7th Pay Commision: ಈ ತಿಂಗಳಿನಿಂದ ಸಿಗಲಿದೆ ಏಳನೇ ವೇತನ ಆಯೋಗದ ಭತ್ಯೆ! ಇಷ್ಟು ವೇತನ ಸಿಗಲಿದೆ.!
ರಾಜ್ಯ ಸರ್ಕಾರವು ಜಾಲಿ ಮಾಡಿರುವ, ಸರ್ಕಾರಿ ನೌಕರರ ವೇತನದ ಹೆಚ್ಚಳದ (Govt Employees Salary hike) ಕುರಿತಂತೆ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಲೇ ಇದೆ. ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ, ಬೇಡಿಕೆಯ ಈಡೇರಿಕೆಗಾಗಿ ನೌಕರರು ಕಾಯುತ್ತಿದ್ದಾರೆ.
ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿವೆ, 8 ನೇ ವೇತನ ಆಯೋಗ ರಚನೆ ನಡೆಯುತ್ತಿದೆ, 7 ನೇ ವೇತನ(7thPay) ಪರಿಷ್ಕರಣೆ ನೌಕರರ ಬೇಡಿಕೆಯಾಗಿದೆ. ಸದ್ಯ ಕೇಂದ್ರ ಸರ್ಕಾರವೂ ಕೂಡ 7 ನೇ ವೇತನ(7thPay Commision) ಹೆಚ್ಚಳದ ಬಗ್ಗೆ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರಿ ನೌಕರರ ವೇತನ ಈ ತಿಂಗಳಿನಲ್ಲಿ ಹೆಚ್ಚಾಗಲಿದೆ ಎನ್ನುವ ಬಗ್ಗೆ ಮಾಹಿತಿಯು ಎಲ್ಲೆಡೆ ಕೇಳಿ ಬರುತ್ತಿದೆ.
ಸರ್ಕಾರೀ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಹಿಂದೆ ನಡೆದ ನಾಲ್ಕನೇ ವೇತನ ಆಯೋಗದ ಅವಧಿಯಲ್ಲಿ, DA ಯನ್ನು ಗರಿಷ್ಠ ಶೇ.170 ಕ್ಕೆ ಹೆಚ್ಚಿಸಲಾಗಿದೆ, 2024 ಮಾರ್ಚ್ ನಲ್ಲಿ ಸರ್ಕಾರವು ತುಟ್ಟಿ ಭತ್ಯೆಯನ್ನು(DA) ಪ್ರತಿಶತ 4 ರಷ್ಟು ಹೆಚ್ಚಿಸಿತು, ಇದೀಗ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ತರಕಾರಿ ಅಧಿಕಾರಿಗಳಿಗೆ ಸಿಹಿ ಸುದ್ದಿಯೊಂದು(Good News) ಹೊರಬಿದ್ದಿದೆ, ಕೇಂದ್ರ ಸರ್ಕಾರಿ ನೌಕರರ DA ಮೂರರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ, ತುಟ್ಟಿ ಭತ್ಯೆ ಇದು ಸರ್ಕಾರಿ ನೌಕರರ ಸಂಬಳದ ಪ್ರಮುಖ ಅಂಶವಾಗಿದೆ.
ಸಪ್ಟೆಂಬರ್ ತಿಂಗಳಿನಲ್ಲಿ ನೌಕರರ ವೇತನ ಹೆಚ್ಚಾಗಲಿದೆ..!
ಜುಲೈನಲ್ಲಿ DA ಯನ್ನು ಹೆಚ್ಚಿಸಲಾಗಿದ್ದರು, ಹೆಚ್ಚಳವು ಸಪ್ಟೆಂಬರ್ 1 2024 ರಂದು ಜಾರಿಗೆ ಬರಲಿದೆ, 3% ತುಟ್ಟಿಭತ್ಯೆ ಹೆಚ್ಚಳವು ಇಲ್ಲಿಯವರೆಗೆ ಸ್ಥಿರವಾಗಿದೆ, ದೇಶದ ಹಣದುಬ್ಬರದ ಪರಿಸ್ಥಿತಿ ಆಧಾರದ ಮೇಲೆ 4% ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಪ್ರಸ್ತುತ DA ಮೂಲವೇತನ 50 ಪ್ರತಿಶತವಾಗಿದೆ, ಏಳನೇ ವೇತನ(7thPay) ಆಯೋಗದ ಶಿಫಾರಸ್ಸಿನ ಅನ್ವಯ DA ಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ತುಟ್ಟಿ ಭತ್ಯೆ(DA) ಹೆಚ್ಚಾದರೆ, ಮನೆ ಬಾಡಿಗೆಯಂತಹ ಭತ್ಯೆಗಳು (HRA) ಹೆಚ್ಚಾಗುತ್ತದೆ, ಈ ಬದಲಾವಣೆಗಳು ಈಗಾಗಲೇ ನಡೆದಿದೆ. ಸರ್ಕಾರಿ ನೌಕರರು ಸಪ್ಟೆಂಬರ್ ತಿಂಗಳಿನಲ್ಲಿ 7ನೇ ವೇತನ ಆಯೋಗದ(7thPay Commision) ಸಂಬಳವನ್ನು ಪಡೆಯಲಿದ್ದಾರೆ ಎನ್ನಬಹುದು, ಈ ಬಗ್ಗೆ ಸರ್ಕಾರವು ಯಾವ ರೀತಿಯ ಮಾಹಿತಿಯನ್ನು ಹೊರಡಿಸಲಿದೆ ಎಂದು ಕಾದು ನೋಡಬೇಕಾಗಿದೆ.