ಡೆಡ್ ಲೈನ್ ಆಗಿದೆ. ಈ ದಿನಾಂಕದ ಒಳಗೆ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸದೆ ಇರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಹೆಚ್ಚಿನ ದಂಡವನ್ನು ತೆತ್ತಬೇಕಾಗುತ್ತದೆ.
ಹೆಚ್ಚಾಗಿ ಆಡಿಟಿಂಗ್(Auditing) ಅವಶ್ಯಕತೆ ಇಲ್ಲದ ವ್ಯಕ್ತಿಗಳಿಗೆ ಐಟಿಆರ್(ITR) ಫೈಲ್ ಸಲ್ಲಿಸಲು ಜುಲೈ 31ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು, ಈ ವರ್ಗದ ಆದಾಯ ತೆರಿಗೆಯ ಪಾಲುದಾರರು ಹೆಚ್ಚಾಗಿ ಬಹುತೇಕ ಸಂಬಳದಾರರೇ ಆಗಿರುತ್ತಾರೆ. ಬಿಸಿನೆಸ್ ಅಥವಾ ದೊಡ್ಡ ದೊಡ್ಡ ಸಂಸ್ಥೆಗಳಿಂದ ಆದಾಯ ಬರುವ ವ್ಯಕ್ತಿಗಳು ಆಡಿಟಿಂಗ್ ಅವಶ್ಯಕತೆ ಇರುವವರು ಅಕ್ಟೋಬರ್ 31ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ ಒಂದು ತಿಂಗಳ ಮುಂಚೆ ಅವರು ಟ್ಯಾಕ್ಸ್ ಆಡಿಟ್ (Tax Audit) ವರದಿಯನ್ನು ಸಲ್ಲಿಸಬೇಕಾಗುತ್ತದೆ.
ಇ-ಫೈಲಿಂಗ್(e-Filing) ವೆಬ್ಸೈಟ್ ಗಳು ತಾಂತ್ರಿಕ ಕಾರಣಗಳಿಂದಾಗಿ ಬಹಳ ನಿಧಾನಗೊಂಡಿದೆ, ಅಪ್ಲೋಡ್ ಮಾಡಲು ಕಷ್ಟವಾಗುತ್ತಿದೆ ಎನ್ನುವಂತಹ ವರದಿಗಳು ಇತ್ತೀಚೆಗೆ ಹೆಚ್ಚಿಗೆ ಕೇಳಿಬಂದಿದ್ದವು. ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಇದೀಗ ಆಡಿಟ್ ರಿಪೋರ್ಟ್ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿದೆ, ಇದರಿಂದ ತೆರಿಗೆ ಪಾವತಿ ದಾರಿಗೆ ತೆರಿಗೆಯನ್ನು ಸಲ್ಲಿಸಲು ಸರಾಗವಾಗಿ ಆಗಲಿ ಎಂದು ಕೇಂದ್ರ ಸರ್ಕಾರವು ಈ ರೀತಿಯ ನಿಯಮವನ್ನು ಕೈಗೊಂಡಿದೆ.
ಇದನ್ನು ಓದಿ:Gram Panchayat Recruitment| ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ 2024
ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸದೇ ಹೋದರೆ ಏನಾಗುತ್ತೆ?
ನಿರ್ದಿಷ್ಟ ಮೊತ್ತವನ್ನು ಹೊಂದಿರುವ ಬಿಸಿನೆಸ್ ಮ್ಯಾನ್ಗಳು ಹಾಗೂ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಟ್ಯಾಕ್ಸ್ ಆಡಿಟಿಂಗ್ ನಡೆಸಲೇಬೇಕು. ಟ್ಯಾಕ್ಸ್ ಆಡಿಟಿಂಗ್ ಸ್ವೀಕೃತಿಗಳು ವೆಚ್ಚಗಳು (ಡಿಪ್ರಿಷಿಯೇಷನ್ಸ್) ಸವಕಳಿ ಇತ್ಯಾದಿ ವಿವಿಧ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿ ಅಂತಿಮ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ನಿಮ್ಮ ತೆರಿಗೆ ಬಾದ್ಯತೆ ಎಷ್ಟಿದೆ ಎನ್ನುವುದನ್ನು ಸುಲಭವಾಗಿ ಸ್ಪಷ್ಟಪಡಿಸಲಾಗುತ್ತದೆ. ಚಾರ್ಟೆಡ್ ಅಕೌಂಟೆಂಟ್ ವ್ಯಕ್ತಿಗಳು ಟ್ಯಾಕ್ಸ್ ರಿಟರ್ನ್ ಫಿಲ್ಲಿಂಗ್ ಮಾಡಿಸಲು ಇರುವ ಅಧಿಕೃತ ವ್ಯಕ್ತಿಗಳಾಗುತ್ತಾರೆ.
ಇದನ್ನು ಓದಿ:BSNL: ಬಿಎಸ್ಏನ್ಎಲ್ ಗ್ರಾಹಕರಿಗೆ 24 ಜಿಬಿ ಉಚಿತ ಡಾಟಾ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ನೀವು ಒಂದು ವೇಳೆ ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸದೆ ಹೋದರೆ, ಅಥವಾ ಗಡುವಿನ್ ಒಳಗೆ ನೀವು ಹಣವನ್ನು ಸಲ್ಲಿಸಿದೆ ಇದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ. ನಿಮಗೆ ಗರಿಷ್ಠವಾಗಿ ಒಂದುವರೆ ಲಕ್ಷದವರೆಗೆ ದಂಡವನ್ನು ವಿಧಿಸಬಹುದು. ಇಲ್ಲದಿದ್ದಲ್ಲಿ ನಿಮ್ಮ ಉದ್ಯಮದಲ್ಲಿ ಆದ ಒಟ್ಟು ಮಾರಾಟ ಮತ್ತು ಒಟ್ಟಾರೆ ಆದಾಯ ಅಥವಾ ಸ್ವೀಕೃತಿಗಳ ಮೇಲೆ ಶೆ.0.5 ರಷ್ಟು ಮೊತ್ತವನ್ನು ದಂಡವಾಗಿ ನಿಮ್ಮಿಂದ ಪಡೆಯಲಾಗುತ್ತದೆ.
ಇದನ್ನು ಓದಿ:PM Kisan scheme 18th installment: ಇಂದು ಪಿಎಂ ಕಿಸಾನ್ ಹಣ ಬಿಡುಗಡೆ, ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಆಡಿಟ್ ರಿಪೋರ್ಟ್ ಯಾರು ಸಲ್ಲಿಸಬೇಕು?
ಒಂದು ಹಣಕಾಸಿನ ವರ್ಷದಲ್ಲಿ ಒಂದು ಕೋಟಿ ರೂ.ಗಿಂತ ಹೆಚ್ಚು ಟರ್ನೋವರ್ ಹೊಂದಿರುವ ಉದ್ದಿಮೆಗಳು ತಮ್ಮ ಅಕೌಂಟ್ಗಳ ಆಡಿಟ್(ಅಕೌಂಟ್ಸ್ ಆಡಿಟ್) ಮಾಡಿಸಬೇಕಾಗುತ್ತದೆ. ಒಂದು ವೇಳೆ ಈ ಬಿಸಿನೆಸ್ನಲ್ಲಿ ಶೇ.95 ರಷ್ಟು ಹಣಪಾವತಿಯು ಡಿಜಿಟಲ್ ಮೂಲಕ ಆಗಿದ್ದಲ್ಲಿ ಟ್ಯಾಕ್ಸ್ ಆಡಿಟ್ ಮಾಡಲು ಇರುವ ಮಿತಿ ರೂ.10 ಕೋಟಿ ಇದೆ. ಅಂದರೆ ಇಂಥ ಉದ್ದಿಮೆಗಳು ರೂ.10 ಕೋಟಿಗಿಂತ ಕಡಿಮೆ ಟರ್ನೋವರ್ ಹೊಂದಿದ್ದರೆ, ಟ್ಯಾಕ್ಸ್ ಆಡಿಟ್(Tax Audit) ಮಾಡುವ ಅಗತ್ಯತೆ ಇರುವುದಿಲ್ಲ.
ವೃತ್ತಿಪರ ವ್ಯಕ್ತಿಗಳಾದ ವೈದ್ಯರು ವಕೀಲರು ಆರ್ಕಿಟೆಕ್ಚರ್ ಗಳು ಇತ್ಯಾದಿ ವ್ಯಕ್ತಿಗಳು ಒಟ್ಟಾರೆ ಸ್ವೀಕೃತಿಯಲ್ಲಿ ಒಂದು ವರ್ಷದಲ್ಲಿ ರೂ.500 ಲಕ್ಷ ರೂಮಿರಿದರೆ ಅಂತವರು ಟ್ಯಾಕ್ಸ್ ಆಡಿಟಿಂಗ್ ಮಾಡಿಸಿ ರಿಪೋರ್ಟ್ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅವರ ಮೇಲೂ ಕೇಂದ್ರ ಸರ್ಕಾರವು ದಂಡ ವಿಧಿಸುತ್ತದೆ.
ಇದನ್ನು ಓದಿ:BSNL: ಬಿಎಸ್ಏನ್ಎಲ್ ಗ್ರಾಹಕರಿಗೆ 24 ಜಿಬಿ ಉಚಿತ ಡಾಟಾ! ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಓದುಗರ ಗಮನಕ್ಕೆ: ನಮ್ಮ ಸಿಹಿವಾಣಿ ತಂಡವು ತನ್ನೆಲ್ಲ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಒದಗಿಸುತ್ತದೆ ಯಾವುದೇ ಸುಳ್ಳು ಅಥವಾ ಅನಧಿಕೃತ ಮಾಹಿತಿಗಳನ್ನು ಒದಗಿಸುವುದಿಲ್ಲ.
ಕನ್ನಡ ನೀಡ್ಸ್ ವೆಬ್ ಸೈಟ್ ಗೆ ಯಾವುದೇ ರೀತಿಯ ಸರ್ಕಾರಿ ಸಂಬಂಧವಿಲ್ಲ, ಹಾಗೂ ನಮ್ಮ ವೆಬ್ಸೈಟ್ ಯಾವುದೇ ತರಹದ ಸರ್ಕಾರಿ ಪ್ರಚಾರದ ಜಾಲತಾಣವಲ್ಲ.
ನಾವು ಈ ವೆಬ್ಸೈಟ್ ರಚಿಸಿರುವುದರ ಹಿಂದಿನ ಉದ್ದೇಶವೇನೆಂದರೆ, ನಿಮ್ಮಿಂದ ಯಾವುದೇ ರೀತಿಯ ಹಣವನ್ನು ಪಡೆಯುವುದು ಅಲ್ಲ. ನಮ್ಮ ಎಲ್ಲಾ ಸುದ್ದಿಗಳನ್ನು ಓದಲು ನೀವು ಯಾವುದೇ ರೀತಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲ ಮಾಹಿತಿಯು ನಿಮಗೆ ಉಚಿತವಾಗಿ ದೊರೆಯುತ್ತದೆ. ನಿಖರವಾದ ಅಥವಾ ಸತ್ಯವಾದ ಮಾಹಿತಿಗಳನ್ನು ಒದಗಿಸುವುದೇ ನಮ್ಮ ವೆಬ್ ಸೈಟ್ ನ ಪ್ರಮುಖ ಉದ್ದೇಶವಾಗಿದೆ.