FD Scheme: ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ವಾರ್ಷಿಕ 9.40% ಬಡ್ಡಿಯನ್ನು ಪಡೆಯಿರಿ, ಹೆಚ್ಚು ಸೇಫ್ ಸ್ಕಿಮ್..!
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ಭವಿಷ್ಯದ ಜೀವನವನ್ನು ಸುಖಕರವಾಗಿ ಕಳೆಯಲು, ಈಗ ದುಡಿದ ಹಣದಲ್ಲಿ ಸ್ವಲ್ಪವಾದರೂ ಹೂಡಿಕೆ(Invest) ಮಾಡಲು ಬಯಸುತ್ತಾನೆ. ನಾವು ಹೂಡಿಕೆ ಮಾಡುವ ಹಣಕ್ಕೆ ಹೆಚ್ಚಿನ ಬಡ್ಡಿದರ(Intrest Rate) ನೀಡುವ ಮ್ಯೂಚುವಲ್ ಫಂಡ್(Mutual Fund) ಅಥವಾ ಸ್ಟಾಕ್ ಮಾರ್ಕೆಟ್(Stock Market) ಳು ಸುರಕ್ಷಿತವಾಗಿದ್ದರೂ ಸಹ ಅಲ್ಲಿ ಆರ್ಥಿಕ ಅಪಾಯಗಳು ಹೆಚ್ಚಿರುತ್ತದೆ.
ಇದೆ ಕಾರಣದಿಂದಾಗಿ ಹೆಚ್ಚಿನ ಜನರು, ಪೋಸ್ಟ್ ಆಫೀಸ್ನ FD ಸ್ಕೀಮ್ ಅಥವಾ ಬ್ಯಾಂಕಿನ ಇನ್ನಿತರ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ನೀವು ಹೂಡಿಕೆ ಮಾಡುವ ಹಣಕ್ಕೆ ಸರ್ಕಾರಿ ಕಂಪನಿಗಳು(Government Companies) ಕೇವಲ 6 ರಿಂದ 8 ಪರ್ಸೆಂಟ್ ಬಡ್ಡಿಯನ್ನು ಮಾತ್ರ ಕೊಡುತ್ತದೆ, ಆದರೆ ಕಾರ್ಪೊರೇಟ್ ಸಂಸ್ಥೆಗಳು(Corporate Organisations) ನಿಮ್ಮ ಹೂಡಿಕೆಯ ಮೇಲೆ ಅತಿ ಹೆಚ್ಚು ಬಡ್ಡಿ ದರಗಳನ್ನು ನೀಡಲಿದೆ.
ಶ್ರೀರಾಮ್ ಫೈನಾನ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿ ಪಡೆಯಿರಿ:
ಶ್ರೀರಾಮ್ ಫೈನಾನ್ಸ್ ಕಾರ್ಪೊರೇಟ್ ಸಂಸ್ಥೆಯು, ಖಾಸಗಿ ಒಡೆತನದ ಸಂಸ್ಥೆಯಾಗಿದ್ದು. ಇದು ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಸಂಪೂರ್ಣ ಸ್ವಕ್ಷತೆಯನ್ನು ಒದಗಿಸುವುದರ ಜೊತೆಗೆ ಹೂಡಿಕೆಯ ಮೇಲೆ ಅತ್ಯುತ್ತಮವಾದ ರಿಟರ್ನ್ಸ್(Returns) ಅನ್ನು ನೀಡುತ್ತದೆ. ಈ ಸಂಸ್ಥೆಯಲ್ಲಿ ಹೂಡಿಕೆದಾರರಿಗೆ ಒಂದು ವರ್ಷ ಹಾಗೂ 05 ವರ್ಷದವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಈ ಸಂಸ್ಥೆಯಲ್ಲಿ ಹೂಡಿಕೆ(Invest) ಮಾಡುವ ಹಿರಿಯ ನಾಗರಿಕರಿಗೆ(Senior Citizens) 9.40% ಬಡ್ಡಿದರ(Intrest Rate) ಸಿಗಲಿದೆ ಹಾಗೂ ಮಹಿಳೆಯರಿಗೆ ಇದಕ್ಕಿಂತ 0.10% ಹೆಚ್ಚಿನ ವಾರ್ಷಿಕ ಬಡ್ಡಿ ದರ ಸಿಗಲಿದೆ. ಮಹಿಳೆಯರು ಹಿರಿಯ ನಾಗರಿಕರಿಗಿಂತ ಸ್ವಲ್ಪ ಹೆಚ್ಚಿನ ವಾರ್ಷಿಕ ಬಡ್ಡಿದರವನ್ನು ಪಡೆಯಲಿದ್ದಾರೆ.
ಹಿರಿಯ ನಾಗರಿಕರಿಗೆ 9.90% ಬಡ್ಡಿ ಸಿಗಲಿದೆ.!
ಈ ಖಾಸಗಿ ಸಂಸ್ಥೆಯು ಸ್ಥಿರ ಠೇವಣಿಯ (Fixed Deposit) ಮೇಲೆ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 9.40% ವಾರ್ಷಿಕ ಬಡ್ಡಿ(Yearly Interest) ನೀಡುವುದರ ಜೊತೆಗೆ 0.50% ಹೆಚ್ಚುವರಿ ವಾರ್ಷಿಕ ಬಡ್ಡಿಯನ್ನು ನೀಡಲು ಕಂಪನಿಯು ಮುಂದಾಗಿದೆ.
ಹೂಡಿಕೆದಾರರು ಮೆಚುರಿಟಿ ಅವಧಿಯ(Maturity period) ಕೊನೆಯಲ್ಲಿ ಎಫ್ ಡಿ ಯೋಜನೆ(FD Scheme)ಯನ್ನು ರಿನಿವಲ್(Renewal) ಮಾಡಲು ಮುಂದಾಗುವವರಿಗೆ ಹೆಚ್ಚುವರಿ 0.25% ಬಡ್ಡಿಯನ್ನು ಕಂಪನಿಯು ನೀಡಲಿದೆ.
ಶ್ರೀರಾಮ್ ಫೈನಾನ್ಸ್ ಕಂಪನಿಯ ವಿಶ್ವಾಸರ್ಹತೆ ಎಷ್ಟು?
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಖಾಸಗಿ ಒಡೆತನದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಾರೆ, ಏಕೆಂದರೆ ಅತಿ ಹೆಚ್ಚಿನ ಫ್ರೌಡ್ ಕೇಸ್(fraud case) ದಾಖಲಾಗುವುದು ಖಾಸಗಿ ಒಡೆತನದ ಕಂಪನಿಯಿಂದ(Private Sector Company) ಆಗಿರುತ್ತದೆ ಆದ್ದರಿಂದ ಜನರು ಹೂಡಿಕೆ ಮಾಡಲು ಹಿಂದೆ ಸರಿಯುತ್ತಾರೆ. ಆದರೆ ಶ್ರೀರಾಮ್ ಫೈನಾನ್ಸ್ ಕಂಪನಿಯೂ ಹೂಡಿಕೆಯ ಮೇಲೆ ICRA (AA+/STABLE &IND AA+/STABLE) ಕ್ರೆಡಿಟ್ ರೇಟಿಂಗ್ಸ್ (Credit Ratings)ಅನ್ನು ಪಡೆದುಕೊಂಡಿದೆ. ಈ ರಿವಾರ್ಡ್ ಕಂಪನಿಯ ಆರ್ಥಿಕ ಸ್ಥಿರತೆ ಮತ್ತು ಗುಣಮಟ್ಟತೆಯನ್ನು ತೋರುತ್ತದೆ.