Annabhagya Scheme: ಮೂರು ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲವೇ? ಈ ಕೆಲಸ ತಪ್ಪದೇ ಮಾಡಿ, ತಕ್ಷಣ ನಿಮ್ಮ ಖಾತೆಗೆ ಹಣ ಜಮಾ!

Annabhagya Scheme: ಮೂರು ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲವೇ? ಈ ಕೆಲಸ ತಪ್ಪದೇ ಮಾಡಿ, ತಕ್ಷಣ ನಿಮ್ಮ ಖಾತೆಗೆ ಹಣ ಜಮಾ!

ರಾಜ್ಯದ ನೂತನ ಸರ್ಕಾರವು ಜನರ ಹಸಿವನ್ನು ನೀಗಿಸುವ ಸಲುವಾಗಿ, ಅನ್ನಭಾಗ್ಯ ಯೋಜನೆಯನ್ನು(Annabhagya Scheme) ಜಾರಿಗೆ ತಂದಿದೆ, ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ(Guarantee schemes), ಅನ್ನಭಾಗ್ಯ ಯೋಜನೆಯ ಕೂಡ ಒಂದಾಗಿದೆ. ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್(BPL Card) ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುವುದಾಗಿ ಸರ್ಕಾರವು ಭರವಸೆ ನೀಡಿತ್ತು, ಆದರೆ ಆ ಭರವಸೆಯನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಸಾಧ್ಯವಾಗಲಿಲ್ಲ.

ಈ ಯೋಜನೆಯ ಫಲಾನುಭವಿಯಾದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಿಸಲು ಸರ್ಕಾರದಿಂದ ಸಾಧ್ಯವಾಗಲಿಲ್ಲ, ಅಷ್ಟು ದೊಡ್ಡ ಪ್ರಮಾಣದ ಅಕ್ಕಿಯನ್ನು ವಿತರಿಸಲು ಸಾಧ್ಯವಾಗದೇ ಇರುವ ಕಾರಣ, ಐದು ಕೆಜಿ ಅಕ್ಕಿ ವಿತರಣೆ ಮಾಡಿ, 5 ಕೆಜಿ ಅಕ್ಕಿಯ ಬದಲಾಗಿ,1 KG ಅಕ್ಕಿಗೆ 34 ರೂಪಾಯಿಯಂತೆ, ಒಬ್ಬ ವ್ಯಕ್ತಿಗೆ ತಿಂಗಳಿಗೆ 170 ರೂ.ಗಳನ್ನು ನೀಡುವುದಾಗಿ ಸರ್ಕಾರ ನಿರ್ಧಾರವನ್ನು ಮಾಡಿತು.

WhatsApp Group Join Now
Telegram Group Join Now

ಅನ್ನಭಾಗ್ಯ ಯೋಜನೆಯ (Annabhagya Scheem) ಹಣವನ್ನು ಮನೆಯ ಮುಖ್ಯ ಸದಸ್ಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರವು ನಿರ್ಧರಿಸಿತು, ಅದರಿಂದ ಯೋಜನೆಯು ಆರಂಭವಾದ ಬಳಿಕ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಹಣ ನೀಡುತ್ತಾ ಬಂದಿದೆ.

ಅನ್ನಭಾಗ್ಯ ಯೋಜನೆಯ(Annabhagya Scheem) 10 ಕಂತುಗಳ ಹಣ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ(Bank Account) ವರ್ಗಾವಣೆ ಆಗಿದೆ, ಆದರೆ ಕೆಲವರಿಗೆ ಇನ್ನು ಉಳಿದ ಮೂರು ಕಂತುಗಳ ಹಣ ವರ್ಗಾವಣೆ(Money Transfer) ಆಗಿಲ್ಲ, ಅಂಥವರು ಈ ಕೆಲಸಗಳನ್ನು ಮಾಡಬೇಕು ಆಗ ಮಾತ್ರ ಪೆಂಡಿಂಗ್ ಇರುವ ಹಣ (Pending Money) ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಯಾವ ಕೆಲಸಗಳನ್ನು ಮಾಡಬೇಕು ಎಂದು ಈ ಈ ಲೇಖನವನ್ನು ಓದುವ ಮೂಲಕ ತಿಳಿದುಕೊಳ್ಳಿ.

ಯಾವ ಕಾರಣಕ್ಕೆ ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲ; 

  • ನಿಮ್ಮ ಆಧಾರ್ ಕಾರ್ಡ್ ಗೆ NCPI ಮ್ಯಾಪಿಂಗ್ ಮಾಡಿಸಿಲ್ಲವೆಂದರೆ, ನಿಮ್ಮ ಖಾತೆಗೆ ಹಣ ಬರುವುದಿಲ್ಲ.
  • ಕುಟುಂಬದ ಬಿಪಿಎಲ್ ಕಾರ್ಡ್(BPL Card) ಗೆ ಆಕ್ಟಿವ್ ಆಗಿರುವ ಮೊಬೈಲ್ ನಂಬರ್ (Mobile Number) ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ (Bank Account Link) ಮಾಡದೆ ಇದ್ದರೆ ಈ ಯೋಜನೆಯ ಹಣ ಬರುವುದಿಲ್ಲ.
  • ನಿಮ್ಮ ರೇಷನ್ ಕಾರ್ಡಿನಲ್ಲಿ ಯಾರೆಲ್ಲಾ ಸದಸ್ಯರಿದ್ದಾರೋ, ಅವರ kyc ಕಡ್ಡಾಯವಾಗಿ ಆಗಿರಬೇಕು.

ಮೇಲೆ ನೀಡಲಾದ ಮೂರು ಮುಖ್ಯ ಕೆಲಸಗಳು ಆಗಿಲ್ಲವೆಂದರೆ, ಅಂಥವರ ಖಾತೆಗೆ ಅನ್ನ ಭಾಗ್ಯ ಯೋಜನೆಯ(Annabhagya) ಹಣ ಜಮಾ ಆಗುವುದಿಲ್ಲ. ಬಾಕಿ ಇರುವ ಈ ಕೆಲಸಗಳನ್ನು ಮಾಡಿಸಿಕೊಂಡರೆ ನಿಮ್ಮ ಖಾತೆಗೆ ತಕ್ಷಣವೇ ಪೆಂಡಿಂಗ್ (Pending) ಇರುವ ಮೂರು ಕಂತಿನ ಹಣ ಜಮಾ ಆಗುತ್ತದೆ.

ಹಾಗಾಗಿ ಫಲಾನುಭವಿಗಳು ಈ ಕೆಲಸಗಳನ್ನು ತಕ್ಷಣವೇ ಮಾಡಿಸಿಕೊಳ್ಳಿ, ಹತ್ತಿರವಿರುವ ಪಡಿತರ ಕೇಂದ್ರಕ್ಕೆ ಭೇಟಿ ನೀಡಿ ekyc ಮಾಡಿಸಿಕೊಳ್ಳಿ. ಈ ಮೂರು ಕೆಲಸಗಳು ಪೂರ್ಣಗೊಂಡರೆ, ನಿಮ್ಮ ಖಾತೆಗೆ ತಕ್ಷಣವೇ ಹಣ ಜಮಾ ಆಗುತ್ತದೆ.

ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment