ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗದ ಜನರಿಗೆ ಅದರಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ಮಹಿಳೆಯರಿಗೆ ಸ್ಟ್ಯಾಂಡ್ ಅಪ್ ಯೋಜನೆ(Standup Schemes)ಯನ್ನು ಜಾರಿಗೆ ತಂದಿದ್ದು ಏನಿದು ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಓದಿ, ಇನ್ನು ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಸ್ಟ್ಯಾಂಡ್ ಅಪ್ ಯೋಜನೆ!
ಏಪ್ರಿಲ್ 5 2016ರಂದು ಆಗಿನ ಪ್ರಧಾನಿ ಆಗಿರುವಂತಹ ನರೇಂದ್ರ ಮೋದಿ ಅವರು ಸ್ಟ್ಯಾಂಡ್ ಅಪ್ ಯೋಜನೆ(Standup Schemes)ಯನ್ನು ಆರಂಭಿಸಿದರು, ಈ ಯೋಜನೆಯಿಂದ ಸ್ವ ಉದ್ಯೋಗವನ್ನು ಮಾಡುವಂತಹ ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ(ST) ಮಹಿಳೆಯರಿಗೆ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ. ದೇಶದಲ್ಲಿ ಈ ಯುವಕರು ತಮ್ಮದೇ ಆದಂತಹ ಸ್ವಂತ ಉದ್ಯೋಗವನ್ನು ಆರಂಭಿಸುವ ಸಲುವಾಗಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ ಇದರಿಂದಾಗಿ ನಿರುದ್ಯೋಗ ತನ ಕೂಡ ಕಡಿಮೆಯಾಗುತ್ತದೆ.
ಈಗಾಗಲೇ ಈ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ(SC) ಪರಿಶಿಷ್ಟ ಪಂಗಡ(ST) ಮಹಿಳೆಯರಿಗೆ ರೂ 1.25 ಲಕ್ಷ ಬ್ಯಾಂಕುಗಳಿಂದ 2.5 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸಾಲ ಸೌಲಭ್ಯ(Bank Loan)ವನ್ನು ಈಗಾಗಲೇ ನೀಡಲಾಗಿದೆ.
ಈ ಯೋಜನೆಯಿಂದ ಸಿಗುವ ಪ್ರಯೋಜನಗಳು;
- ಯೋಜನೆಯಿಂದ ಸಾಲವನ್ನು ಪಡೆದ ಮಹಿಳಾ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ತಮ್ಮದೇ ಆದಂತಹ ಸ್ವಂತ ಉದ್ಯೋಗವನ್ನು ಆರಂಭಿಸಲು ಸಾಧ್ಯವಿದೆ.
- ಈ ಯೋಜನೆ ಅಡಿಯಲ್ಲಿ ರೂ. 10 ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೆ ಸಾಲವನ್ನು ನೀಡುವ ಮೂಲಕ ಅತ್ಯಂತ ಕಡಿಮೆ ಬಿಡಿ ದರದಲ್ಲಿ ಸಾಲ ಸೌಲಭ್ಯವನ್ನು ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಮತ್ತು ಮಹಿಳೆಯರಿಗೆ ನೀಡುವ ಮೂಲಕ ಅವರಿಂದ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಂತಹ ಕೆಲಸವನ್ನು ಸರ್ಕಾರ ಮಾಡಲು ಹೊರಟಿದೆ.
- ಯೋಜನೆ ಅಡಿಯಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಏಳು ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಸಾಲವನ್ನು ನೀವು ಮರುಪಾವತಿ ಮಾಡಬಹುದು.
ಈ ಯೋಜನೆಗೆ ಇರಬೇಕಾದ ಅರ್ಹತೆಗಳು;
- ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮೊದಲು ಭಾರತೀಯ ನಿವಾಸಿಯಾಗಿರಬೇಕು,
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಯೋಜನೆ ಅಡಿಯಲ್ಲಿ ಈಗಾಗಲೇ ಸಾಲ ಪಡೆದವರಿಗೆ ಪುನಹ ಮತ್ತೆ ಸಾಲವನ್ನು ನೀಡಲಾಗುವುದಿಲ್ಲ.
- ನೀವು ಯಾವ ವ್ಯಾಪಾರ ಅಥವಾ ಉದ್ಯಮಕ್ಕೆ ಸಾಲವನ್ನು ಪಡೆದುಕೊಳ್ಳುತ್ತಿದ್ದೀರೋ, ಅದರಲ್ಲಿ ನಿಮ್ಮ ಪಾಲವಾರಿಕೆಯು ಶೇಕಡ 51% ಕ್ಕಿಂತ ಹೆಚ್ಚಾಗಿರಬೇಕು.
ದಾಖಲೆಗಳು;
- ಆಧಾರ್ ಕಾರ್ಡ್ (Aadhar Card)
- ಜಾತಿ ಪ್ರಮಾಣ ಪತ್ರ (Cast Cirtificate)
- ಪ್ಯಾನ್ ಕಾರ್ಡ್ (Pan Card)
- ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್ (Bank PassBook Details)
- ಆದಾಯ ಪ್ರಮಾಣ ಪತ್ರ(Income Cirtificate)
- ಪಾಸ್ಪೋರ್ಟ್ ಸೈಜ್ ಫೋಟೋ (Passport Size Photo)
- ನಿಮ್ಮ ಪಾರ್ಟ್ನರ್ ಶಿಪ್ ನ ಸರ್ಟಿಫಿಕೇಟ್ ಹಾಗೂ ಮೊಬೈಲ್ ನಂಬರ್ (Partnership Cirtificate and Mobile Number)
- ಭೂಮಿಯ ಅಡ್ರೆಸ್ ಪ್ರೂಫ್ (Land Adress Proofs)
ಸ್ಟ್ಯಾಂಡ್ ಅಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು ನೀವು standupmitra.in ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೆಳಗಡೆ ಸಾಲವನ್ನು ಪಡೆದುಕೊಳ್ಳುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನಂತರ ಅಲ್ಲಿ ಕೇಳಲಾಗಿರುವ ನಿಮ್ಮ ಹೆಸರು ಇ-ಮೇಲ್ ಐಡಿ (Email Id) ಎಲ್ಲಾ ದಾಖಲೆಗಳನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ.
- ನಂತರ ನಿಮ್ಮ ಮೊಬೈಲ್ಗೆ ಬರುವ ಓಟಿಪಿ (OTP) ಮೂಲಕ ಲಾಗಿನ್ ಆಗಿ.
- ನಂತರ ಸರಿಯಾದ ದಾಖಲೆಗಳನ್ನು ಲಗತ್ತಿಸಬೇಕಾಗುತ್ತದೆ, ಲಗತ್ತಿಸಿದ ಎಲ್ಲಾ ದಾಖಲೆಗಳ ಡಾಕ್ಯುಮೆಂಟ್ ಅಟ್ಯಾಚ್(Document Attached) ಮಾಡಬೇಕು.
- ಈ ಮೇಲಿನ ಹಂತಗಳ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದಂತಾಗುತ್ತದೆ.
- ಎಲ್ಲಾ ರೀತಿಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು, ಇಲ್ಲಿ ಕ್ಲಿಕ್ ಮಾಡಿ.