Loan Scheme: ಹೆಚ್ಚಿನ ಜನರಿಗೆ ಈ ಯೋಜನೆ ಬಗ್ಗೆ ಇನ್ನೂ ತಿಳಿದಿಲ್ಲ, ಈ ಯೋಜನೆಯಿಂದ ಸಿಗಲಿದೆ 10 ಲಕ್ಷ ಸಾಲ ಸೌಲಭ್ಯ!
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇ ಆದ ಸ್ವಂತ ಉದ್ದಿಮೆಯನ್ನು(Business) ಆರಂಭಿಸಬೇಕು, ತನ್ನೆಲ್ಲ ಕನಸುಗಳನ್ನು(Dreams) ನನಸು ಮಾಡಿಕೊಳ್ಳಬೇಕು, ಇನ್ನಷ್ಟು ಜನರಿಗೆ ತಾನು ಕೆಲಸವನ್ನು ನಿರ್ಮಿಸಿ ಕೆಲ ಜನರಿಗೆ ಕೆಲಸ ನೀಡಿ ಸಹಾಯ ಮಾಡಬೇಕು ಎಂದುಕೊಂಡವರಿಗೆ ಇದೀಗ ಸರ್ಕಾರದ ಕಡೆಯಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಕನಸುಗಳನ್ನು ನನಸು ಮಾಡಿಕೊಳ್ಳಬೇಕೆಂದಿರುವ ಜನರಿಗಾಗಿ ಸರ್ಕಾರವು ಪಿಎಂ ಮುದ್ರಾ ಯೋಜನೆಯನ್ನು(PM Mundra Scheme) ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಸ್ವಂತ ಉದ್ದಿಮೆಯನ್ನು ಮಾಡುವವರಿಗೆ ಸರ್ಕಾರದಿಂದ ಸಬ್ಸಿಡಿ ಸಾಲ (Subsidy Loan) ದೊರೆಯಲಿದೆ, 10 ಲಕ್ಷದ ವರೆಗೂ ಸಾಲವನ್ನು ಪಡೆಯಬಹುದು. ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಪಿಎಂ ಮುದ್ರಾ ಯೋಜನೆ (PM MUDRA SCHEME)
ಸಣ್ಣ ಉದ್ದಿಮೆಯನ್ನು ಆರಂಭಿಸುವವರಿಗೆ, ಪಿಎಂ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಯೋಜನೆಯ ಸಾಲವನ್ನು ಸರ್ಕಾರದ ಬ್ಯಾಂಕುಗಳು ಮಾತ್ರವಲ್ಲದೆ, ಪ್ರೈವೇಟ್ ಬ್ಯಾಂಕುಗಳು (Private Bank), ಫೈನಾನ್ಸ್ ಕಂಪನಿಗಳಲ್ಲಿಯೂ (Fainanace Company) ಕೂಡ ಪಡೆಯಬಹುದು. ಹಣಕಾಸು ಸಂಸ್ಥೆ ಅಥವಾ ಬ್ಯಾಂಕಿಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಉದಯ ಮಿತ್ರ ಪೋರ್ಟಲ್(Uadayamitra Portal) ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ, ನೀವು ಸಬ್ಸಿಡಿ ಸಾಲವನ್ನು ಪಡೆಯಬಹುದು.
ಸಾಲವು ನಿಮಗೆ ಮೂರು ವಿಧಗಳಲ್ಲಿ ಸಿಗುತ್ತದೆ.
- ಶಿಶು ವಿಭಾಗದಲ್ಲಿ ಐವತ್ತು ಸಾವಿರದವರೆಗೆ ಸಾಲ ಸಿಗುತ್ತದೆ,
- ಕಿಶೋರ ವಿಭಾಗದಲ್ಲಿ 50,000 ದಿಂದ 5 ಲಕ್ಷದವರೆಗೆ ಸಾಲ ಸಿಗುತ್ತದೆ,
- ತರುಣ ವಿಭಾಗದಲ್ಲಿ 5 ಲಕ್ಷದಿಂದ 10 ಲಕ್ಷದವರೆಗೂ ಸಾಲ (Loan) ಸಿಗಲಿದೆ.
ಪಿಎಂ ಮುದ್ರಾ ಯೋಜನೆಯನ್ನು, ರೋಜ್ಗಾರ್ ಯೋಜನೆ (Rojgar scheme) ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ಒಟ್ಟು ರೂಪ ಎನ್ನಬಹುದಾಗಿದೆ. ಈ ಯೋಜನೆಯು ಸ್ವಯಂ ಉದ್ಯೋಗ, ಸ್ವಉದ್ಯೋಗವನ್ನು ಪ್ರೋತ್ಸಾಹಿಸಲು ಜಾರಿಗೆ ಬಂದಿರುವ ಯೋಜನೆಯಾಗಿದೆ.
ಕೈಗಾರಿಕಾ ಕೇಂದ್ರಗಳು, ರಾಜ್ಯ ಖಾದಿ ಹಾಗೂ ಗ್ರಾಮೋದಯ ಮಂಡಳಿಗಳು ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೀವು ಪಿಎಂ ಮುದ್ರ ಯೋಜನೆಯಡಿ ಸಬ್ಸಿಡಿ ಸಾಲವನ್ನು (loan Scheme) ಪಡೆಯಬಹುದು. ಈ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೆಲವು ಅರ್ಹತೆಗಳನ್ನು ಹೊಂದಿರಬೇಕು, ಯಾವೆಲ್ಲಾ ವಾರ್ತೆಗಳನ್ನು ಹೊಂದಿರಬೇಕು ಎನ್ನುವುದು ಕೆಳಗಿನಂತಿವೆ;
ಈ ಯೋಜನೆಯಡಿ ಸಾಲ ಪಡೆಯುವ ಅಭ್ಯರ್ಥಿಯು ಹತ್ತನೇ ತರಗತಿಯಲ್ಲಿ ತೇರ್ಗಡೆ ಆಗಿರಬೇಕು, ಎಂಟನೇ ತರಗತಿಯಾದರೂ ಪಾಸ್(Pass) ಆಗಿರುವುದು ಕಟ್ಟುನಿಟಿನ ನಿಯಮವಾಗಿದೆ. ಮೊದಲು ಸರ್ಕಾರದ ಬೇರೆ ಯೋಜನೆಗಳಿಂದ ಆರ್ಥಿಕ ಸಹಾಯವನ್ನು ಪಡೆದುಕೊಂಡಿರುವ ವ್ಯಕ್ತಿಯು ಯೋಜನೆಯ ಸಾಲವನ್ನು(Loan) ಪಡೆಯಲು ಅರ್ಹರಾಗಿರುವುದಿಲ್ಲ.
ಪಿಎಂ ಮುದ್ರ ಯೋಜನೆಯಡಿಯಲ್ಲಿ, ಘಟಕ ನಿರ್ಮಾಣದ ವೆಚ್ಚಕ್ಕೆ 25 ಲಕ್ಷದವರೆಗೆ ಸಾಲ ಹಾಗೂ ಉದ್ದಿಮೆಗೆ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಒಂದು ವ್ಯವಸ್ಥೆಯ ಮೈಕ್ರೋ ಹಾಗೂ ಸಣ್ಣ ಉದ್ದಿಮೆಗೆ ಫಂಡ್ಸ್ ನೀಡುವ ಸಲುವಾಗಿ SIDB ಸಂಸ್ಥೆ ಶುರು ಮಾಡಿದೆ ಎನ್ನುವುದು ನಿಜ.
ಎಲ್ಲಾ ಯೋಜನೆಯು ಸರಿಯಾಗಿ ನಡೆಯಬೇಕು ಎಂದು CGTMSE ಕೂಡ ಶುರುವಾಗಿದೆ, ಇದರಿಂದ ಯಾವುದೇ ಗ್ಯಾರೆಂಟಿ ಇಲ್ಲದೆ 5 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಐದು ಲಕ್ಷದವರೆಗೆ ಪಡೆದುಕೊಂಡ ಸಾಲಕ್ಕೆ 50% ನಿಂದ 85% ವರೆಗೂ ಗ್ಯಾರೆಂಟಿ ಕವರ್ (Guarantee Coverage) ನೀಡಲಾಗುತ್ತದೆ.
ಸಣ್ಣ ವ್ಯಾಪಾರಕ್ಕೆ ಕ್ರೆಡಿಟ್ ಆಗಿ 10 ಲಕ್ಷದಿಂದ ಒಂದು ಕೋಟಿಯವರೆಗೆ ಸಾಲ ಸಿಗುತ್ತದೆ, ನೀಡುವ ಸಾಲದ ಮುತ್ತಕ್ಕೆ 50% ವರೆಗೆ ಗ್ಯಾರಂಟಿ ಕವರೇಜ್ ನೀಡಲಾಗುತ್ತದೆ. ಕೆಲವು ಪರಿಸ್ಥಿತಿಗಳಲ್ಲಿ ಎರಡು ಕೋಟಿ ವರೆಗೂ ಸಾಲವನ್ನು ನೀಡಲಾಗುತ್ತದೆ. ಈ ಎಲ್ಲ ವಿಷಯ ನೀವು ಉದ್ದಿಮೆಯನ್ನು ಆರಂಭಿಸಬೇಕೆಂದಿದ್ದರೆ ಸಹಾಯವಾಗಲಿದೆ.