ಕೇಂದ್ರ ಸರ್ಕಾರವು ವಿವಿಧ ವರ್ಗಗಳ ಏಳಿಗೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿವಿಧ ರೀತಿಯಾದಂತಹ ಸಾಲಗಳ ಯೋಜನೆಗಳಿವೆ. ಅದರಲ್ಲಿ ಪಿಎಂ ವಿದ್ಯಾಲಕ್ಷ್ಮೀ (PM Vidya Lakshmi) ಯೋಜನೆ ಕೂಡ ಒಂದಾಗಿದೆ, ರೂ.15 ಲಕ್ಷ ರೂವರೆಗೂ ಸಾಲ ಸಿಗಲಿದೆ, ಭಾರತದಲ್ಲಿ ಕೋರ್ಸ್(Course) ಮಾಡುವುದಾದರೆ ಏಳೂವರೆ ಲಕ್ಷ ರೂವರೆಗೂ ಸಾಲವನ್ನು ಕೊಡಲಾಗುತ್ತದೆ, ಒಟ್ಟು 14 ಬ್ಯಾಂಕುಗಳಲ್ಲಿ ಸಾಲ ಸಿಗಲಿದ್ದು, ನೀವು ಇಷ್ಟಪಡುವ ಬ್ಯಾಂಕ್ ಅನ್ನು ಸಾಲಕ್ಕೆ ಆಯ್ಕೆ ಮಾಡಿಕೊಳ್ಳಬಹುದು, ಇನ್ನು ಹೆಚ್ಚಿನ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ.
ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣ ಇವತ್ತು ಬಹಳ ದುಬಾರಿ, ಉತ್ತಮ ವೃತ್ತಿ ಆರಂಭಿಸಲು ಬಹಳ ಅಗತ್ಯ ಇರುವ ಉನ್ನತ ಶಿಕ್ಷಣವನ್ನು ಹಣವಿಲ್ಲವೆಂಬ ಕಾರಣಕ್ಕೆ ಕೈಬಿಡಲು ಆಗುವುದಿಲ್ಲ. ಸಾಲವಾದರೂ ಸರಿ ಶಿಕ್ಷಣವನ್ನು ಪೂರ್ಣಗೊಳಿಸಬೇಕಾಗುತ್ತದೆ, ಕೇಂದ್ರ ಸರ್ಕಾರ ಇಂಥ ಸಂದರ್ಭಗಳಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಪಿಎಂ ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಯೋಜನೆ(PM Vidya Lakshmi Education Loan Yojana) ಯನ್ನು ಆರಂಭಿಸಿದೆ. 2015 ರಿಂದ ಚಾಲನೆಯಲ್ಲಿರುವ ಈ ಸ್ಕೀಮ್ನಲ್ಲಿ(Scheems) ಭಾರತದ ಯಾವುದೇ ನಾಗರಿಕರು ಸಾಲವನ್ನು ಪಡೆಯಬಹುದು, ಮನೆಯಲ್ಲಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಇರುವ ವಿದ್ಯಾರ್ಥಿಗಳಿಗೆ ಈ ಸಾಲವು ಉಪಯೋಗವಾಗಲಿದೆ, ಹಣಕಾಸು ತೊಂದರೆಯಿಂದ ಓದಿಗೆ ತೊಂದರೆ ಆಗುವುದನ್ನು ಈ ಯೋಜನೆಯು ತಪ್ಪಿಸಲಿದೆ.
ಪಿಎಂ ವಿದ್ಯಾಲಕ್ಷ್ಮೀ(PM Vidya Lakshmi) ಯೋಜನೆ ಅಡಿಯಲ್ಲಿ ಹಲವು ಬ್ಯಾಂಕುಗಳಿಂದ ಸಾಲ ಸಿಗಲಿದೆ, ಉನ್ನತ ಶಿಕ್ಷಣದ ಕೋರ್ಸ್ ಭಾರತದಲ್ಲಿಯಾದರೆ ಏಳೂವರೆ ಲಕ್ಷ ರೂವರೆಗೂ ಸಾಲವನ್ನು ಪಡೆಯಬಹುದು, ವಿದೇಶಗಳಲ್ಲಿ ಓದುವುದಾದರೆ 15 ಲಕ್ಷ ರೂವರೆಗೆ ಸಾಲವನ್ನು ಸರ್ಕಾರವು ನೀಡುತ್ತದೆ.
ಈ ಯೋಜನೆ ಅಡಿಯಲ್ಲಿ 22 ವಿಧದ ಬಗೆಯ ಶಿಕ್ಷಣ ಸಾಲಗಳು ಸಿಗಲಿದೆ, ದೇಶದ 14 ಬ್ಯಾಂಕುಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅಂದರೆ ಈ 14 ಬ್ಯಾಂಕುಗಳಲ್ಲಿ ನೀವು ಸಾಲವನ್ನು ಪಡೆಯಬಹುದು. ಸಾಲವನ್ನು ಒದಗಿಸುವ ಬ್ಯಾಂಕಗಳ ಮಾಹಿತಿ ಕೆಳಗಿನಂತಿವೆ.
ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಒದಗಿಸುವ ಬ್ಯಾಂಕುಗಳಿವು;
- Canara Bank
- Bank of India
- IDBI Bank
- ಅಭ್ಯುದಯ ಬ್ಯಾಂಕ್
- Axis Bank
- GP parsik Bank
- HDFC Bank
- ICICI Bank
- Dena Bank
- Kotak Mahindra Bank
- Allahabad Bank
- Karnataka Bank
- Punjab National Bank
- ದೊಂಬಿವಿಲಿ ನಗರಿ ಸಹಕಾರಿ ಬ್ಯಾಂಕ್
ವಿದ್ಯಾಲಕ್ಷ್ಮೀ ಶಿಕ್ಷಣ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:
ಅಭ್ಯರ್ಥಿಯು 12+ ಅಥವಾ ದ್ವಿತೀಯ ಪಿಯು ಮುಗಿಸಿರಬೇಕು, ಪದವಿ, ಮಾಸ್ಟರ್ಸ್ ಇತ್ಯಾದಿ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿರಬೇಕು. ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಕೆಳಕಂಡಂತಿವೆ;
https://vidyalakshmi.co.in/Students/
ಮೇಲೆ ಕಾಣಿಸಿದ ಅಧಿಕೃತ ವೆಬ್ಸೈಟ್ನಲ್ಲಿ, ರಿಜಿಸ್ಟರ್ ಮಾಡಿಕೊಂಡು ಕಾಮನ್ ಎಜುಕೇಶನ್ ಲೋನ್ ಅಪ್ಲಿಕೇಶನ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಈ ಸಾಲಕ್ಕೆ ಬಡ್ಡಿದರವು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ವ್ಯತ್ಯಾಸ ಇರುತ್ತದೆ, ಸಾಮಾನ್ಯವಾಗಿ ಪರ್ಸನಲ್ ಲೋನ್ಗಿಂತ(Personal loan)ಕಡಿಮೆ ಬಡ್ಡಿ ಸಿಗಲಿದೆ. ಜನಸಮರ್ಥ್ ವೆಬ್ಸೈಟ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ನಿಮಗೆ ಒಂದಷ್ಟು ಡಿಸ್ಕೌಂಟ್ ಕೂಡಾ ಸಿಗಲಿದೆ, ಇದಕ್ಕೆ ಅರ್ಜಿ ಸಲ್ಲಿಸಲು ಪೋಷಕರ ಆದಾಯವು ವಾರ್ಷಿಕವಾಗಿ ನಾಲ್ಕುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು.