Gruha Lakshmi: ಗೃಹಲಕ್ಷ್ಮಿ ಹಣ ಜಮಾ ಆಗುವುದು ಯಾವಾಗ.? ರಾಜ್ಯ ಸಚಿವರಿಂದ ಬಿಗ್ ಅಪ್ಡೇಟ್ ಜಾರಿ..!
ರಾಜ್ಯದಲ್ಲಿ ಗೃಹಲಕ್ಷ್ಮಿ(Gruha Lakshmi) ಯೋಜನೆಗೆ ಎದುರಾಗಿರುವ ಸಮಸ್ಯೆಯೂ ಇನ್ನೊಂದು ದೂರವಾಗಿಲ್ಲ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಹಣಕ್ಕಾಗಿ ಕಾಯುತ್ತಿದ್ದಾರೆ. ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ ಹಣವು ಹಲವಾರು ಮಹಿಳೆಯರ ಖಾತೆಗೆ(Account) ಇನ್ನು ಜಮಾ ಆಗಿಲ್ಲ, ಸರ್ಕಾರವು ಎಲ್ಲರ ಖಾತೆಗೆ ಹಣ ಜಮಾ(DBT) ಆಗುತ್ತದೆ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದರು ಸಹ, ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ.
ರಾಜ್ಯದ ಗೃಹಲಕ್ಷ್ಮಿ(Gruhalaksmi ಈ ಈ) ಯೋಜನೆಯ ಫಲಾನುಭವಿಗಳು, ಈ ವಿಷಯಕ್ಕಾಗಿ ಸರ್ಕಾರಕ್ಕೆ ದೂರತ್ತಿದ್ದಾರೆ, ಹಣ ಯಾವಾಗ ಜಮಾ ಆಗುತ್ತದೆ ಎಂದು ಗ್ರಹಿಣಿಯರು ಚಿಂತಿಸುತ್ತಿದ್ದಾರೆ. ಈಗ ರಾಜ್ಯ ಸರ್ಕಾರವು ಯೋಜನೆಯ ಹಣವು ಯಾವಾಗ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ?
ಜೂನ್ ಮತ್ತು ಜುಲೈ ತಿಂಗಳಿನ ಬಾಕಿ ಇರುವ ಕಂತನ್ನು ಬಿಡುಗಡೆ ಮಾಡುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಈ ಯೋಜನೆಗೆ ರಾಜ್ಯದ 98% ಫಲಾನುಭವಿಗಳು ನೋಂದಣಿಯಾಗಿದ್ದಾರೆ, ಇಲ್ಲಿಯವರೆಗೆ ಪ್ರತಿ ತಿಂಗಳು ಅವರಿಗೆ ಹಣವನ್ನು ಜಮಾ ಮಾಡಲಾಗಿದೆ.
ಜೂನ್ ತಿಂಗಳಿನ ಬಾಕಿ ಇರುವ ಮೊತ್ತವನ್ನು, ಒಂದು ವಾರದ ಒಳಗೆ ಎಲ್ಲರ ಖಾತೆಗೆ ಜಮಾ ಆಗಲಿದೆ, ಈ ತಿಂಗಳಿನಲ್ಲಿ ಉಳಿದೆರಡು ತಿಂಗಳ ಬಾಕಿ ಇರುವ ಮೊತ್ತವನ್ನು ಜಮಾ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಎರಡು ತಿಂಗಳ(2Month) ಬಾಕಿ ಇರುವ ಮೊತ್ತವನ್ನು 10 ದಿನಗಳ ಒಳಗಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ(DBT) ಆಗಲಿದೆ ಎಂದು ಹೇಳಿದ್ದಾರೆ. ಬಾಕಿ ಇರುವ ಮೊತ್ತವು ಆಗಸ್ಟ್ ತಿಂಗಳಲ್ಲಿ ಜಮಾ ಆಗುವುದು ಎಂದು ಸಚಿವರು ಮಹತ್ವದ ಮಾಹಿತಿಯನ್ನು ತಿಳಿಸಿದ್ದಾರೆ.
ಹಣ ಜಮಾ ಆಗುವ ಬಗ್ಗೆ ಸಚಿವರಿಂದ ಬಿಗ್ ಅಪ್ಡೇಟ್ ಜಾರಿ…!
ಮೇ ತಿಂಗಳ ಕಂತನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದೇವೆ, ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತಾಂತ್ರಿಕ ದೋಷದಿಂದ ಹಣ ಬಾಕಿ ಉಳಿದಿದೆ. ಈಗಾಗಲೇ ತಾಂತ್ರಿಕ ದೋಷದ(Server problem) ಕಾರ್ಯಗಳು ನಡೆಯುತ್ತಿದೆ, ಇನ್ನು 8 ರಿಂದ 10 ದಿನಗಳ ಒಳಗಾಗಿ ಬಾಕಿ ಇರುವ ಎರಡು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ(DBT) ಮಾಡಲಾಗುತ್ತದೆ.
ವಿಧಾನಸಭಾ ಪೂರ್ವದಲ್ಲಿ ರಾಜ್ಯದ ಮಹಿಳೆಯರಿಗೆ ಈ ಭರವಸೆಯನ್ನು ನೀಡಲಾಗಿತ್ತು, ಹಾಗಾಗಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಮತ್ತು ಈ ತಿಂಗಳ ಮೊದಲ ವಾರದೊಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಬಾಕಿ ಇರುವ ಹಣ ಜಮಾ ಆಗುತ್ತದೆ ಎಂದು ಸಚಿವರು ಮಹತ್ವದ ಮಾಹಿತಿಯನ್ನು ಹೊರಡಿಸಿದ್ದಾರೆ, ಆದಷ್ಟು ಬೇಗ ಎಲ್ಲಾ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ 4000 ಜಮಾ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತ ಮಾಹಿತಿಯನ್ನು ಹೊರಡಿಸಿದ್ದಾರೆ.