Sim Card: ನಿಮ್ಮ ಹೆಸರಿನಲ್ಲಿ ಮಿತಿಮೀರಿ ಸಿಮ್ ಕಾರ್ಡ್ ಗಳಿದ್ದರೆ ಜೈಲು ಪಿಕ್ಸ್! ಹೊಸ ನಿಯಮ ಜಾರಿ!
ನೀವು ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಹೊಂದಿದ್ದರೆ, ಟೆಲಿಕಾಂ ಕಂಪನಿಗಳು ನಿಗದಿಪಡಿಸಿರುವ ಮಿತಿಗಿಂತ ಹೆಚ್ಚಿನ ಸಿಮ್ ಕಾರ್ಡ್(Sim Card) ನಿಮ್ಮ ಬಳಿ ಇದ್ದರೆ ನೀವು ಭಾರಿ ದಂಡವನ್ನು ಕಟ್ಟಬೇಕಾಗುತ್ತದೆ.
ಟೆಲಿಕಾಂ ಕಂಪನಿಯು(Telicom Company) ನಿಗದಿಪಡಿಸಿರುವ ನಿಯಮವನ್ನು ನೀವು ಪದೇ ಪದೇ ಉಲ್ಲಂಘನೆ ಮಾಡಿದರೆ, ನಿಮ್ಮನ್ನು ಜೈಲಿಗೆ ಕಳಿಸಬಹುದು. ನೀವು ಎಷ್ಟು ಸಿಮ್ ಕಾರ್ಡ್ಗಳನ್ನು(Sim Cards) ಪಡೆಯಬಹುದು? ಹಾಗೂ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಒಂದು ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾಡುಗಳನ್ನು ಪಡೆಯಬಹುದು
ಒಬ್ಬ ವ್ಯಕ್ತಿಯು ಗರಿಷ್ಠವಾಗಿ ಎಷ್ಟು ಸಿಮ್ ಕಾರ್ಡ ಗಳನ್ನು ತೆಗೆದುಕೊಳ್ಳಬಹುದು ಎನ್ನುವುದು, ಅವನು ಆ ಕಾರ್ಡ್ಗಳನ್ನು ಎಲ್ಲಿಂದ ತೆಗೆದುಕೊಳ್ಳುತ್ತಾನೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ದೇಶದ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಪರವಾನಿಗೆ ಪಡೆದ ಸೇವಾಕೇಂದ್ರಗಳನ್ನು ಹೊರತುಪಡಿಸಿ ಪ್ರತಿ ವ್ಯಕ್ತಿಗೆ ಸಿಮ್ ಕಾರ್ಡ್ ಗಳ ಖರೀದಿಗೆ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ, ಎಂದು ಗ್ರಾಂಟ್ ಥಾರ್ನ್ ಟನ್ ಇಂಡಿಯಾದ ಪಾಲುದಾರ ನಿತಿನ್ ಅರೋರಾ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪರವಾನಿಗೆ ಪಡೆದ ಸೇವಾ ಕೇಂದ್ರಗಳನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯು ಕನಿಷ್ಠವಾಗಿ 9 ಸಿಮ್ ಕಾರ್ಡ್ ಗಳನ್ನು ತೆಗೆದುಕೊಳ್ಳಬಹುದು, ಅದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಹೊಂದಿದ್ದರೆ ನೀವು ದಂಡ ಕಟ್ಟಬೇಕಾಗುತ್ತದೆ.
ಸಿಮ್ ಕಾರ್ಡ್ ಗಳ ಮಿತಿಮೀರಿ ಇದ್ದರೆ ಏನಾಗುತ್ತದೆ?
ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದ ಹಾಗೆ 26 ಜೂನ್ 2024ರಂದು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ, ನೀವು 9 ಅಥವಾ 6 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ತೆಗೆದುಕೊಂಡರೆ ದಂಡವನ್ನು ಪಾವತಿಸಬೇಕಾಗುತ್ತದೆ.
ಟೆಲಿಕಾಂ ಕಂಪನಿಯ ಹೊಸ ನಿಯಮದ ಪ್ರಕಾರ, ನಿಯಮವನ್ನು ಉಲ್ಲಂಘನೆ ಮಾಡಿದ ವ್ಯಕ್ತಿಯ ಮೇಲೆ ಮೊದಲ ಬಾರಿಗೆ 50,000 ದಂಡವನ್ನು ವಿಧಿಸಲಾಗುವುದು ಎಂದು ಗ್ರಾಂಟ್ ಥಾರ್ನ್ ಟನ್ ಇಂಡಿಯಾದ ಪಾಲುದಾರ ನಿತಿನ್ ಅರೋರಾ ಮಾಧ್ಯಮ ವರದಿಯಲ್ಲಿ ತಿಳಿಸಿದ್ದಾರೆ.
ಎರಡನೇ ಬಾರಿಗೆ ನಿಯಮವನ್ನು ಉಲ್ಲಂಘನೆ ಮಾಡಿದರೆ ದಂಡವು 2 ಲಕ್ಷಕ್ಕೆ ಹೆಚ್ಚಳವಾಗುತ್ತದೆ, ಸಿಮ್ ಕಾರ್ಡ್ ಗಳಿಗೆ ಸಂಬಂಧಿಸಿದ ಹಾಗೆ ವಂಚನೆ ನಡೆದರೆ ಮೂರು ವರ್ಷ ಜೈಲು ಶಿಕ್ಷೆ ಅಥವಾ 50 ಲಕ್ಷದವರೆಗೆ ದಂಡ ಇಲ್ಲವೇ ಎರಡನ್ನು ವಿಧಿಸಬಹುದು ಅದಕ್ಕಾಗಿಯೇ ಸಿಮ್ ಕಾರ್ಡ್ ಗಳೊಂದಿಗೆ ಜಾಗೃತರಾಗಿರಬೇಕು.
ಎಲ್ಲೆಡೆ ದಿನದಿಂದ ದಿನಕ್ಕೆ ಸಿಮ್ ಕಾರ್ಡ್ ಗಳ(Sim Cards) ವಂಚನೆ ಹೆಚ್ಚುತ್ತಿದೆ, ಹಾಗೂ ಇತರ ವಂಚನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಟೆಲಿಕಾಂ ಕಂಪನಿಯು ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ.
ಮೊದಲು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ (Sim Card) ಗಳು ಇದೆ, ಹಾಗೂ ನಿಮ್ಮ ಹೆಸರಿನಲ್ಲಿ ಬೇರೆಯವರಿಗೆ ಎಷ್ಟು ಸಿಮ್ ಕಾರ್ಡ್ಗಳನ್ನು ನೀಡಿದ್ದೀರಿ ಎನ್ನುವುದು, ಮೊದಲು ನೀವು ಗಮನದಲ್ಲಿಡಬೇಕಾದ ವಿಷಯವಾಗಿದೆ.
ಯಾರಾದರೂ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡು ವಂಚನೆ ಮಾಡುತ್ತಿದ್ದಾರ, ಎಲ್ಲಿ ಮತ್ತು ಹೇಗೆ ದೂರು ದಾಖಲಿಸಬೇಕು ಎನ್ನುವುದು ತಿಳಿದುಕೊಂಡಿರಬೇಕು. ಮೊದಲು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಚಾಲ್ತಿಯಲ್ಲಿವೆ ಎನ್ನುವ ಪರಿಶೀಲನೆ ಮಾಡುವುದು ಉತ್ತಮವಾದ ಮಾರ್ಗವಾಗಿದೆ.
ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳಿವೆ ಎಂದು ಪರಿಶೀಲನೆ ಮಾಡುವುದು ಹೇಗೆ?
ಸಿಮ್ ಕಾರ್ಡ್ ಗಳಿಂದ ಹೆಚ್ಚುತ್ತಿರುವ ವಂಚನೆಯನ್ನು ತಡೆಗಟ್ಟಲು ಸರ್ಕಾರವು ‘ಸಂಚಾರ ಸಾತಿ’ ಹೆಸರಿನ ವಿಶೇಷ ಪೋರ್ಟಲ್ ಅನ್ನು ಆರಂಭಿಸಿದೆ. ನೀವು ಈ ಪೋರ್ಟಲ್ ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ನೋಂದಣಿ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ಸಿಮ್ ಕಾರ್ಡ್ಗಳ ಪರಿಶೀಲನೆ ನಡೆಸುವುದು ಹೇಗೆ?
https://tafcop.sancharsaathi.gov.in/telecomUser/
ಮೊದಲು ಮೇಲೆ ಕಾಣಿಸಿದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು CapthCode ಬಳಸಿ, OTP ಯೊಂದಿಗೆ ಲಾಗಿನ್ ಆಗಿ.
ನಂತರ ಅಧಿಕೃತ ಪೇಜ್ ತೆರೆಯುತ್ತದೆ, ಅಲ್ಲಿ ನಿಮಗೆ ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ನಂಬರ್ ಗಳಿವೆ ಎಂದು ಕಾಣಸಿಗುತ್ತದೆ, ಆ ಮುಖಪುಟದಲ್ಲಿ ಮೂರು ಆಯ್ಕೆಗಳಿರುತ್ತವೆ – ‘ನನ್ನ ಸಂಖ್ಯೆ ಅಲ್ಲ’, ‘ಅಗತ್ಯವಿದೆ ಮತ್ತು ಅಗತ್ಯವಿಲ್ಲ ಮುಂತಾದ ವಿವರಗಳು, ನೀವು ನಿಮ್ಮ ಆಯ್ಕೆಯನ್ನು ಆರಿಸಿ ಮತ್ತು ಸಲ್ಲಿಕೆ ಮಾಡಿ.
ಸರ್ಕಾರದ ಅಧಿಕೃತ ಪೋರ್ಟಲ್ (Portal) ನಲ್ಲಿ ನಿಮಗೆ ಗೊತ್ತಿಲ್ಲದ ಮೊಬೈಲ್ ನಂಬರ್ ನೊಂದಣಿ ಆಗಿದ್ದರೆ, ಆ ಸಂಪರ್ಕವನ್ನು ಕಡಿತಗೊಳಿಸಲು ನೀವು Not My Number ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.