ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿ(IPPB)ನಲ್ಲಿ ತಂತ್ರಜ್ಞಾನ ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಪ್ರತಿನಿತ್ಯ ಉಚಿತ ಉದ್ಯೋಗ ವಾರ್ತೆಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(Indian Post Payment Bank) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯೂ ಈಗಾಗಲೇ ಬಿಡುಗಡೆಯಾಗಿದೆ, ಅಧಿಸೂಚನೆಯ ಪ್ರಕಾರ ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಆಯ್ಕೆಯ ವಿಧಾನ, ಉದ್ಯೋಗಸ್ಥಳ ಹಾಗೂ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗುತ್ತದೆ ಅಭ್ಯರ್ಥಿಗಳು ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು
ಇಲಾಖೆಯ ಹೆಸರು | ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) |
ಹುದ್ದೆಯ ಹೆಸರು | ವಿವಿಧ ಹುದ್ದೆಗಳು |
ವೇತನ ಶ್ರೇಣಿ | ಅಧಿ ಸೂಚನೆಯ ಪ್ರಕಾರ |
ಉದ್ಯೋಗ ಸ್ಥಳ | ALL INDIA |
ಖಾಲಿ ಇರುವ ಹುದ್ದೆಗಳು | 54 |
ಅರ್ಜಿ ಸಲ್ಲಿಸುವ ಬಗೆ | ONLINE |
ಖಾಲಿ ಇರುವ ಹುದ್ದೆಗಳು: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 54 ಹುದ್ದೆಗಳು ಖಾಲಿ ಇವೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳ ವಿವರಗಳು;
- ಕಾರ್ಯನಿರ್ವಾಹಕ (ಸಹ ಸಲಹೆಗಾರ): 28
- ಕಾರ್ಯನಿರ್ವಾಹಕ (ಸಮಾಲೋಚಕ) :21
- ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ):05
ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಧಿಸೂಚನೆಯ ಪ್ರಕಾರ ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ BCA, B.Sc, B.Tech ಅಥವಾ B.E, MCA ಪದವಿಯನ್ನು ಪಡೆದಿರಬೇಕು.
ವಯೋಮಾನ ಪ್ರಕ್ರಿಯೆ:
ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹುದ್ದೆಗಳ ಆಧಾರದ ಮೇಲೆ ವಯಸ್ಸಿನ ವಯೋಮಿತಿಯನ್ನು ಹೊಂದಿರಬೇಕು, ವಿವರಗಳು ಕೆಳಗಿನಂತಿವೆ;
ಹುದ್ದೆಯ ಹೆಸರು | ವಯೋಮಾನ ಪ್ರಕ್ರಿಯೆ |
ಕಾರ್ಯನಿರ್ವಾಹಕ (ಸಹ ಸಲಹೆಗಾರ) | 22 ರಿಂದ 30 ವರ್ಷ |
ಕಾರ್ಯನಿರ್ವಾಹಕ (ಸಮಾಲೋಚಕ) | 22 ರಿಂದ 40 ವರ್ಷ |
ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ) | 22 ರಿಂದ 45 ವರ್ಷ |
ಅರ್ಜಿ ಶುಲ್ಕದ ವಿವರಗಳು;
- SC,ST PWD ಅಭ್ಯರ್ಥಿಗಳು ರೂ.150,
- ಇತರ ಎಲ್ಲಾ ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸುವಿಕೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ | 04 May 2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 24 May 2024 |
ಆಯ್ಕೆಯ ವಿಧಾನ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಿ ನಂತರ ಸಂದರ್ಶನ ಮಾಡುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ: ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ ರೂ.10,00,000 ದಿಂದ ರೂ.25,00,000 ದ ವರೆಗೆ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್ಸೈಟ್ | ippbonline.com |
ಅಧಿಕೃತ ಅಧಿಸೂಚನೆ | ಡೌನ್ಲೋಡ್ ಮಾಡಿಕೊಳ್ಳಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ. |
ಪ್ರತಿನಿತ್ಯ ಉಚಿತ ಉದ್ಯೋಗ ವಾರ್ತೆಗಳನ್ನು ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.