Labour Card: 60,000ರೂ. ಮದುವೆ ಸಹಾಯದ ಪಡೆಯಲು ಅರ್ಜಿ ಸಲ್ಲಿಸಿ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಕಾರ್ಮಿಕರ ಇಲಾಖೆಯಿಂದ(Labour Department) ಮದುವೆಯ ಸಹಾಯಧನ ಪಡೆಯಲು ಅರ್ಹರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ, ಈ ಸೌಲಭ್ಯವನ್ನು ಪಡೆಯಲು ಯಾವೆಲ್ಲ ಅರ್ಹತೆಗಳಿರಬೇಕು? ಯಾರು ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ(Apply Online) ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಿ.
ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಯ ಮೊದಲನೇ ಮದುವೆಯ ವೆಚ್ಚಕ್ಕೆ ಇಲ್ಲವೇ ಅವನ/ಅವಳ ಎರಡು ಅವಲಂಬಿತ ಮಕ್ಕಳ ಮದುವೆಯ ಖರ್ಚು ಭರಿಸಲು ಸರ್ಕಾರವು ರೂ. 60,000 ಸಹಾಯಧನವನ್ನು ನೀಡುತ್ತದೆ.
ಅರ್ಹ ಫಲಾನುಭವಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು, ಹಾಗೂ ಯೋಜನೆಯಿಂದ ಯಾರಿಗೆಲ್ಲ ಅನುಕೂಲವಾಗುತ್ತದೆಯೋ ಅವರಿಗೆಲ್ಲ ಈ ಮಾಹಿತಿಯನ್ನು ಶೇರ್ ಮಾಡಿ, ನಿಮ್ಮಿಂದ ಅವರಿಗೂ ಉಪಯೋಗವಾಗಲಿ.
ಮದುವೆ ಸಹಾಯಧನ ಪಡೆಯಲು ಬೇಕಾಗಿರುವ ಅರ್ಹ ದಾಖಲೆಗಳು
- ಕಾರ್ಮಿಕರ ಕಾರ್ಡ್ (Labour Card)
- ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ.
- ರೇಷನ್ ಕಾರ್ಡ್ ಪ್ರತಿ (Ration Card)
- ಬ್ಯಾಂಕ್ ಪಾಸ್ ಬುಕ್ ಪ್ರತಿ (Bank Passbook)
- ವಿವಾಹ ನೋಂದಣಿ ಪ್ರತಿ (Marriage certificate)
- ಮದುವೆಯು ಕರ್ನಾಟಕ ರಾಜ್ಯದ ಹೊರಗೆ ಜರುಗಿದರೆ, ಅಪೀಡವಿಟ್ ಸಲ್ಲಿಸಬೇಕು.
- ವಧು ವರರ ಆಧಾರ್ ಕಾರ್ಡ್ ಪ್ರತಿ (Aadhaar Card)
ಅರ್ಜಿ ಸಲ್ಲಿಸುವುದು ಹೇಗೆ?
https://kbocwwb.karnataka.gov.in/register
ಅರ್ಹ ಪಲಾನುಭವಿಗಳು ಮೇಲೆ ನೀಡಲಾದ ಅಧಿಕೃತ ವೆಬ್ಸೈಟ್ ಮೂಲಕ, ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಆನ್ಲೈನ್(Online) ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಯಾರೆಲ್ಲಾ ಮದುವೆಯ ಸಹಾಯಧನವನ್ನು ಪಡೆಯಬಹುದು?
ಕಾರ್ಮಿಕರ ಇಲಾಖೆಯಿಂದ ನೊಂದಾಯಿಸಲ್ಪಟ್ಟಿರುವ ಕಾರ್ಮಿಕರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು, ಅವನು ಮದುವೆಯಾದ ವರ್ಷದಿಂದ ನೋಂದಣಿಯಾದ ವರ್ಷದವರೆಗೆ ಒಂದು ವರ್ಷದ ಸದಸ್ಯತ್ವವನ್ನು ಪೂರೈಸಿರಬೇಕು.
ಕಾರ್ಮಿಕರ ಇಲಾಖೆಯಲ್ಲಿ ನೊಂದಾಯಿಸಲ್ಪಟ್ಟ ಕುಟುಂಬವು ಎರಡು ಬಾರಿ ಈ ಯೋಜನೆಯ ಫಲವನ್ನು ಪಡೆಯಬಹುದು.
ನೊಂದಾಯಿಸಲ್ಪಟ್ಟ ಕಟ್ಟಡ ಕಾರ್ಮಿಕರ ಮಗ ಅಥವಾ ಮಗಳು ನಿಗದಿಪಡಿಸಿದ ವಯಸ್ಸಿನ ಅನುಗುಣವಾಗಿ ಮದುವೆಯಾದರೆ ಮಾತ್ರ ಈ ಸಹಾಯಧನವು ಅವರಿಗೆ ಲಭಿಸುತ್ತದೆ.
ವಿವಾಹ ನೋಂದಣಿ ಅಧಿಕಾರಿಯು ನೀಡಿದ ವಿವಾಹ ಪತ್ರವನ್ನು, ಅರ್ಜಿ ಸಲ್ಲಿಸುವಾಗ ನಮೂದಿಸಬೇಕು.
ನೋಂದಾಯಿತ ಕಾರ್ಮಿಕರ ಅಥವಾ ಅವರ ಮಕ್ಕಳ ಮದುವೆಗೆ ಕಾರ್ಮಿಕ ಇಲಾಖೆಯು(Labour Department) ಸಹಾಯಧನವನ್ನು ನೀಡುತ್ತದೆ.
ಕಾರ್ಮಿಕ ಇಲಾಖೆಯ ಸಹಾಯವಾಣಿ | 155214 |
ಅರ್ಜಿ ಸಲ್ಲಿಸುವ ಲಿಂಕ್ | Apply Online |
ಅಧಿಕೃತ ವೆಬ್ಸೈಟ್ | Download Now |