ಗೃಹ ಲಕ್ಷ್ಮಿ(Gruha Lakshmi) ಯೋಜನೆಯ ಫಲಾನುಭವಿಗಳು 11ನೇ ಕಂತಿನ ಹಣವು ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದರು, ಆದರೆ ಈಗ ಅವರಿಗೆಲ್ಲ ಸಚಿವೆಯಾದ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ, ಏನದು ಆ ಸಿಹಿ ಸುದ್ದಿ ಎಂದು ಈ ಲೇಖನದ ಮೂಲಕ ತಿಳಿಯೋಣ, ಪ್ರತಿನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇಷ್ಟು ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ರೂ.2000 ಬರುತ್ತಿತ್ತು, ಆದರೆ ಈಗ ರೂ.4000 ಅಂದರೆ ಒಟ್ಟಿಗೆ ಡಬಲ್ ಹಣ ಮಹಿಳೆಯರ ಖಾತೆಗೆ ಜಮ ಆಗಲಿದೆ, ಎಂದು ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ರೀತಿಯ ಸಂದೇಶವನ್ನು ನೀಡಿದ್ದಾರೆ.
ಗೃಹಲಕ್ಷ್ಮಿ(Gruha Lakshmi) ಯೋಜನೆಯ ಆರಂಭಗೊಂಡು ಹತ್ತು ತಿಂಗಳು ಕಳೆದಿದ್ದು, ಮಹಿಳೆಯರಿಗೆ 10 ತಿಂಗಳು ಸಹ ಸರಿಯಾಗಿ ಹಣ ವರ್ಗಾವಣೆ ಆಗಿದೆ, ಆದರೆ 11 ನೇ ಕಂತಿನ ಹಣ ಯಾರಿಗೂ ವರ್ಗಾವಣೆ ಆಗಿಲ್ಲ, ಇದರಿಂದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಚುನಾವಣೆಯ ಫಲಿತಾಂಶ ಗಡಿಬಿಡಿಯ ಕಾರಣ 11ನೇ ಕಂತಿನ ಹಣ ಬಿಡುಗಡೆ ಆಗುವುದಕ್ಕೆ ಸ್ವಲ್ಪ ತಡ ಆಗಿದೆ, ಆದರೆ ಈಗ ಸರ್ಕಾರದ ವತಿಯಿಂದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ.
11 ಮತ್ತು 12ನೇ ಕಂತಿನ ಹಣ ಜಮಾ ಆಗುವುದು ಯಾವಾಗ?
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ 11 ಮತ್ತು 12ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಆತಂಕ ಮೂಡಿತ್ತು, ಆದರೆ ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅದಕ್ಕೆ ಉತ್ತರ ಒಂದನ್ನು ನೀಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ, 11 ಮತ್ತು 12ನೇ ಕಂತಿನ ಹಣ ಒಟ್ಟಿಗೆ ಜಮಾ ಆಗಲಿದೆ, ಎಲ್ಲ ವಹಿವಾಟು ಕ್ಲಿಯರ್ ಆಗಲಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಎರಡು ಕಂತುಗಳ ಸೇರಿ ಫಲಾನುಭವಿಗಳ ಖಾತೆಗೆ ರೂ.4,000 ಜಮಾ ಆಗಲಿದೆ, ಹಾಗೆಯೇ ಮತ್ತೊಂದು ವಿಚಾರ ಸಹ ಇದ್ದು ಒಂದು ವೇಳೆ ಯಾರಾದರೂ ಇನ್ನೂ ಕೂಡ ಗ್ರಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿಲ್ಲ ಎಂದರೆ ಅಂಥವರು ಈಗಲೂ ಸಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯವನ್ನು ಪಡೆದುಕೊಳ್ಳಬಹುದು, ಪ್ರತಿನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.