Gruha Jyoti: ರಾಜ್ಯ ಸರ್ಕಾರದಿಂದ ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್! ಹೊಸ ನಿಯಮ ಜಾರಿ..!
ರಾಜ್ಯ ಸರ್ಕಾರವು ಸದ್ಯ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು(Guarantee Schemes) ರಾಜ್ಯದ ಜನತೆಗೆ ನೀಡುತ್ತಿದೆ. ಲೋಕಸಭಾ ಚುನಾವಣೆಯ ಬಳಿಕ 5 ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತದೆ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿತ್ತು, ಆದರೆ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ ಎನ್ನುವ ಘೋಷಣೆಯನ್ನು ಹೊರಡಿಸಿದ್ದಾರೆ. ಇದರ ಜೊತೆಗೆ ಗೃಹಜೋತಿ (Gruha Jyoti) ಯೋಜನೆಗೆ ಸಂಬಂಧಿಸಿದ ಹಾಗೆ ಮಹತ್ವದ ಅಪ್ಡೇಟ್ ಒಂದು ಹೊರ ಬಿದ್ದಿದೆ, ಏನದು ಹೊಸ ನಿಯಮ? ಎನ್ನುವ ಮಾಹಿತಿಯನ್ನು ಇಲ್ಲಿ ಕರೆದ ಮೂಲಕ ತಿಳಿದುಕೊಳ್ಳಿ.
ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ !
ರಾಜ್ಯ ಸರ್ಕಾರವು ಗೃಹಜೋತಿ ಫಲಾನುಭವಿಗಳಿಗೆ ಕಡಿಮೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ತನ್ನು ನೀಡುತ್ತಿತ್ತು, ಸರಾಸರಿ ಲೆಕ್ಕದ ಆಧಾರದ ಮೇಲೆ ಗೃಹಜೋತಿ ಫಲಾನುಭವಿಗಳಿಗೆ ಇಂತಿಷ್ಟು ಯೂನಿಟ್(Unit) ಉಚಿತ ವಿದ್ಯುತ್ತನ್ನು(Free Current) ನೀಡಲಾಗುತ್ತಿದೆ, ಫಲಾನುಭವಿಗಳು ನಿಗದಿ ಪಡಿಸಿದ ವಿದ್ಯುತ್ ಕ್ಕಿಂತ ಹೆಚ್ಚಿನ ವಿದ್ಯುತ್ ಬಳಸುವವರು ಹೆಚ್ಚುವರಿ ಶುಲ್ಕವನ್ನು ಪಾವತಿಸುತ್ತಿದರು.
ರಾಜ್ಯ ಸರ್ಕಾರದ ಹೊಸ ನಿಯಮದ ಅನುಸಾರವಾಗಿ, ಗೃಹಜ್ಯೋತಿ(Gruha Jyoti) ಫಲಾನುಭವಿಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದವರು ಗೃಹಜೋತಿ ಯೋಜನೆಯಿಂದ ವಂಚಿತರಾಗುತ್ತಾರೆ ಎನ್ನುವ ಬಗ್ಗೆ ನಿಯಮವನ್ನು ರೂಪಿಸಿತ್ತು. ಇದರ ಬೆನ್ನಲ್ಲೆ ಸರ್ಕಾರವು ರಾಜ್ಯದ ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್(Big shock) ಒಂದು ನೀಡಿದೆ.
ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ASD ಪಾವತಿ ಕಡ್ಡಾಯ!
ಗೃಹ ಜ್ಯೋತಿ ಫಲಾನುಭವಿಗಳು ನಿಗದಿಪಡಿಸಿದ ಲೆಕ್ಕಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ, ಹೆಚ್ಚುವರಿ ಭದ್ರತಾ ಠೇವಣಿಯನ್ನು (Additional Security Deposit) ಪಾವತಿಸುವುದು ಕಡ್ಡಾಯವಾಗಿದೆ. ಸರ್ಕಾರವು ನಿಗದಿಪಡಿಸಿದ ಲೆಕ್ಕಕ್ಕಿಂತ ಹೆಚ್ಚಿಗೆ 10 ಯೂನಿಟ್(10 Unit Current) ವಿದ್ಯುತ್ ಬಳಕೆ ಮಾಡಿದರು ಕೂಡ ASD ಪಾವತಿಸಬೇಕಾಗುತ್ತದೆ. ಈ ಮೂಲಕವಾಗಿ ಸರ್ಕಾರವು ರಾಜ್ಯದ ಎಲ್ಲಾ ಗೃಹಜೋತಿ ಫಲಾನುಭವಿಗಳಿಗೆ ಬಿಗ್ ಶಾಕ್ ನೀಡಿದೆ.
ಸರಬರಾಜು ಕಂಪನಿಗಳು ಫಲಾನುಭವಿಗಳಿಗೆ, ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಮದಿಂದ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಲೆಕ್ಕ ಹಾಕಿದ ನಂತರವೇ, ಎರಡು ತಿಂಗಳ ಬಿಲ್ ಮೊತ್ತವನ್ನು ಠೇವಣಿಯಾಗಿ ಸಂಗ್ರಹಿಸುತ್ತದೆ. ಇದರ ಮೇಲೆ 10 ಯೂನಿಟ್ ಉಚಿತ ವಿದ್ಯುತ್ತನ್ನು ಪ್ರತಿ ತಿಂಗಳು ಹೆಚ್ಚುವರಿಯಾಗಿ ನೀಡಲಾಗುತ್ತದೆ.
ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್(Free Electricity) ಬಳಸಬಹುದು, ಹಾಗೆಯೇ ಹಿಂದಿನ ತಿಂಗಳ ಬಳಕೆ ಗಿಂತ ಹೆಚ್ಚುವರಿಯಾಗಿ 10 ಯೂನಿಟ್ ಬಳಕೆ ಮಾಡಬಹುದು. ನಿಗದಿಪಡಿಸಿದ ಲೆಕ್ಕಕಿಂತ ಹೆಚ್ಚಿಗೆ ವಿದ್ಯುತ್ ಬಳಸಿದವರು ಹೆಚ್ಚುವರಿ ಆಗಿ ವಿದ್ಯುತ್ ಸಂಘಗಳಿಗೆ ಬಿಲ್ ಪಾವತಿಸಬೇಕಾಗುತ್ತದೆ ಎನ್ನುವುದು ಹೊಸ ನಿಯಮವಾಗಿದೆ.