SBI LOAN: SBI ನಿಂದ ನಿಮಿಷದಲ್ಲಿ ಸಿಗಲಿದೆ ರೂ.50,000 ಸಾಲ

ನೀವು ಸ್ವಂತ ವ್ಯಾಪಾರ ಮಾಡಲು ಅಥವಾ ಇರುವ ವ್ಯಾಪಾರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಕನಸನ್ನು ಕಾಣುತ್ತೀರಿ, ಆದರೆ ಅದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ, ಹಣವನ್ನು ಯಾರು ಕೊಡುತ್ತಾರೆ ಹೇಳಿ, ಯಾರನ್ನು ಕೇಳಿದರು ಇಲ್ಲ ಎನ್ನುವ ಉತ್ತರ ಬಿಟ್ಟರೆ ಮತ್ತೇನು ಸಿಗುವುದಿಲ್ಲ.

ಆದರೆ ಈ SBI ನ Mundra Loan ಯೊಜನೆಯ ಅಡಿಯಲ್ಲಿ, ಯಾವುದೇ ಚಿಂತೆ ಇಲ್ಲದೆ ನಿಮಿಷದಲ್ಲಿ ರೂ.50,000 ಸಾಲ ಸಿಗಲಿದೆ, ಇದು ಯಾವ ಯೋಜನೆ? ಈ ಸಾಲವನ್ನು ಪಡೆಯಲು ನಮ್ಮ ಹತ್ತಿರ ಯಾವೆಲ್ಲ ಅರ್ಹತೆಗಳಿರಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ, ಪ್ರತಿನಿತ್ಯ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

SBI SHISHU MUDRA LOAN YOJANA:

WhatsApp Group Join Now
Telegram Group Join Now

ನೀವು ನಿಮ್ಮದೇ ಆದ ಹೊಸ ವ್ಯವಹಾರವನ್ನು ಆರಂಭಿಸಲು ಬಯಸಿದರೆ, ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದರೆ, ನೀವು ಯಾವುದೇ ರೀತಿಯ ಚಿಂತೆ ಪಡಬೇಕಾಗಿಲ್ಲ. ಏಕೆಂದರೆ ಎಸ್ ಬಿ ಐ ಶಿಶು ಮುದ್ರಸಾಲ ಯೋಜನೆ (SBI SHISHU MUDRA LOAN YOJANA) ಅಡಿಯಲ್ಲಿ, ಸಾಲವನ್ನು (SBI LOAN) ಪಡೆಯಬಹುದು.

ನೀವು ಈ ಯೋಜನೆಯಡಿಯಲ್ಲಿ ವ್ಯಾಪಾರವನ್ನು (BUSINESS) ಆರಂಭಿಸಲು ಸಾಲವನ್ನು (SBI LOAN) ಪಡೆಯಬಹುದು, ಹೇಗೆ ಸಾಲ ಪಡೆಯಬಹುದು ಹಾಗೂ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ.

SBI ನ ಶಿಶು ಮುದ್ರ ಸಾಲ (loan) ಯೋಜನೆಯು, ದೇಶದಲ್ಲಿನ ಸಣ್ಣ ಮತ್ತು ದೊಡ್ಡ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಬೆಳೆಸಲು(Business Growth) ಸಾಲವನ್ನು ಒದಗಿಸುತ್ತದೆ, ಪ್ರಧಾನಮಂತ್ರಿಯವರ ಮುದ್ರಾ ಯೋಜನೆಯ ಅಂಗವಾಗಿ, SBI Shishu Mudra Loan ಲಭ್ಯವಿದೆ, ಇದರಲ್ಲಿ ನೀವು ಗರಿಷ್ಠ ರೂ.50,000 ವರೆಗೆ ಸಾಲವನ್ನು ಪಡೆಯಬಹುದು.

ಅರ್ಜಿದಾರನು ಈ ಯೋಜನೆಯಡಿಯಲ್ಲಿ ಪಡೆದ ಸಾಲವನ್ನು 60 ತಿಂಗಳ (5 Years) ಒಳಗೆ ಮರು ಪಾವತಿಸಬೇಕಾಗುತ್ತದೆ,12% ಸಾಲದ ಮೇಲಿನ ವಾರ್ಷಿಕ ಬಡ್ಡಿ(Intrest) ಆಗಲಿದೆ, ಯೋಜನೆಯ ವಿಶೇಷವೇನೆಂದರೆ, ಸಾಲವು ಯಾವುದೇ ಗ್ಯಾರಂಟಿ ಇಲ್ಲದೆ ಲಭ್ಯವಿರುತ್ತದೆ, ಇದಕ್ಕಾಗಿ ಅರ್ಜಿದಾರನು ಯಾವುದೇ ಜಾಮೀನು ಅಥವಾ ಗ್ಯಾರಂಟಿ(Guarantee) ನೀಡುವ ಅಗತ್ಯವಿರುವುದಿಲ್ಲ.

SBI ಶಿಶುಮುದ್ರ ಸಾಲ ಯೋಜನೆಯ ಲಕ್ಷಣಗಳು

ಭಾರತೀಯ ನಾಗರಿಕರು ಈ ಯೋಜನೆಯ ಸಾಲವನ್ನು ಪಡೆಯಬಹುದು, ಈ ಸಾಲವು(Loan) ಅರ್ಜಿದಾರರಿಗೆ ತಮ್ಮ ಸ್ವಂತ ಉದ್ಯಮವನ್ನು(Own Business) ಆರಂಭಿಸಲು ಅಥವಾ ಇರುವ ವ್ಯವಹಾರವನ್ನು(Business) ಮತ್ತಷ್ಟು ಅಭಿವೃದ್ಧಿಗೊಳಿಸಲು ಲಭ್ಯವಿದೆ. ನಿಮಗೆ ರೂ. 50,000 ಕ್ಕಿಂತ ಹೆಚ್ಚಿನ ಸಾಲವು ಅಗತ್ಯವಿದ್ದರೆ, SBI ಕಿಶೋರ್ ಮುದ್ರಾ ಸಾಲದ ಯೋಜನೆಯ(Scheems) ಲಭ್ಯವಿದೆ, ಇದರಲ್ಲಿ ನೀವು ರೂ. 50,000 ದಿಂದ 5,00,000 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಸಾಲದ ಅಗತ್ಯವಿದ್ದರೆ, SBI ನ ತರುಣ್ ಮುದ್ರಾ ಸಾಲದ ಯೋಜನೆಯ ಲಭ್ಯವಿದೆ, ಇದರಲ್ಲಿ ರೂ.5 ಲಕ್ಷದಿಂದ 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಸಾಲದ ಪ್ರಯೋಜನವನ್ನು ಪಡೆಯಲು ಯಾವುದೇ SBI ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯನ್ನು ಪಡೆಯಲು ಇರಬೇಕಾದ ಅರ್ಹತೆಗಳು;

  • ಭಾರತೀಯ ಪ್ರಜೆಯಾಗಿರಬೇಕು,
  • ಅಭ್ಯರ್ಥಿಯು ವಯೋಮಿತಿಯು 18 ರಿಂದ 60 ವರ್ಷಗಳ ನಡುವೆ ಇರಬೇಕು,
  • ಅರ್ಜಿದಾರನ ಬಳಿ ತನ್ನದೇ ಆದ ಸ್ವಂತ ವ್ಯವಹಾರ ಇರಬೇಕು.
  • ಅರ್ಜಿದಾರನ SBI ಖಾತೆಯು 3 ವರ್ಷ ಹಳೆಯದಾಗಿರಬೇಕು,
  • GST Returns ಮತ್ತು Income Tax Returns ಸಂಪೂರ್ಣ ದಾಖಲೆ ಹೊಂದಿರಬೇಕು ಮತ್ತು
  • ಈ ಸಾಲವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರು ಸಹ ಪಡೆಯಬಹುದು.

SBI LOAN ಪಡೆಯಲು ಬೇಕಾದ ದಾಖಲೆಗಳು;

  • ಆಧಾರ್ ಕಾರ್ಡ್ (Aadhar Card)
  • ಪಾನ್ ಕಾರ್ಡ್ (Pan Card)
  • ನಿವಾಸ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ (Income Cirtificate)
  • ಕ್ರೆಡಿಟ್ ಕಾರ್ಡ್ ವರದಿ (Credit Card Details)
  • ಮೊಬೈಲ್ ನಂಬರ್ (Mobile Number)
  • ಬ್ಯಾಂಕ್ ಪಾಸ್ ಬುಕ್ (Bank Passbook Details)
  • ವ್ಯಾಪಾರ ಪ್ರಮಾಣ ಪತ್ರ (Business Cirtificate)

ಶಿಶು ಮುದ್ರ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೆ ಭೇಟಿ ನೀಡಿ, ಅಲ್ಲಿರುವ ಜೋಗಿಯ ಜೊತೆಗೆ ಶಿಶು ಮುದ್ರಾ ಸಾಲದ ಯೋಜನೆಯ ಬಗ್ಗೆ ಮಾತನಾಡಿ, ಅರ್ಜಿಯನ್ನು ಸಲ್ಲಿಸಬಹುದು. ನಂತರ ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ನೀಡಬೇಕು, ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುತ್ತಾರೆ. ಇದೇ ತರಹದ ವಾಣಿಜ್ಯ ವಿಷಯದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು,ಹಾಗೂ ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ needs WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿ
WhatsApp Group Join Now
Telegram Group Join Now

Leave a Comment