National Pension Scheme: ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಬದಲಾವಣೆ! ಈ ಯೋಜನೆಯಲ್ಲಿ ಹಣ ಹಾಕಿದವರು ತಪ್ಪದೇ, ಗಮನಿಸಿ!
ರಾಷ್ಟ್ರೀಯ ಪಿಂಚಣಿ ಯೋಜನೆ(National Pension Scheme) ಅಂದರೆ, ಇದು ದೀರ್ಘಾವಧಿಯ ಹೂಡಿಕೆಯ ಯೋಜನೆಯಾಗಿದೆ, ಈ ಯೋಜನೆಯಿಂದ ಕೆಲಸದಿಂದ ನಿವೃತ್ತಿ ಹೊಂದಿದವರು ಹಾಗೂ ಹಿರಿಯರು ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಳ್ಳಬಹುದು.
ಜನವರಿ ತಿಂಗಳಲ್ಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮಂಡಳಿಯು ಪಿಂಚಣಿಯನ್ನು ಹಿಂಪಡೆಯುವ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದರು, ಪಿಂಚಣಿಯ(Pension) ಹಣ ಹಿಂಪಡೆಯುವಿಕೆ ಎಂದರೆ, ಈ ಯೋಜನೆಯಲ್ಲೇ ಹೂಡಿಕೆ(Investment) ಮಾಡುವಂತಹ ಜನರು ತಮ್ಮ ಕಷ್ಟದ ದಿನಗಳಲ್ಲಿ 25% ಹಣವನ್ನು ಕೆಲ ನಿಯಮಗಳ ಅನುಸಾರ ಹಿಂಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿರುವ ಹಣವನ್ನು ಯಾವ ಸಂದರ್ಭದಲ್ಲಿ ಹಿಂಪಡೆಯಬಹುದು!
- ಹುಡುಕೆದಾರರು, ತನ್ನ ಮನೆಯಲ್ಲಿ ನಿರ್ಮಾಣ ಮಾಡುವ (House Construction) ಸಂದರ್ಭದಲ್ಲಿ ಅಥವಾ ಮನೆಯ ಸಾಲವನ್ನು(Home Loan) ತೀರಿಸುವ ಸಂದರ್ಭದಲ್ಲಿ NPS ಹಣವನ್ನು ಹಿಂಪಡೆಯುವ ಅವಕಾಶವಿದೆ.
- ಗಂಭೀರ ಆರೋಗ್ಯ ಪರಿಸ್ಥಿತಿ ಎದುರಾದಾಗ, ವೈದ್ಯಕೀಯ ವೆಚ್ಚವನ್ನು ಬರಿಸಲು ರಾಷ್ಟ್ರೀಯ ಪಿಂಚಣಿ ಯೋಜನೆ(National Pension Scheme)ಯಲ್ಲಿರುವ ಹಣವನ್ನು ಬಳಕೆ ಮಾಡಬಹುದು.
- ಹುಡುಕೆದಾರರು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವರ ಮದುವೆ ಸಂದರ್ಭಗಳಲ್ಲಿ ಅಥವಾ ಕಾನೂನು ಬದ್ಧವಾಗಿ ಮಗುವನ್ನು ದತ್ತು ಪಡೆಯುವಂತಹ ಸಂದರ್ಭದಲ್ಲಿ ಪೆನ್ಷನ್ ಹಣವನ್ನು ಹಿಂಪಡೆಯುವ ಅವಕಾಶವಿದೆ.
- ನೀವು ಸ್ವಯಂ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಕೌಶಲ್ಯ ಅಭಿವೃದ್ಧಿಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದು.
- ಹೊಸ ಉದ್ದಿಮೆಯನ್ನು ಆರಂಭಿಸುವವರು, ತಾವು ಹೂಡಿಕೆ ಮಾಡಿದ ಪೆನ್ಷನ್ ಹಣವನ್ನು ಬಳಸಿಕೊಳ್ಳುವ ಅವಕಾಶವನ್ನು ಸರ್ಕಾರವು ಕಲ್ಪಿಸಿದೆ.
ಪಿಂಚಣಿ ಹಣವನ್ನು ಹಿಂಪಡೆಯುವಿಕೆಯ ಕೆಲವು ಶರತ್ತುಗಳು!
ರಾಷ್ಟ್ರೀಯ ಪಿಂಚಣಿ ಖಾತೆ(National Pension Account)ಯಲ್ಲಿರುವ ಹಣವನ್ನು ಸ್ವಂತ ಬಳಕೆಗಾಗಿ ಮಾತ್ರ ಬಳಸಿಕೊಳ್ಳುವ ಅವಕಾಶವಿದೆ, ಹಾಗೂ ಒಟ್ಟು ಹೂಡಿಕೆಯ ಕೇವಲ 25% ಹಣವನ್ನು ಮಾತ್ರ ಹಿಂಪಡೆಯಬಹುದು. ಈ ನಿಯಮಗಳನ್ನು ಅನುಸರಿಸಿ ಹೂಡಿಕೆದಾರರು ತಮ್ಮ ಹೂಡಿಕೆಯಲ್ಲಿ ಮೂರು ಬಾರಿ ಹಣವನ್ನು ಹಿಂಪಡೆಯುವ ಅವಕಾಶವಿದೆ. ಆದರೆ ನಿಮ್ಮ NPS ಖಾತೆಯಲ್ಲಿರುವ ಹಣವನ್ನು ಒಟ್ಟಾರೆಯಾಗಿ ತೆಗೆದರೆ, ಪುನಹ 5 ವರ್ಷಗಳವರೆಗೆ ಮತ್ತೊಮ್ಮೆ ಹಣವನ್ನು ತೆಗೆಯುವ ಅವಕಾಶವಿಲ್ಲ.
ಪಿಂಚಣಿ ಹಣವನ್ನು ಹಿಂಪಡೆಯುವುದು ಹೇಗೆ?
ರಾಷ್ಟ್ರೀಯ ಪಿಂಚಣಿ ಖಾತೆ(National Pension Account)ಯಲ್ಲಿರುವ ಹಣವನ್ನು, ಹೂಡಿಕೆ ತನ್ನ ನಿವೃತ್ತಿಯ ಸಂದರ್ಭದಲ್ಲಿ ಬಳಸಿಕೊಳ್ಳಬಹುದು, ಆದರೆ ಅನಿವಾರ್ಯ ಸಮಯಗಳಲ್ಲಿ ಹಣವನ್ನು ತೆಗೆಯಲು ಬಯಸುವಂತಹ ವ್ಯಕ್ತಿಯು ರಾಷ್ಟ್ರೀಯ ಪಿಂಚಣಿ ಯೋಜನೆಯ(NPS) ಸರ್ಕಾರಿ ನೋಡಲು ಏಜೆನ್ಸಿಗೆ(Government Nodal Agency) ಭೇಟಿ ನೀಡಿ ಅವರು ನೀಡುವ ಸ್ವಯಂ ಘೋಷಣೆಯ ಪ್ರತಿಯನ್ನು ಭರ್ತಿ ಮಾಡಿ, ಅನಂತರ ಯಾವ ಕಾರಣದಿಂದ ಹಣವನ್ನು ತೆಗೆಯುತ್ತಿದ್ದೇವೆ ಎಂದು ಸರಿಯಾದ ಕಾರಣವನ್ನು ನೀಡಿ, ಸೆಂಟ್ರಲ್ ರೆಕಾರ್ಡ್ ಏಜೆನ್ಸಿಗೆ (Central record Agency) ಅರ್ಜಿ ಸಲ್ಲಿಸಬೇಕು.
ಸೆಂಟ್ರಲ್ ರೆಕಾರ್ಡ್ ಏಜೆನ್ಸಿಗೆ(CRA) ಅರ್ಜಿ ಸಲ್ಲಿಸಿದ ಬಳಿಕ, CRS ನಿಮ್ಮ ಕಾರ್ಯವನ್ನು ಅನುಮೋದನೆ ಗೊಳಿಸುತ್ತದೆ ಹಾಗೂ ನೀವು ನಿಮ್ಮ ಹೂಡಿಕೆಯ ಹಣವನ್ನು ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ.