Post Office Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಪ್ರತಿ ತಿಂಗಳು 5,000 ಗಳಿಸಿ..!
ಯಾವ ವ್ಯಕ್ತಿಯು ತಾನು ನುಡಿದ ಸ್ವಲ್ಪ ಮೊತ್ತವನ್ನು ಹೂಡಿಕೆ(Investment) ಮಾಡಿ, ಮುಂದೊಂದು ದಿನ ಪ್ರತಿ ತಿಂಗಳು ಆದಾಯವನ್ನು ಗಳಿಸಬೇಕು, ಎಂದುಕೊಂಡವರಿಗೆ ಪೋಸ್ಟ್ ಆಫೀಸ್(Post Office) ಉತ್ತಮವಾದ ಆಯ್ಕೆಯಾಗಿದೆ. ನೀವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿಮಗೆ ಬಹಳಷ್ಟು ಆಯ್ಕೆಗಳು ಸಿಗಲಿದೆ, ಹಾಗೂ ನೀವು ಹೂಡಿಕೆ ಮಾಡುವ ಹಣಕ್ಕೆ ಭದ್ರತೆ (Saftey) ಕೂಡ ಸಿಗುತ್ತದೆ.
ಹಾಗಾಗಿ ಹೆಚ್ಚಿನ ಜನರು, ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ವ್ಯಕ್ತಿಗಳವರಿಗೆ ಅನುಕೂಲವಾಗುವಂಥ ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿ (Post Office Scheme) ಇದೆ.
ಪೋಸ್ಟ್ ಆಫೀಸ್ ಲ್ಲಿ ಹೂಡಿಕೆ ಮಾಡಿದರೆ ಉತ್ತಮವಾದ ರಿಟರ್ನ್ಸ್(Returns) ಸಿಗುತ್ತದೆ, ಹಾಗಾಗಿ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆಯಾಗಿದೆ. ಈ ಲೇಖನದಲ್ಲಿ ಪೋಸ್ಟ್ ಆಫೀಸ್(Post Office) ಮಹತ್ವವಾದ ಯೋಜನೆ ಬಗ್ಗೆ ತಿಳಿಸಲಿದ್ದೇವೆ. ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಮಾಸಿಕ ಉಳಿತಾಯ ಯೋಜನೆ!
ಪೋಸ್ಟ್ ಆಫೀಸ್ ನ ಮಾಸಿಕ ಉಳಿತಾಯ ಯೋಜನೆ (Post Office Monthly Investment Scheme) ಎಂದರೆ, ಪ್ರತಿ ತಿಂಗಳು ಆದಾಯ ಪಡೆಯಬಹುದಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ(Investment) ಮಾಡಿದರೆ ನೀವು ಪ್ರತಿ ತಿಂಗಳು 5000 ರೂ.ಗಳನ್ನು ಪಡೆಯಬಹುದು. ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುರಕ್ಷತೆ (Saftey) ಸಿಗಲಿದೆ.
ಪ್ರತಿ ತಿಂಗಳು ಆದಾಯವನ್ನು ಪಡೆಯಲು ಬಯಸಿದರೆ, ಈ ಯೋಜನೆಯು ನಿಮಗೆ ಉತ್ತಮವಾದ ಆಯ್ಕೆಯಾಗಲಿದೆ. ಈ ಯೋಜನೆಯು ಸಾಮಾನ್ಯವಾಗಿ 05 ವರ್ಷದ ಯೋಜನೆಯಾಗಿದ್ದು, ದೀರ್ಘಾವಧಿ ಮತ್ತು ಅಲ್ಪಾವಧಿ ಎರಡು ರೀತಿಯಲ್ಲಿ ಲಭ್ಯವಿದೆ.
ಈ ಯೋಜನೆಯ ಸೌಲಭ್ಯಗಳು.!
ಈ ಯೋಜನೆಯಲ್ಲಿ ನೀವು ಸಿಂಗಲ್ ಖಾತೆ ಅಥವಾ ಜಾಯಿಂಟ್ ಖಾತೆ (Joint Account) ತೆರೆಯಬಹುದು, ಗಂಡ ಹೆಂಡತಿ ಇಬ್ಬರು ಸೇರಿ ಈ ಖಾತೆಯಲ್ಲಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಆದಾಯವನ್ನು ಗಳಿಸಬಹುದು, ಹಾಗಾಗಿ ಗಂಡ ಹೆಂಡತಿ ಇಬ್ಬರು ಸೇರಿ ಹೂಡಿಕೆ ಮಾಡಲು ಉತ್ತಮವಾದ ಯೋಜನೆಯಾಗಿದೆ.
ಯೋಜನೆಯಲ್ಲಿ ನೀವು ಸಿಂಗಲ್ ಖಾತೆ ತೆರೆಯಲು, ಗರಿಷ್ಠವಾಗಿ 9 ಲಕ್ಷದವರೆಗೆ ಹೂಡಿಕೆ ಮಾಡಬಹುದು, ಇದರಲ್ಲಿ ಪ್ರತಿ ತಿಂಗಳು ರೂ.5,500 ಆದಾಯವನ್ನು ಪಡೆಯಬಹುದು. ಹಾಗೂ ಗಂಡ ಹೆಂಡತಿ ಇಬ್ಬರು ಸೇರಿ ಜಂಟಿಯಾಗಿ ಖಾತೆ ತೆರೆದರೆ ಗರಿಷ್ಠವಾಗಿ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.
15 ಲಕ್ಷ ಹೂಡಿಕೆ ಮಾಡಿದರೆ, 7.5% ವಾರ್ಷಿಕ ಬಡ್ಡಿ ಸಿಗಲಿದೆ, ಅಂದರೆ 15 ಲಕ್ಷದ ಹೂಡಿಕೆಯ ಮೇಲೆ ಪ್ರತಿ ವರ್ಷ ರೂ.1,11,000 ಬಡ್ಡಿ ಸಿಗಲಿದೆ. ಈ ರೀತಿಯಾಗಿ ಹೂಡಿಕೆ ಮಾಡಿ ನೀವು ಪ್ರದಿತಿಗಳು ಆದಾಯವನ್ನು ಪಡೆಯಬಹುದು.