Aadhaar Link: ರಾಜ್ಯ ಸರ್ಕಾರದಿಂದ ರೈತರಿಗೆ ಎಚ್ಚರಿಕೆ! ಜುಲೈ ಅಂತ್ಯದೊಳಗೆ, ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು!
ರಾಜ್ಯದಲ್ಲಿ ಈಗಂತೂ ಅಕ್ರಮಗಳು ಹೆಚ್ಚು ತಲೆ ಇದೆ, ವಂಚಕರು ವಿವಿಧ ರೀತಿಯಲ್ಲಿ ಜನಸಾಮಾನ್ಯರನ್ನು ವಂಚಿಸುತ್ತಿದ್ದಾರೆ, ಅದರಲ್ಲೂ ಈಗ ಅಕ್ರಮ ಜಮೀನುಗಳ ಮಾರಾಟ ಹೆಚ್ಚಾಗುತ್ತಿದೆ, ಆಸ್ತಿ ಮಾರಾಟದ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಂಚನೆಗಳು ನಡೆದಿದೆ. ಅಕ್ರಮ ಜಮೀನುಗಳ ಮಾರಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವು ಮುಂದಾಗಿದೆ.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಜಮೀನು ಮಾರಾಟದ ತಡೆಗಾಗಿ ರಾಜ್ಯ ಸರ್ಕಾರವು, RTC ಗಳಿಗೆ ಆಧಾರ್ ಲಿಂಕ್ (Aadhaar Link) ಕಡ್ಡಾಯ ಮಾಡುವಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ, ಈ ಮೂಲಕವಾಗಿ ಸರ್ಕಾರವು ಅಕ್ರಮ ಜಮೀನು ಮಾರಾಟದ ವಂಚನೆಯನ್ನು ತಡೆಯಲು ಮುಂದಾಗಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ರೈತರಿಗೆ ಮಹತ್ವದ ಆದೇಶ ಒಂದು ಹೊರಬಿದ್ದಿದೆ.
ಸರ್ಕಾರದಿಂದ ರೈತರಿಗೆ ಎಚ್ಚರಿಕೆ!
ರಾಜ್ಯ ಸರ್ಕಾರ ರೈತರ ಜಮೀನಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿದೆ, ಜಮೀನಿನ RTC ಗೆ ಆಧಾರ್ ಲಿಂಕ್ ಮಾಡಲು ಸರ್ಕಾರವು ಹೊಸ ಸಾಫ್ಟ್ವೇರ್ (Software) ಅನ್ನು ಅಪ್ಡೇಟ್ ಮಾಡಿದೆ. ಈ ವಿಷಯಕ್ಕೆ ಕುರಿತಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರಕಟಣೆ ಮೂಲಕ ಎಲ್ಲೆಡೆ ಮಾಹಿತಿಯನ್ನು ನೀಡಿದ್ದಾರೆ. ಈ ಕಾರ್ಯವನ್ನು ಎಲ್ಲೆಡೆ ಕಡ್ಡಾಯಗೊಳಿಸಲು, ಗ್ರಾಮ ಪಂಚಾಯಿತಿಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರ ಜವಾಬ್ದಾರಿಯನ್ನು ಹೊರಿಸಿದೆ. ಕೃಷಿ ವಿಷಯಕ್ಕೆ ಸಂಬಂಧಿಸಿದ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು(facilities) ಪಡೆಯಲು, ಕೃಷಿ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ (Adhaar Link) ಮಾಡುವುದು ಕಡ್ಡಾಯವಾಗಿದೆ.
ರೈತರು ಜುಲೈ ಅಂತ್ಯದೊಳಗೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿ;
ರೈತರು ಜಮೀನಿನ ದಾಖಲೆ ಮತ್ತು ಆಧಾರ್ ಕಾರ್ಡ್ ಗಳನ್ನು ತೆಗೆದುಕೊಂಡು ಗ್ರಾಮ ಒನ್, ಕೇಂದ್ರವನ್, ಮತ್ತು ಗ್ರಾಮ ಆಡಳಿತ ಕಚೇರಿಗಳಲ್ಲಿ ಆಧಾರ್ ಪ್ರಕ್ರಿಯೆಯನ್ನು ಮಾಡಿಕೊಳ್ಳಬಹುದು. ರೈತರು ತಮ್ಮ ಜಮೀನಿಗೆ ಆಧಾರ್ ಲಿಂಕ್ (Aadhaar Link) ಮಾಡಿಕೊಂಡರೆ ಸರ್ಕಾರದಿಂದ ಬರುವ ಯಾವುದೇ ಯೋಜನೆಗಳಿಂದ ವಂಚಿತರಾಗಲು ಸಾಧ್ಯವಿಲ್ಲ. ಆಧಾರ್ ಲಿಂಕ್ ಮಾಡಿಸಿಕೊಂಡರೆ ಅಕ್ರಮ ಜಮೀನು ಮಾರಾಟ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು. ಸದ್ಯ ರಾಜ್ಯ ಸರ್ಕಾರವು RTC ಮತ್ತು ಆಧಾರ್ ಲಿಂಕ್(Aadhaar Link) ಪ್ರಕ್ರಿಯೆ ಮಾಡಿಸಲು ಜುಲೈ ಕೊನೆಯ ದಿನವಾಗಿಸಿದೆ, ಜುಲೈ ಅಂತ್ಯದೊಳಗೆ ಯಾವೆಲ್ಲ ರೈತರು ಈ ಪ್ರಕ್ರಿಯೆಯನ್ನು ಮಾಡಿಸಿಕೊಂಡಿಲ್ಲವೋ, ಅವರು ತಮ್ಮ RTC ಜೊತೆಗೆ ಆಧಾರ್ ಲಿಂಕ್ ಮಾಡಿಸುವುದು ಅಗತ್ಯವಾಗಿದೆ.
RTC ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
https://landrecords.karnataka.gov.in/service4
- ಆಧಾರ್ ಲಿಂಕ್ ಮಾಡಲು, ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಭೂಮಿ ನಾಗರಿಕ ಸೇವಾ ವೆಬ್ಸೈಟ್ಗೆ log in ಆಗಿ ಅಲ್ಲಿ ಕೇಳಲಾಗಿರುವ ಅಲ್ಲಾ ದಾಖಲೆಗಳನ್ನು ಭರ್ತಿ ಮಾಡಿ.
- OTP ಯೊಂದಿಗೆ ವೆಬ್ಸೈಟ್ ಲಾಗಿನ್ ಆದ ಬಳಿಕ RTC ಜೊತೆಗೆ ಆಧಾರ್ ಲಿಂಕ್ ಆಯ್ಕೆ ನಿಮಗೆ ಕಾಣಸಿಗುತ್ತದೆ, ಅಲ್ಲಿ ಆರ್ ಟಿ ಸಿ (RTC) ಪತ್ರ ಯಾರ ಹೆಸರಿನಲ್ಲಿ ಇದೆ ಎಂದು ನಮೂದಿಸಬೇಕು.
- ನಂತರ ನಿಮ್ಮ ಆಧಾರ್ ನಲ್ಲಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬಲಭಾಗದಲ್ಲಿರುವ Verify ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಮೇಲಿನ ವಿಧಾನವನ್ನು ಮೂಲಕ ನೀವು ನಿಮ್ಮ ಜಮೀನು ಪತ್ರಗಳಿಗೆ ಆಧಾರ್ ಲಿಂಕ್(Aadhaar link) ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.