SBI ನಲ್ಲಿ ಸಾಲ ಪಡೆದವರಿಗೆ ಬಿಗ್ ಶಾಕ್! ಬಡ್ಡಿದರ ಏರಿಕೆಯ ಜೊತೆಗೆ EMI ಕೂಡ ಹೆಚ್ಚಿಗೆ ಆಗಲಿದೆಯಾ?
ದೇಶದ ಪ್ರಸಿದ್ಧ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ SBI ತನ್ನ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ವಿವಿಧ ಬಗೆಯ ಸಾಲಗಳ(Loan) ಬಡ್ಡಿಯನ್ನು ದುಬಾರಿ ಮಾಡಲು ಘೋಷಿಸಿದೆ. ಇವತ್ತಿನಿಂದಲೇ ಹೆಚ್ಚಿನ ಬಡ್ಡಿ ದರಗಳು ಜಾರಿಯಾದರೆ ಗ್ರಾಹಕರು ಈಗ ಸಾಲದ ಮೇಲೆ ಹೆಚ್ಚಿನ ಬಡ್ಡಿಯಲ್ಲೂ(Intrest) ಪಾವತಿಸಬೇಕಾಗುತ್ತದೆ.
SBI ಬಡ್ಡಿ ದರದಲ್ಲಿ ಇಷ್ಟು ಪ್ರಮಾಣ ಹೆಚ್ಚಿಗೆ ಆಗಲಿದೆ!
SBI ನಾ ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ಬ್ಯಾಂಕ್ ತನ್ನ, MCLR ನಲ್ಲಿ ಬದಲಾವಣೆ ಮಾಡದೆ(ಸಾಲ ದರಗಳ ಕನಿಷ್ಠ ವೆಚ್ಚ). ಹೊಸ ಮಾಹಿತಿಯ ಬದಲಾವಣೆಯಡಿ MCLR ಅನ್ನು 5 ರಿಂದ 10 ಬೇಸಿಸ್ ಪಾಯಿಂಟ್(Basis point) ಗಳಷ್ಟು ಏರಿಕೆ ಮಾಡಲಾಗಿದೆ. ಅಂದರೆ MCLR ಶೇ.0.05 ರಿಂದ 0.10 ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಗಳು ಇಂದಿನಿಂದಲೇ ಜಾರಿಗೆ ಬರಲಿದೆ.
EMI ಕೂಡಾ ಹೆಚ್ಚಾಗುತ್ತದೆ!
SBI ಸರ್ಕಾರಿ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿದೆ, ಗ್ರಾಹಕರ ಸಂಖ್ಯೆಯಲ್ಲಿ ಇತರ ಎಲ್ಲಾ ಬ್ಯಾಂಕುಗಳಿಗಿಂತ ಇನ್ನೂ ಬಹಳ ಮುಂದಿದೆ. ಎಸ್ ಬಿಐ ನಿಂದ MCLR ಹೆಚ್ಚಳದಿಂದಾಗಿ ವಿವಿಧ ಸಾಲದ ಉತ್ಪನ್ನಗಳು ದುಬಾರಿಯಾಗಿದೆ. ಈ ಹೊಸ ನಿರ್ಧಾರದಿಂದ ಲಕ್ಷಗಟ್ಟಲೆ ಗ್ರಾಹಕರ ಮೇಲೆ ಬಡ್ಡಿಹೊರೆ ಹೆಚ್ಚಾಗಬಹುದು ಮತ್ತು ಹೆಚ್ಚಿನ ಇಎಂಐ ಕಟ್ಟಬೇಕಾಗಬಹುದು.
SBI ಈ ತರಹದ ಬಡ್ಡಿ ದರಗಳನ್ನು ಹೆಚ್ಚಿಸಿದೆ.
- ಒಂದು ತಿಂಗಳ ಸಾಲದ ಅವಧಿಯ MCLR ಅನ್ನು 5 ಬಿಪಿಎಸ್(BPS)ನಿಂದ 8.35 ಪ್ರತಿಶತಕ್ಕೆ ಹೆಚ್ಚಿಸಿದೆ.
- ಮೂರು ತಿಂಗಳ(3Months) ಸಾಲದ ಅವಧಿಯ ಮೇಲೆ MCLR ಅನ್ನು 10bps ನಿಂದ 8.4% ಹೆಚ್ಚಿಸಿದೆ,
- ಆರು ತಿಂಗಳ ಸಾಲದ ಅವಧಿಯ ಮೇಲೆ MCLR ಅನ್ನು 10 ಬಿಪಿಎಸ್ (bps) ನಿಂದ 8.75 ಪ್ರತಿಶತಕ್ಕೆ ಹೆಚ್ಚಳವಾಗಿದೆ,
- ಒಂದು ವರ್ಷದ ಸಾಲದ(One Year Loan) ಅವಧಿಯ MCLR ಅನ್ನು 10 ಬಿಪಿಎಸ್(bps) ನಿಂದ 8.85 ಪ್ರತಿಶತಕ್ಕೆ ಹೆಚ್ಚಿಸಿದೆ,
- ಎರಡು ವರ್ಷಗಳ ಸಾಲದ ಅವಧಿಯ(Period) ಮೇಲೆ MCLR ಅನ್ನು 10 bps ನಿಂದ 8.95 ಪ್ರತಿಶತಕ್ಕೆ ಹೆಚ್ಚಳ ಮಾಡಿದೆ,
- ಮೂರು ವರ್ಷಗಳ ಸಾಲದ ಅವಧಿಯ ಮೇಲೆ MCLR ಅನ್ನು 5 ಬಿಪಿಎಸ್(bps)ನಿಂದ 9 ಪ್ರತಿಶತಕ್ಕೆ ಹೆಚ್ಚಿಗೆ ಮಾಡಿದೆ.
ಗೃಹ ಸಾಲ ತೆಗೆದುಕೊಂಡ ಗ್ರಾಹಕರಿಗೆ ಪರಿಹಾರ!
ಈ MCLR ಅಂದರೆ, ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರಗಳು ಬ್ಯಾಂಕ್‌ಗಳು ಬಡ್ಡಿಯನ್ನು ನೀಡದಿರುವ ದರಗಳಾಗಿವೆ, ಅಂದರೆ, ಬ್ಯಾಂಕುಗಳು ನೀಡುವ ಸಾಲ ಉತ್ಪನ್ನಗಳ ಬಡ್ಡಿದರಗಳು ಆಯಾ ಅವಧಿಯ MCLR ದರಗಳಿಗಿಂತ ಹೆಚ್ಚಿರುತ್ತದೆ. ಆದರೆ, MCLR ಹೆಚ್ಚಳದಿಂದ ಎಸ್ ಬಿಐ ಗೃಹ ಸಾಲದ(SBI HOME LOAN) ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಂಬುದು ಸಮಾಧಾನದ ಸಂಗತಿಯಾಗಲಿದೆ. ಈ ಗೃಹ ಸಾಲದ ಬಡ್ಡಿ ದರಗಳು ಬಾಹ್ಯ ಮಾನದಂಡದ ಸಾಲ ದರಗಳನ್ನು ಆಧರಿಸಿದೆ, ಎಸ್‌ಬಿಐ(SBI) ಪ್ರಸ್ತುತ ಇಬಿಎಲ್‌ಆರ್‌ನಲ್ಲಿ() ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.