7th Pay Commission: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಆ.1 ರಿಂದ ಏಳನೇ ವೇತನ ಆಯೋಗ ಜಾರಿ…!

7th Pay Commission: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಆ.1 ರಿಂದ ಏಳನೇ ವೇತನ ಆಯೋಗ ಜಾರಿ…!

ಕರ್ನಾಟಕದ ಎಲ್ಲಾ ಸರ್ಕಾರಿ ನೌಕರರಿಗೆ ಸರ್ಕಾರವು ಸಿಹಿ ಸುದ್ದಿ ಒಂದನ್ನು ನೀಡಿದೆ. ಅದೇನೆಂದರೆ, ಅಗಸ್ಟ್ 1ರಿಂದ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ಮಾಡುವುದಾಗಿ ಸರ್ಕಾರವು ನಿರ್ಧರಿಸಿದೆ, ಇದರಿಂದ ಸರ್ಕಾರಿ ನೌಕರರ ಹಲವು ದಿನಗಳ ಬೇಡಿಕೆ ಈಡೇರಿದೆ.

ಜುಲೈ 15ರಂದು ಸಂಜೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು, ಸಭೆಯಲ್ಲಿ ಸರ್ಕಾರವು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸಿಎಂ ಕಚೇರಿಯಿಂದ ಈ ಮಾಹಿತಿಯು ಹೊರ ಬಿದ್ದಿದ್ದು, “ಆ.1 ರಿಂದ ಏಳನೇ ವೇತನ ಆಯೋಗ(7th Pay Commission) ಜಾರಿ ಮಾಡುವ ಬಗ್ಗೆ, ಸಂಪುಟದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now

10.5% ವೇತನ ಪರಿಷ್ಕರಣೆ

ಸರ್ಕಾರಿ ವೇತನ ಆಯೋಗವು ಶೇಕಡ 27.5 ವೇತನ ಪರಿಷ್ಕರಣಿಗೆ ಶಿಫಾರಸ್ಸು ಮಾಡಿತ್ತು, ಕಳೆದ ಬಾರಿಯಾ ಬಿಜೆಪಿ ಸರ್ಕಾರವು ಶೇಕಡ 17ರ ಮಧ್ಯಂತರ ಪರಿಹಾರ ನೀಡಿತ್ತು, ಈ ಅಂತಿಮವಾಗಿ 10.5 ವೇತನ ಪರಿಷ್ಕರಣೆ ಆಗಲಿದೆ.

ನೌಕರರ ಒತ್ತಡಕ್ಕೆ ಮಣಿದ ಸರ್ಕಾರ

ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸು ಮಾಡುವ ಒತ್ತಡ ಸರ್ಕಾರದ ಮೇಲಿತ್ತು, ಮೊದಲ ಅಧಿವೇಶನದ ನಂತರ ಸೋಮವಾರ ಸಂಜೆ ಸಿಎಂ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಂಪುಟ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪವಾಗಿದ್ದು, ಇದಕ್ಕೆ ಎಲ್ಲಾ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹಲವು ವರ್ಷಗಳಿಂದ ಸರ್ಕಾರವು ಈ ಯೋಜನೆಯನ್ನು ಮುಂದುಡಿತ್ತು!

ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಂದ(Guarantee Schemes) ಸಂಪನ್ಮೂಲ ಕೊರತೆಗಳನ್ನು ಎದುರಿಸುತ್ತಿತ್ತು, ಈ ಹಿನ್ನೆಲೆಯಲ್ಲಿ ಇಲಾಖೆಯ ಸಲಹೆಯಂತೆ 7ನೇ ವೇತನ ಆಯೋಗದ ಶಿಫಾರಸಿನಂತೆ ಸರಕಾರಿ ನೌಕರರ ವೇತನ ಮತ್ತು ಬತ್ಯೆಗಳ ಪರಿಷ್ಕರಣೆಯನ್ನು ಮುಂದೂಡುತ್ತಾ ಬಂದಿತ್ತು.

ಸಂಘ ಸಂಸ್ಥೆಗಳಿಂದ ಮುಷ್ಕರ ಎಚ್ಚರಿಕೆ!

ಏಳನೇ ವೇತನ ಆಯೋಗದ ಶಿಫಾರಸ್ಸಿನ ಜಾರಿಗೆಯ ಬಗ್ಗೆ, ಜುಲೈ ಕೊನೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಮುಷ್ಕರದ ಬೆನ್ನಲ್ಲೇ ಸರ್ಕಾರವು ಜಾರಿಗೆ ದಿನಾಂಕವನ್ನು ಘೋಷಣೆ ಮಾಡಿದೆ.

ಈ ಆಯೋಗದ ಪ್ರಮುಖ ಶಿಫಾರಸುಗಳೇನು?

ಏಳನೇ ವೇತನ (7th Pay) ಆಯೋಗವು ಶೇಕಡ 27. 5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 7500 ಕೋಟಿ ರೂಪಾಯಿಗಳು ಹೆಚ್ಚುವರಿ ಹೊರಬೀಳುವ ನಿರೀಕ್ಷೆ ಇದೆ.

ಆಯೋಗದ ವಿರುದ್ಧ ಹಣಕಾಸು ಇಲಾಖೆಯ ತಕರಾರು

ಪ್ರಸ್ತುತ ಇರುವ ರಾಜ್ಯ ಸರ್ಕಾರವು ರೂಪಿಸಿಕೊಂಡ ಗ್ಯಾರಂಟಿ ಯೋಜನೆಗಳಿಂದ ವಾರ್ಷಿಕವಾಗಿ ಹೆಚ್ಚುವರಿ 52,000 ಕೋಟಿ ಯಿಂದ 58,000 ಕೋಟಿ ಹೊರೆ ಇರುವ ಕಾರಣ, ಸದ್ಯ ಆದಾಯ ವೆಚ್ಚ ಸರಿದೂಗಿಸುವುದು ಕಷ್ಟವಾಗಿದೆ. ಹೀಗಾಗಿ ಇನ್ನಷ್ಟು ಹೊರಗೆ ಕಾರಣವಾಗುವ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ ಜಾರಿ ಮಾಡುವುದು ಸಾಧ್ಯವಿಲ್ಲವೆಂದು ಹಣಕಾಸು ಇಲಾಖೆ ತಕರಾರು ತೆಗೆದಿತ್ತು. ಕಳೆದ ಬಾರಿ ನಡೆದ ಸಂಪುಟ ಸಭೆಯಲ್ಲಿ ಹಣಕಾಸು ಇಲಾಖೆಯು ಆಯೋಗದ ವಿರುದ್ಧ ಪ್ರಸ್ತಾವನೆಯನ್ನು ನೀಡಿತ್ತು, ಇದರಿಂದ ಸರ್ಕಾರವು ಇನ್ನೂ ಹೆಚ್ಚುವರಿ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ತೀರ್ಮಾನವನ್ನು ಮುಂದೂಡಿದ್ದರು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment